ETV Bharat / state

ಲಾಕ್​​ಡೌನ್ ಉಲ್ಲಂಘಿಸಿ ಭದ್ರತಾ ಸಿಬ್ಬಂದಿಗೆ ನಿಂದನೆ: ಆರೋಪಿ ಬಂಧನ ಬಿಡುಗಡೆ - ವ್ಯಕ್ತಿ ವಿರುದ್ಧ ತುಮಕೂರು ತಹಶೀಲ್ದಾರ್​​ ದೂರು

ಲಾಕ್​​ಡೌನ್ ಆದೇಶ ಉಲ್ಲಂಘನೆ ಮಾಡಿದ್ದಲ್ಲದೇ ಗೃಹ ರಕ್ಷಕ ಮಹಿಳಾ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿಗೆ ವ್ಯಕ್ತಿಯೊಬ್ಬ ನಿಂದಿಸಿದ ಆರೋಪ ಕೇಳಿ ಬಂದಿದೆ.

man breaked lockdown in tumkur
ಗೃಹ ರಕ್ಷಕ ಮಹಿಳಾ ಸಿಬ್ಬಂದಿಗೆ ನಿಂದನೆ
author img

By

Published : Apr 3, 2020, 7:16 PM IST

ತುಮಕೂರು: ಲಾಕ್​​ಡೌನ್ ಉಲ್ಲಂಘಿಸಿ ಕರ್ತವ್ಯ ನಿರತ ಗೃಹ ರಕ್ಷಕ ಮಹಿಳಾ ಸಿಬ್ಬಂದಿ, ಕಂದಾಯ ಇಲಾಖಾ ಸಿಬ್ಬಂದಿಗೆ ನಿಂದಿಸಿದ ವ್ಯಕ್ತಿಗೆ ತುರುವೇಕೆರೆ ನ್ಯಾಯಾಲಯವು 50 ಸಾವಿರ ರೂ. ಶೂರಿಟಿ ತೆಗೆದುಕೊಂಡು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.

ಗೃಹ ರಕ್ಷಕ ಮಹಿಳಾ ಸಿಬ್ಬಂದಿಗೆ ನಿಂದನೆ

ಅಲ್ಲದೇ ಕೊರೊನಾ ವೈರಸ್ ಭೀತಿ ಹಿನ್ನೆಲೆ ಹೈಕೋರ್ಟ್ ನಿರ್ದೇಶನದಂತೆ ಏಪ್ರಿಲ್ 20ರಂದು 50 ಸಾವಿರ ರೂ ಶೂರಿಟಿ ಬಾಂಡ್ ನೀಡುವಂತೆ ಆದೇಶಿಸಿದೆ. ತುರುವೇಕೆರೆಯ ಲೋಕಮ್ಮನಹಳ್ಳಿಯ ಮಲ್ಲಿಕಾರ್ಜುನ್ ಎಂಬಾತ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ತುರುವೇಕೆರೆ ಪೊಲೀಸ್ ಠಾಣೆಗೆ ಇಂದು ಬೆಳಗ್ಗೆ ದೂರು ನೀಡಿದ್ದರು.

ತುರುವೇಕೆರೆ ಪಟ್ಟಣದ ದಬ್ಬೇಘಟ್ಟ ರಸ್ತೆ ಕೆಇಬಿ ಕಚೇರಿ ಬಳಿ ಆರೋಪಿಯು ಕೊರೊನಾ ವೈರಸ್ ಜಾಗೃತಿ ಮೂಡಿಸುತ್ತಿದ್ದ ಸಿಬ್ಬಂದಿಯೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದ. ಕಾರು ನಿಲ್ಲಿಸುವಂತೆ ತಡೆದಿದಕ್ಕೆ ಆಕ್ರೋಶಗೊಂಡು ಸಿಬ್ಬಂದಿಗೆ ಆವಾಜ್ ಹಾಕಿದ್ದ. ತುರುವೇಕೆರೆ ಪೊಲೀಸರು ಈತನನ್ನು ಬಂಧಿಸಿ ಇಂದು ತುರುವೇಕೆರೆ ಹಿರಿಯ ನ್ಯಾಯಾಧೀಶರ ಹೋಮ್ ಆಫೀಸ್ ಗೆ ಹಾಜರುಪಡಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.