ತುಮಕೂರು: ಭಾರತ್ ಬಂದ್ ಕಾರಣ ಕೆಎಸ್ಆರ್ಟಿಸಿ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ನಿಗಮದ ತುಮಕೂರು ವಿಭಾಗಕ್ಕೆ 10,50,438 ರೂ. ನಷ್ಟ ಸಂಭವಿಸಿದೆ.
ನಿತ್ಯ ತುಮಕೂರು ಕೆಎಸ್ಆರ್ಟಿಸಿ ವಿಭಾಗದಿಂದ ರಾಜ್ಯದ ವಿವಿಧೆಡೆ 465 ಬಸ್ಗಳ ಸಂಚಾರ ಇರುತ್ತಿತ್ತು. ಈ ಪೈಕಿ ನಿನ್ನೆ ತುಮಕೂರು ಹಾಗೂ ಬೆಂಗಳೂರು ನಡುವೆ 160 ಬಸ್ಗಳು ಸಂಚರಿಸಬೇಕಿತ್ತು. ಬಂದ್ ಕಾರಣ ಈ ಮಾರ್ಗದ ಬಸ್ ಸಂಚಾರದಲ್ಲಿ ಸಾಕಷ್ಟು ವ್ಯತ್ಯಯ ಉಂಟಾಗುವುದರ ಜೊತೆಗೆ ಪ್ರಯಾಣಿಕರ ಸಂಖ್ಯೆ ಕೂಡ ಅತಿ ವಿರಳವಾಗಿತ್ತು. ಹೀಗಾಗಿ ಇವುಗಳ ಪೈಕಿ ಕೇವಲ 118 ಬಸ್ಗಳು ಮಾತ್ರ ಬೆಂಗಳೂರಿಗೆ ಸಂಚರಿಸಿವೆ. ಉಳಿದಂತೆ 42 ಬಸ್ಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.
ಓದಿ: ತುಮಕೂರು ನಗರದಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ತುಮಕೂರು-ಬೆಂಗಳೂರು ಮಾರ್ಗದ 42 ಬಸ್ ಸೇರಿದಂತೆ ನಿನ್ನೆ 123 ಬಸ್ಗಳ ಸಂಚಾರ ಸ್ಥಗಿತಗೊಂಡಿತ್ತು.