ETV Bharat / state

ತೆರೆಮರೆಗೆ ಸರಿಯಲಿದೆ ಐತಿಹಾಸಿಕ ಕುಣಿಗಲ್ ಕುದುರೆ ಫಾರಂ?

ತುಮಕೂರಿನ ಐತಿಹಾಸಿಕ ಫಾರ್ಮ್​ ಅನ್ನು ಶಿಕ್ಷಣ ಸಂಸ್ಥೆ ಅಥವಾ ಸರ್ಕಾರಿ ಸಂಸ್ಥೆಯಾಗಿ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

kunigal-horse-farm-to-be-an-educational-institution
ಶಿಕ್ಷಣ ಸಂಸ್ಥೆಯಾಗಲಿರುವ ಕುಣಿಗಲ್ ಕುದುರೆ ಫಾರ್ಮ್
author img

By

Published : Dec 8, 2022, 2:07 PM IST

Updated : Dec 8, 2022, 2:59 PM IST

ತುಮಕೂರು: ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿರುವ ಕುದುರೆ ಸ್ಟಡ್ ಫಾರಂ ಇತಿಹಾಸದ ಪುಟದಲ್ಲಿ ತೆರೆಮರೆಗೆ ಸರಿಯುವ ಸ್ಪಷ್ಟ ಲಕ್ಷಣಗಳು ಕಂಡು ಬರುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ಸರ್ಕಾರ ಆ ಸ್ಥಳದಲ್ಲಿ ಅದನ್ನು ಅಭಿವೃದ್ಧಿಪಡಿಸುವುದಕ್ಕಿಂತ ಬದಲಾಗಿ ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ಚಿಂತನೆ ನಡೆಸಿರುವುದು ಕಂಡು ಬರುತ್ತದೆ.

ಕುಣಿಗಲ್ ಪಟ್ಟಣದಲ್ಲಿ ಫಾರ್ಮ್​ಗೆ ನೀಡಿದ ಜಾಗದ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದು, ಆ ಸ್ಥಳದಲ್ಲಿ ಶಿಕ್ಷಣ ಸಂಸ್ಥೆ, ಇಲ್ಲವೇ ದೊಡ್ಡದೊಂದು ಸರ್ಕಾರಿ ಸಂಸ್ಥೆ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. 'ಸ್ಟಡ್ ಫಾರ್ಮ್​ಗೆ ನೀಡಿರುವ ಜಾಗವನ್ನು ಉಳಿಸಿಕೊಳ್ಳಲಾಗುವುದು. ಅದನ್ನು ಅನ್ಯರ ಪಾಲಾಗದಂತೆ ನೋಡಿಕೊಂಡು ಸಂಸ್ಥೆಯೊಂದನ್ನು ನಿರ್ಮಿಸಲಾಗುವುದು' ಎಂದು ಹೇಳಿದ್ದಾರೆ.

2022ಕ್ಕೆ ಗುತ್ತಿಗೆ ಅವಧಿ ಮುಕ್ತಾಯ: ಟಿಪ್ಪು ಸುಲ್ತಾನ ಕಾಲದಿಂದಲೂ ಇಲ್ಲಿ ಕುದುರೆಗಳನ್ನು ಪಳಗಿಸಲಾಗುತ್ತಿತ್ತು. ಸ್ವಾತಂತ್ರ್ಯ ನಂತರ ಈ ಸ್ಥಳ ಬೆಂಗಳೂರಿನ ಟರ್ಫ್‌ ಕ್ಲಬ್‌ ವಶಕ್ಕೆ ಒಳಪಟ್ಟಿತ್ತು. ರಾಜ್ಯ ಸರ್ಕಾರಕ್ಕೆ ಸೇರಿದ 430 ಎಕರೆಯ ಫಾರ್ಮ್ ಅವನ್ನು 1992ರಲ್ಲಿ ಮಲ್ಯ ಟೆಂಡರ್‌ನಲ್ಲಿ 30 ವರ್ಷ ಗುತ್ತಿಗೆ ಪಡೆದಿದ್ದರು. 2022ಕ್ಕೆ ಈ ಗುತ್ತಿಗೆ ಮುಗಿಯಲಿದೆ.

ಶಿಕ್ಷಣ ಸಂಸ್ಥೆಯಾಗಲಿರುವ ಕುಣಿಗಲ್ ಕುದುರೆ ಫಾರ್ಮ್

1970ರಲ್ಲಿ ಇಲ್ಲಿನ ಫಾರಂನ ಕಿಂಬಲರ್ ಹೆಸರಿನ ಕುದುರೆ ರೇಸ್‌ ವಿಶ್ವಕಪ್ ಗೆದ್ದಿತ್ತು. ಸದ್ಯ ಅಮೆರಿಕದ ಏರ್ ಸಪರ್ಟ್ ತಳಿ ಕುದುರೆ ಫಾರ್ಮ್​ನ ಪ್ರಮುಖ ತಳಿಯಾಗಿದೆ. ಪ್ಯಾಂಟಾಬುಲಸ್ ಕಿಂಗ್ ಹೆಸರಿನ ಕುದುರೆ ಬೆಂಗಳೂರು ಡರ್ಬಿ, ಪ್ಲೀಟಿಂಗ್ ಇಂಡಿಯನ್ ಹೆಸರಿನ ಕುದುರೆ ಮೈಸೂರು ಡರ್ಬಿ ಹಾಗೂ ಅರೇಬಿಯಾ ಪ್ರಿನ್ಸ್ ಹೈದರಾಬಾದ್ ಡರ್ಬಿಯಲ್ಲಿ ಅಗ್ರ ಸ್ಥಾನ ಪಡೆದಿವೆ. ಮಲೇಶಿಯಾ ಮತ್ತು ಸಿಂಗಪುರದ ಟಿಂಕೋ ಗೋಲ್ಡ್ ಕಪ್ ಸ್ಪರ್ಧೆಯಲ್ಲಿ ಕುಣಿಗಲ್ ಕುದುರೆಗಳು ವಿಜಯ ಪತಾಕೆ ಹಾರಿಸಿವೆ. ಕುದುರೆ ತಳಿಗಳಿಗೆ ಬೇಡಿಕೆ ಕಡಿಮೆ ಇರುವುದರಿಂದ ಅಭಿವೃದ್ಧಿ ಪಡಿಸಲೂ ಸರ್ಕಾರ ಇಚ್ಛೆ ತೋರುತ್ತಿಲ್ಲ.

ಈ ಕುದುರೆ ಫಾರ್ಮ್ ತಾಲೂಕಿಗೆ ಒಂದು ಹೆಮ್ಮೆಯಂತಿತ್ತು. ವಿಶೇಷ ಕುದುರೆ ತಳಿಯ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇಲ್ಲಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ವಿವಿಧ ಕುದುರೆ ತಳಿಯ ಅಭಿವೃದ್ಧಿಗೆ ಚಿಂತನೆ ನಡೆಸಬೇಕಿದೆ. ಹಸುಗಳ ಅಭಿವೃದ್ಧಿಗೆ ಗಮನ ಹರಿಸಿದಂತೆ ಕುದುರೆಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡ ಬೇಕು ಎಂದು ಪ್ರಾಣಿ ಪ್ರಿಯರಾದ ಕುಣಿಗಲ್ ವೆಂಕಟೇಶ್ ಹೇಳುತ್ತಾರೆ.

ಈ ಕುದುರೆ ಫಾರ್ಮ್ ಗುತ್ತಿಗೆ ಪಡೆದಿದ್ದ ವಿಜಯ ಮಲ್ಯ ವಿದೇಶಕ್ಕೆ ಪರಾರಿಯಾದ ನಂತರ ನಿರ್ವಹಣೆ ಬಗ್ಗೆ ಹೆಚ್ಚು ಗಮನ ಹರಿಸುವವರು ಇರಲಿಲ್ಲ. ಕಾರ್ಮಿಕರ ವೇತನ ಪಾವತಿ ವಿಳಂಬವಾಗುತ್ತಿದೆ. ಇನ್ನು ಸರ್ಕಾರ ಈ ಕುದುರೆ ಫಾರಂ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ತೆರೆಯಲು ಮುಂದಾಗಿರುವುದು ಗಾಬರಿ ಮೂಡಿಸಿದೆ. ಅಲ್ಲದೇ ಕುದುರೆ ಫಾರಂನಲ್ಲಿ ಕೆಲಸ ಮಾಡುತ್ತಿರುವ ಅರೆಕಾಲಿಕ ನೌಕರರ ನಡುವಿನ ಭಿನ್ನಾಭಿಪ್ರಾಯದಿಂದ ಗೊಂದಲ ಉಂಟಾಗಿದೆ ಎನ್ನುತ್ತಾರೆ ಫಾರ್ಮ ಸಿಬ್ಬಂದಿ ಲೋಕೇಶ್.

ಇದನ್ನೂ ಓದಿ: ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ: ಸಿಎಂ ಬಸವರಾಜ ಬೊಮ್ಮಾಯಿ

Last Updated : Dec 8, 2022, 2:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.