ETV Bharat / state

ಕರ್ನಾಟಕ 1000 ಕಾರು ರೇಸ್​.. ತುಮಕೂರಲ್ಲಿ ಧೂಳೆಬ್ಬಿಸಿದ ಸ್ಪರ್ಧೆ, ಪ್ರೇಕ್ಷಕರು ಖುಷ್​ - ಸಚಿವ ಜೆ ಸಿ ಮಾಧುಸ್ವಾಮಿ

ಕಾರ್ ರೇಸ್‌ನಲ್ಲಿ ಪ್ರಥಮ ಸ್ಥಾನ ಪಡೆದ ಕರ್ಣ ಕಡೂರು ಅವರಿಗೆ ಸಚಿವ ಜೆ ಸಿ ಮಾಧುಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು.

Karnataka 1000 Car race in Tumakur
ಕರ್ನಾಟಕ 1000 ಕಾರು ರೇಸ್
author img

By

Published : Dec 5, 2022, 9:19 AM IST

ತುಮಕೂರು: ಒಂದಕ್ಕಿಂತ ಒಂದು ಚಿರತೆಯ ವೇಗದಲ್ಲಿ ಭರ್ರನೇ ಆಳೆತ್ತರಕ್ಕೆ ಧೂಳೆಬ್ಬಿಸುತ್ತ ಚಲಿಸುತ್ತಿದ್ದವು. ಅವುಗಳನ್ನು ಕಂಡು ಕೆಲವರು ಜೋರಾಗಿ ಸಿಳ್ಳೆ, ಕೂಗು ಹಾಕಿದರೆ, ಹಲವರು ಚಪ್ಪಾಳೆ ತಟ್ಟಿ ಹುರುದುಂಬಿಸುತ್ತಿದ್ದರು. ಹೌದು, ಇದು ಗುಬ್ಬಿ ತಾಲೂಕು ವಿರೂಪಾಕ್ಷಿಪುರ ಬಳಿ ಶನಿವಾರ ಹಾಗೂ ಭಾನುವಾರ ಕರ್ನಾಟಕ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ 46ನೇ ಕರ್ನಾಟಕ ಕೆ. 1000 ಕಾರು ರೇಸ್‌ನಲ್ಲಿ ಕಂಡುಬಂದ ದೃಶ್ಯಗಳಿವು. ಪ್ರತಿ ವರ್ಷದಂತೆ ಈ ಬಾರಿಯೂ ಕಾರು ರೇಸ್ 2 ದಿನ ಪ್ರೇಕ್ಷಕರಿಗೆ ರಸದೌತಣ ನೀಡಿತು.

ಅದಲಗೆರೆ, ನಾಗಲಾಪುರ, ಬೊಮ್ಮರಸನಹಳ್ಳಿ, ಎತ್ತಿನಹೊಳೆ, ಶಿವಸಂದ್ರ ಹತ್ಯಾಳ್, ಕೊಂಡ್ಲಿ, ಭೋಗಸಂದ್ರದ ರಸ್ತೆಗಳಲ್ಲಿ ಝಗಮಗಿಸುತ್ತಿದ್ದ ನಾನಾ ಮಾಡೆಲ್‌ನ ಕಾರುಗಳ ವೇಗದ ಓಟ, ರಸ್ತೆ ತಿರುವಿನಲ್ಲಿಯೂ ಬಗೆಬಗೆಯ ಸೌಂಡ್ ಮಾಡಿಕೊಂಡು, ಧೂಳೆಬ್ಬಿಸಿಕೊಂಡು ಹೋಗುತ್ತಿದ್ದ ದೃಶ್ಯಗಳು ಮೈ ಜುಮ್ಮೆನಿಸುವಂತಿತ್ತು. ಇದನ್ನು ಹತ್ತಿರದಿಂದ ನೋಡುವುದೇ ಪ್ರೇಕ್ಷಕರಿಗೆ ಹಬ್ಬದ ವಾತಾವರಣ ಕಲ್ಪಿಸಿತ್ತು.

ರೇಸ್‌ನಲ್ಲಿ ಸುಮಾರು 72 ಕಾರುಗಳು ಭಾಗವಹಿಸಿದ್ದವು. ಮಹಿಳೆಯರೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಅಲ್ಲದೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡವರು ರೇಸ್‌ಗಿಳಿದಿದ್ದರು.

ಕಾರ್ ರೇಸ್‌ನಲ್ಲಿ ಪ್ರಥಮ ಸ್ಥಾನ ಪಡೆದ ಕರ್ಣ ಕಡೂರು ಅವರಿಗೆ ಸಚಿವ ಜೆ ಸಿ ಮಾಧುಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್‌ ಅಧ್ಯಕ್ಷ ಗೌತಮ್, ಉಪಾಧ್ಯಕ್ಷ ಭಾಸ್ಕರ್ ಗುಪ್ತ, ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್‌, ಮುಖಂಡರಾದ ನಂದೀಶ್, ಸತ್ಯವೃತ್ತ, ಪ್ರಕಾಶ್‌, ಜಗದೀಶ್ ಇದ್ದರು.

ಎಫ್​ಎಂಎಸ್​ಸಿಐ ಇಂಡಿಯನ್ ಕಾರ್ ರ‍್ಯಾಲಿ ಚಾಂಪಿಯನ್​ಶಿಪ್​ನಲ್ಲಿ ಆದ ಕೆಲವೊಂದು ತಾಂತ್ರಿಕ ತೊಂದರೆಯಿಂದ ಈ ಹಿಂದಿನ ರ‍್ಯಾಲಿಯ ಚಾಂಪಿಯನ್ ಗೌರವ್ ಗಿಲ್ ಈ ಬಾರಿ ಹಿಂದೆ ಸರಿದಿದ್ದಾರೆ. ಬೆಂಗಳೂರಿನ ಕರ್ಣ ಕಡೂರು ರ‍್ಯಾಲಿಯಲ್ಲಿ ಲೆಗ್ 1 ನಲ್ಲಿ ರೇಸ್​ ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಜಾಗೃತಿ ಮೂಡಿಸಲು ಪೊಲೀಸರ ಬೈಕ್ ರ‍್ಯಾಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.