ETV Bharat / state

ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ತನ್ನ ವಶಕ್ಕೆ ಪಡೆದು ಉಚಿತ ಚಿಕಿತ್ಸೆ ನೀಡಬೇಕು.. - Scam in Covid-19 Relief Fund

ಸಾಮಾನ್ಯ ವರ್ಗದ ಜನರು ವರ್ಷಪೂರ್ತಿ ದುಡಿದ ಹಣವನ್ನು ಚಿಕಿತ್ಸೆಗೆ ವ್ಯಯಿಸಿದ್ರೆ ಅವರ ಜೀವನ ಸಾಗಿಸಲು ಸಾಧ್ಯವಾಗುವುದಿಲ್ಲ..

lava
ಎಐವೈಎಫ್ ನ ಜಿಲ್ಲಾ ಸಂಚಾಲಕ ಲವ
author img

By

Published : Jul 10, 2020, 8:08 PM IST

ತುಮಕೂರು : ರಾಜ್ಯದಲ್ಲಿರುವ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ಕೂಡಲೇ ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡು ಕೊರೊನಾ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು. ಕೋವಿಡ್-19 ಪರಿಹಾರ ನಿಧಿಯಲ್ಲಿ ಹಗರಣ ನಡೆದಿದೆ ಎಂದು ರಾಜ್ಯದ ವಿರೋಧ ಪಕ್ಷ ಆರೋಪಿಸುತ್ತಿದೆ. ಈ ಬಗ್ಗೆ ಕಾನೂನಿನ ಮೂಲಕ ತನಿಖೆ ನಡೆಯಬೇಕಿದೆ ಎಂದು ಎಐವೈಎಫ್‌ನ ಜಿಲ್ಲಾ ಸಂಚಾಲಕ ಲವ ಒತ್ತಾಯಿಸಿದರು.

ಎಐವೈಎಫ್‌ನ ಜಿಲ್ಲಾ ಸಂಚಾಲಕ ಲವ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ಈ ಕೂಡಲೇ ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡು, ಕೋವಿಡ್-19 ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು. ಯಾಕೆಂದರೆ, ಸಾಮಾನ್ಯ ವರ್ಗದವರನ್ನು ಕ್ವಾರಂಟೈನ್​​ ಮಾಡುವುದರಿಂದ ಒಂದರಿಂದ ಎರಡು ಲಕ್ಷದವರೆಗೆ ಪ್ರತಿಯೊಬ್ಬ ರೋಗಿಗೆ ಹಣ ಖರ್ಚಾಗುತ್ತಿದೆ. ಸಾಮಾನ್ಯ ವರ್ಗದ ಜನರು ವರ್ಷಪೂರ್ತಿ ದುಡಿದ ಹಣವನ್ನು ಚಿಕಿತ್ಸೆಗೆ ವ್ಯಯಿಸಿದ್ರೆ ಅವರ ಜೀವನ ಸಾಗಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಕೂಡಲೇ ಸರ್ಕಾರ ಎಚ್ಚೆತ್ತು ಖಾಸಗಿ ಆಸ್ಪತ್ರೆಗಳನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುವ ಮೂಲಕ ಕೋವಿಡ್-19 ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕೆಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.