ETV Bharat / state

ಪರಿಹಾರ ನೀಡದೇ ಜಮೀನಿನಲ್ಲಿ ಕೆಪಿಟಿಸಿಎಲ್​ ಟವರ್; ರೈತ ಮಹಿಳೆಯಿಂದ ಪ್ರತಿಭಟನೆ

ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ಪೂರೈಕೆ ಟವರ್ ನಿರ್ಮಾಣದ ಬಗ್ಗೆ ತಿಳಿದಾಗ ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸುವಂತೆ ತಿಳಿಸಿದ್ದೇವೆ. ಆದರೆ ಕೋವಿಡ್ ಬಂದ ನಂತರ ನಮಗೆ ಯಾವುದೇ ಮಾಹಿತಿ, ಪರಿಹಾರ ನೀಡದೆ ದೌರ್ಜನ್ಯಯುತವಾಗಿ ಟವರ್ ನಿರ್ಮಾಣ ಮಾಡುತ್ತಿದ್ದು, ಕೂಡಲೇ ಸಂಬಂಧಪಟ್ಟವರು ಗಮನ ಹರಿಸಿ ಟವರ್ ತೆರವುಗೊಳಿಸುವಂತೆ ಒತ್ತಾಯಿಸಿದರು.

kptcl-build-the-tower-without-informing-former-women-protest-news
ಮಾಹಿತಿ ನೀಡದೆ ಟವರ್ ನಿರ್ಮಿಸಲು ಮುಂದಾದ ಕೆಪಿಟಿಸಿಎಲ್, ರೈತ ಮಹಿಳೆಯಿಂದ ಪ್ರತಿಭಟನೆ
author img

By

Published : Oct 30, 2020, 3:41 PM IST

ಪಾವಗಡ: ಯಾವುದೇ ಮಾಹಿತಿ ನೀಡದೇ ತನ್ನ ಜಮೀನಿನಲ್ಲಿ ಕೆಪಿಟಿಸಿಎಲ್ ಟವರ್ ನಿರ್ಮಾಣ ಕಾಮಗಾರಿಗೆ ಮುಂದಾಗಿದ್ದು, ಅದನ್ನು ತೆರವುಗೊಳಿಸುವಂತೆ ರೈತ ಮಹಿಳೆ ಪ್ರತಿಭಟನೆ ಮಾಡುತ್ತಿರುವ ಘಟನೆ ತಾಲೂಕಿನ ಅರೆಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಾಹಿತಿ ನೀಡದೆ ಟವರ್ ನಿರ್ಮಿಸಲು ಮುಂದಾದ ಕೆಪಿಟಿಸಿಎಲ್, ರೈತ ಮಹಿಳೆಯಿಂದ ಪ್ರತಿಭಟನೆ

ರೈತ ಮಹಿಳೆ ರಮಾ ಮಾತನಾಡಿ, ಸರ್ವೆ ನಂಬರ್ 148 ರಲ್ಲಿ ಮಾರ್ಚ್ ತಿಂಗಳಲ್ಲಿ ಕೆಪಿಟಿಸಿಎಲ್ ವತಿಯಿಂದ ವಿದ್ಯುತ್ ಪೂರೈಕೆ ಟವರ್ ನಿರ್ಮಾಣದ ಬಗ್ಗೆ ತಿಳಿದಾಗ ಸ್ಥಳಕ್ಕೆ ಭೇಟಿ ನೀಡಿ ನಿರ್ಮಾಣ ಕಾರ್ಯ ತೆರವುಗೊಳಿಸುವಂತೆ ತಿಳಿಸಿದ್ದೇವೆ. ಆದರೆ ಕೋವಿಡ್ ಬಂದ ನಂತರ ನಮಗೆ ಯಾವುದೇ ಮಾಹಿತಿ, ಪರಿಹಾರ ನೀಡದೆ ದೌರ್ಜನ್ಯಯುತವಾಗಿ ಟವರ್ ನಿರ್ಮಾಣ ಮಾಡುತ್ತಿದ್ದು, ಕೂಡಲೇ ಸಂಬಂಧಪಟ್ಟವರು ಗಮನ ಹರಿಸಿ ಟವರ್ ತೆರವುಗೊಳಿಸುವಂತೆ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಪೂಜಾರಪ್ಪ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ಮಾಡಿ ಟವರ್ ನಿರ್ಮಾಣ ಮಾಡುತ್ತಿದ್ದು, ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ರವರು ಇವರ ಮೇಲೆ ಕ್ರಮ ಕೈಗೊಂಡು ಸೂಕ್ತ ಪರಿಹಾರ ನೀಡಿ ಕಾಮಗಾರಿ ಮಾಡಬೇಕೆಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.