ETV Bharat / state

ಮಧುಗಿರಿಗೆ ಭರಪೂರ ಅನುದಾನ... ಬಿಜೆಪಿ ಶಾಸಕರ ತಾರತಮ್ಯ ಆರೋಪಕ್ಕೆ ಸಿಕ್ತು ಇನ್ನಷ್ಟು ಪುಷ್ಟಿ - Tumakuru

ಮಧುಗಿರಿ ಕ್ಷೇತ್ರಕ್ಕೆ 874.81 ಕೋಟಿ ರೂ ಅನುದಾನ ಹರಿದು ಬಂದಿದ್ದು, ಇದೆಲ್ಲಾ ಮುಖ್ಯಮಂತ್ರಿ ಕುಮಾರಣ್ಣನ ಸಹಕಾರ ಎಂದು ಮಧುಗಿರಿ ಶಾಸಕ ಎಚ್.ವಿ.ವೀರಭದ್ರಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ವೀರಭದ್ರಯ್ಯ ಅವರ ಹೇಳಿಕೆಯಿಂದ ಅನುದಾನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಬಿಜೆಪಿ ಶಾಸಕರ ಆರೋಪಕ್ಕೆ ಪುಷ್ಟಿ ಸಿಕ್ಕಂತಾಗಿದೆ.

ಮಧುಗಿರಿಗೆ ಭರಪೂರ ಅನುದಾನ...ಬೆನ್ತಟ್ಟಿಕೊಂಡ ಶಾಸಕ ವೀರಭದ್ರಯ್ಯ
author img

By

Published : Jun 20, 2019, 11:58 AM IST

ತುಮಕೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕೇವಲ ಜೆಡಿಎಸ್‌ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂಬ ಬಿಜೆಪಿ ಶಾಸಕರ ಮಾತುಗಳು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಮಧುಗಿರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಜೆಡಿಎಸ್ ಶಾಸಕ ವೀರಭದ್ರಯ್ಯ ಈ ಬಾರಿ ನಿರೀಕ್ಷೆಗೂ ಮೀರಿ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇನೆ ಎಂದಿದ್ದಾರೆ.

ಮಧುಗಿರಿಗೆ ಭರಪೂರ ಅನುದಾನ...ಬೆನ್ತಟ್ಟಿಕೊಂಡ ಶಾಸಕ ವೀರಭದ್ರಯ್ಯ

ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರವನ್ನು ಕಡೆಗಣನೆ ಮಾಡಲಾಗಿದೆ ಎಂಬ ಆರೋಪಕ್ಕೆ ಪುಷ್ಟಿಕರಿಸುವಂತೆ ಜೆಡಿಎಸ್ ಶಾಸಕರಿರುವ ಮಧುಗಿರಿ ಕ್ಷೇತ್ರಕ್ಕೆ ಅನುದಾನಗಳ ಮಹಾಪೂರವೇ ಹರಿದು ಬಂದಿದೆ. 874.81 ಕೋಟಿ ರೂ ಅನುದಾನ ಮಧುಗಿರಿ ಕ್ಷೇತ್ರಕ್ಕೆ ಹರಿದು ಬಂದಿದ್ದು, ಇದೆಲ್ಲಾ ಮುಖ್ಯಮಂತ್ರಿ ಕುಮಾರಣ್ಣನ ಸಹಕಾರ ಎಂದು ವೀರಭದ್ರಯ್ಯ ಸಂತಸ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎತ್ತಿನ ಹೊಳೆ ಯೋಜನೆಗೆ 410 ಕೋಟಿ, ಲೋಕೋಪಯೋಗಿ ಇಲಾಖೆಗೆ 215 ಕೋಟಿ, ಪುರವರ ಬಳಿಯ ಜಯಮಂಗಲಿ ನದಿ ಸೇತುವೆಗೆ 15 ಕೋಟಿ ರೂ.ಅನುದಾನ ನೀಡಲಾಗಿದೆ.

ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿರುವ ನಾಲ್ಕು ಕ್ಷೇತ್ರಕ್ಕೆ ಅನುದಾನವೇ ಬರುತ್ತಿಲ್ಲ ಎಂದು ಒಂದೆಡೆ ಅಸಮಾಧಾನ ವ್ಯಕ್ತಪಡಿಸಿರುತ್ತಿರುವ ಬೆನ್ನಲ್ಲೇ, ಮಧುಗಿರಿ ಜೆಡಿಎಸ್ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ತರುವಲ್ಲಿ ಸಫಲರಾಗಿದ್ದಾರೆ.

Intro:ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಭದ್ರ ಬುನಾದಿಗೆ ಜೆಡಿಎಸ್ ಯತ್ನ....
ನಿರೀಕ್ಷೆಗೂ ಮೀರಿ ಅನುದಾನ ತಂದಿರುವೆ ಎನ್ನುತ್ತಿರೋ ಶಾಸಕ ವೀರಭದ್ರಯ್ಯ....

ತುಮಕೂರು
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕೇವಲ ಜೆ.ಡಿ.ಎಸ್‌ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂಬ ಬಿಜೆಪಿ ಶಾಸಕರ ಮಾತುಗಳು ಆಗಾಗ್ಗೆ ಕೇಳಿಬರುತ್ತಲೇ ಇರುತ್ತದೆ.
ಇನ್ನು ಮಧುಗಿರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಜೆಡಿಎಸ್ ಶಾಸಕ ವೀರಭದ್ರಯ್ಯ ಈ ಬಾರಿ ನಿರೀಕ್ಷೆಗೂ ಮೀರಿ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾನೆ ಎಂದಿದ್ದಾರೆ.
ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರವನ್ನು ಕಡೆಗಣನೆ ಮಾಡಲಾಗಿದೆ ಎಂಬ ಆರೋಪಕ್ಕೆ ಪುಷ್ಠಿಕರಿಸುವಂತೆ ಜೆ.ಡಿ.ಎಸ್ ಶಾಸಕರಿರುವ ಮಧುಗಿರಿ ಕ್ಷೇತ್ರಕ್ಕೆ ಅನುದಾನಗಳ ಮಹಾಪೂರವೇ ಹರಿದು ಬಂದಿದೆ.
874.81 ಕೋಟಿ ರೂ. ಅನುದಾನ ಮಧುಗಿರಿ ಕ್ಷೇತ್ರಕ್ಕೆ ಹರಿದು ಬಂದಿದ್ದು ಇದೆಲ್ಲಾ ಮುಖ್ಯಮಂತ್ರಿ ಕುಮಾರಣ್ಣನ ಸಹಕಾರ ಎಂದು ಮಧುಗಿರಿ ಶಾಸಕ ಎಚ್.ವಿ.ವೀರಭದ್ರಯ್ಯ ಸಂತಸ ವ್ಯಕ್ತಪಡಿಸುತ್ತಿದ್ದು ಜಿಲ್ಲೆಯ ಬಿಜೆಪಿ ಶಾಸಕರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಅದೇ ರೀತಿ ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎತ್ತಿನ ಹೊಳೆ ಯೋಜನೆಗೆ 410 ಕೋಟಿ, ಲೋಕೋಪಯೋಗಿ ಇಲಾಖೆಗೆ 215 ಕೋಟಿ, ಪುರವರ ಬಳಿಯ ಜಯಮಂಗಲಿ ನದಿ ಸೇತುವೆಗೆ 15 ಕೋಟಿ ರೂ. ಅನುದಾನ ಹರಿದು ಬಂದಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿರುವ ನಾಲ್ಕು ಕ್ಷೇತ್ರಕ್ಕೆ ಅನುದಾನವೇ ಬರುತ್ತಿಲ್ಲ ಎಂದು ಒಂದೆಡೆ ಅಸಮಾಧಾನ ವ್ಯಕ್ತಪಡಿಸಿರುತ್ತಿರುವ ಬೆನ್ನಲ್ಲೆ ಮಧುಗಿರಿ ಜೆಡಿಎಸ್ ಶಾಸಕರು ತಮ್ಮ‌ ಕ್ಷೇತ್ರಕ್ಕೆ ಅನುದಾನ ತರುವಲ್ಲಿ ಸಫಲರಾಗಿದ್ದಾರೆ.

ಇನ್ನೊಂದೆಡೆ ಇತ್ತೀಚೆಗೆ ನಡೆದ ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಸಾಕಷ್ಟು ಹಿನ್ನಡೆ ಆಗಿದ್ದಂತಹ ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗಿರುವುದು ಸಾಕಷ್ಟು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಒಟ್ಟಾರೆ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ವೀರಭದ್ರಯ್ಯ ಮಾತ್ರ ಕ್ಷೇತ್ರದ ಅಭಿವೃದ್ಧಿಗಾಗಿ ಹಿಂದೆಂದಿಗಿಂತಲೂ ಹೆಚ್ಚಿನ ಹಣ ತರುವಲ್ಲಿ ಸಫಲವಾಗಿದ್ದೇನೆ ಎಂದು ಹೇಳುತ್ತಿರುವುದು ಜೆಡಿಎಸ್ ಈ ಕ್ಷೇತ್ರದಲ್ಲಿ ಭದ್ರ ಬುನಾದಿ ಹಾಕುವ ಸರ್ವ ತಯಾರಿಯಲ್ಲಿದೆ ಎಂದೇ ಹೇಳಬಹುದಾಗಿದೆ.Body:TumakuruConclusion:

For All Latest Updates

TAGGED:

Tumakuru
ETV Bharat Logo

Copyright © 2025 Ushodaya Enterprises Pvt. Ltd., All Rights Reserved.