ETV Bharat / state

ಖಾಸಗಿ ಕಂಪನಿಗಳು ಹಾಗೂ ಹೆಚ್​ಎಎಲ್​ನಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡದಿದ್ದರೆ ಲೈಸೆನ್ಸ್ ರದ್ದು: ಸಚಿವ ಪರಮೇಶ್ವರ್

ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶಗಳನ್ನು ನೀಡುತ್ತಿಲ್ಲ ಎಂಬ ಸಾಕಷ್ಟು ದೂರುಗಳು ಈಗಾಗಲೇ ಬಂದಿದೆ ಎಂದು ಜಿ. ಪರಮೇಶ್ವರ್ ಹೇಳಿದರು.

ಸಚಿವ ಡಾ. ಜಿ ಪರಮೇಶ್ವರ್
ಸಚಿವ ಡಾ. ಜಿ ಪರಮೇಶ್ವರ್
author img

By

Published : May 22, 2023, 8:47 PM IST

Updated : May 22, 2023, 11:01 PM IST

ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡದಿದ್ದರೆ ಲೈಸೆನ್ಸ್ ರದ್ದು

ತುಮಕೂರು : ಜಿಲ್ಲೆಯಲ್ಲಿರುವ ಖಾಸಗಿ ಕಂಪನಿಗಳು ಹಾಗೂ ಹೆಚ್​ಎಎಲ್ ಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕೊಡದಿದ್ದರೆ ಅವರ ಲೈಸೆನ್ಸ್ ಅನ್ನು ರದ್ದು ಮಾಡುತ್ತೇವೆ ಎಂದು ನೂತನ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುವ ವೇಳೆ ಅವರು ಈ ಎಚ್ಚರಿಕೆಯನ್ನು ನೀಡಿದ್ದಾರೆ.

ಖಾಸಗಿ ಕಂಪನಿಗಳು, ಹೆಚ್​ಎಎಲ್​ನಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ನೀಡಬೇಕು ಎಂಬ ಆದೇಶ ಇದೆ. ಆದರೆ, ನಮ್ಮ ಜಿಲ್ಲೆಯ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶಗಳನ್ನು ನೀಡುತ್ತಿಲ್ಲ ಎಂಬ ಸಾಕಷ್ಟು ದೂರುಗಳು ಈಗಾಗಲೇ ಬಂದಿವೆ. ಈ ಕುರಿತಂತೆ ಚಿಂತನೆ ನಡೆಸಿ ಅಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಂಪನಿಗಳಗೆ ನೀಡಿರುವ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಜಿ. ಪರಮೇಶ್ವರ್ ಅವರು, ಅವಕಾಶ ವಂಚಿತ ಉದ್ಯೋಗಿಗಳಿಗೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ : 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ದರಾಮಯ್ಯ: ಕಾರ್ಯಕ್ರಮದ ಅವಿಸ್ಮರಣಿಯ ಭಾವಚಿತ್ರಗಳಿಲ್ಲಿವೆ

2023 ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸಂಪೂರ್ಣ ಬಹುಮತದಿಂದ ಆರಿಸಿ ಬಂದು ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದೆ. ಅಲ್ಲದೇ ಸ್ಥಳೀಯ ಯುವಕರು ಉದ್ಯೋಗ ದೊರೆಯುತ್ತಿಲ್ಲ ಎಂಬ ಆತಂಕ ಪಡಬಾರದು ಎಂಬ ಭರವಸೆಯನ್ನು ಜಿ ಪರಮೇಶ್ವರ್ ಇದೇ ವೇಳೆ ನಿರುದ್ಯೋಗಿ ಯುವಕರಿಗೆ ಧೈರ್ಯ ತುಂಬಿದ್ದಾರೆ. ರಾಜ್ಯದ ವಿವಿಧಡೆ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ತಮ್ಮ ಮೇಲೆ ಒತ್ತಡ ಇತ್ತು. ಆದರೆ ನನಗೆ ನನ್ನ ಊರನ್ನು ಬಿಟ್ಟು ಹೋಗಲು ಮನಸ್ಸು ಬರಲಿಲ್ಲ. ಹೀಗಾಗಿ ನಾನು ಬೆಳೆದು ಬಂದಂತಹ ಊರು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಲಿ ಅಥವಾ ಸೋಲಲಿ ಇಲ್ಲೇ ಸ್ಪರ್ಧಿಸುತ್ತೇನೆ ಎಂದು ನಿರ್ಧರಿಸಿದೆ ಎಂದು ಜಿ ಪರಮೇಶ್ವರ ತಮ್ಮ ಊರಿನ ಮೇಲಿರುವ ಪ್ರೀತಿಯನ್ನು ತೋರಿಸಿದ್ದಾರೆ.

ಇದನ್ನೂ ಓದಿ : ಎರಡನೇ ಬಾರಿಗೆ ರಾಜ್ಯದ ಗದ್ದುಗೆ ಏರಿದ ಅಹಿಂದಾ ರಾಜಕಾರಣಿ: ಪಂಚ ಭರವಸೆ ಈಡೇರಿಸುವತ್ತ ಕಾಂಗ್ರೆಸ್​ ನೂತನ ಸಿಎಂ ಚಿತ್ತ..

ನಾನು ಯುವಕನಾಗಿದ್ದಾಗ ತುಮಕೂರು ನಗರದ ಜೂನಿಯರ್ ಕಾಲೇಜು ಗ್ರೌಂಡ್​ನಲ್ಲಿ ಅಥ್ಲೆಟಿಕ್ಸ್​ನಲ್ಲಿ ಪಾಲ್ಗೊಳ್ಳಲು ಅಭ್ಯಾಸ ಮಾಡುತ್ತಿದ್ದೆ. ಅಲ್ಲಿಂದ ನಾನು ಬೆಂಗಳೂರಿಗೆ ಹೋದೆ ನಂತರ ಬೆಂಗಳೂರಿನಿಂದ ಆಸ್ಟ್ರೇಲಿಯಕ್ಕೆ ಹೋದೆ ಆನಂತರ ವಾಪಸ್ ನಾನು ನನ್ನ ಊರು ತುಮಕೂರಿಗೆ ಬಂದು ಸೇರಿದ್ದೇನೆ. ಎಲ್ಲೆಲ್ಲೂ ಹೋಗಿ ಬಂದಿದ್ದೇನೆ ಏನು ಮಾಡಲು ಆಗಲಿಲ್ಲ. ಹಾಗಾಗಿ ವಾಪಸ್ ತುಮಕೂರು ಹೊರವಲಯದ ಗೊಲ್ಲಳ್ಳಿಗೆ ಬಂದು ಸೇರಿದ್ದೇನೆ. ಈ ಮೂಲಕ ತುಮಕೂರು ಜನರ ಪ್ರೀತಿ ವಿಶ್ವಾಸವನ್ನು ನಾನು ಕಳೆದುಕೊಳ್ಳಲು ಇಷ್ಟಪಡಲಿಲ್ಲ. ಆದರಿಂದ ಇಲ್ಲೇ ಚುನವಾಣೆಗೆ ಸ್ಪರ್ಧೆ ಮಾಡಿದೆ ಎಂದು ಜಿ ಪರಮೇಶ್ವರ್ ಅವರು ಹೇಳಿದರು.

ಇದನ್ನೂ ಓದಿ : ಹಿಂದೆ ಸ್ಪೀಕರ್​ ಆಗಿದ್ದವರಿಗೆಲ್ಲ ಸೋಲು.. ಇಲ್ಲಿದೆ ವಿಧಾನಸಭಾಧ್ಯಕ್ಷರಾಗಿ ಬಳಿಕ ಸೋತವರ ಮಾಹಿತಿ

Last Updated : May 22, 2023, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.