ತುಮಕೂರು: ಪಾಳು ಬಾವಿಗೆ ಬಿದ್ದು ಹೊರ ಬರಲಾರದೆ ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ಮಂಚಿಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಬಸವರಾಜು ಅವರಿಗೆ ಸೇರಿದ ತೋಟದಲ್ಲಿನ ಪಾಳು ಬಾವಿಯಲ್ಲಿ ಇಂದು ಚಿರತೆ ಬಿದ್ದಿತ್ತು. ವಿಷಯ ತಿಳಿದು ಚಿರತೆ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದು ಅರವಳಿಕೆ ಚುಚ್ಚುಮದ್ದು ನೀಡಿದರು. ನಂತರ ಬಾವಿಗೆ ಇಳಿದು ಚಿರತೆಯನ್ನು ಮೇಲಕ್ಕೆತ್ತಿದರು. ಬಳಿಕ ಚಿರತೆಯನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಬೋನಿನಲ್ಲಿ ಇರಿಸಿ ತೆಗೆದುಕೊಂಡು ಹೋದರು.
ಕಾರ್ಯಾಚರಣೆಯಲ್ಲಿ ಗುಬ್ಬಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.