ತುಮಕೂರು: ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ದೃಢ ನಿರ್ಧಾರದಿಂದ ದೇಶದ ಸೈನಿಕರು ಸತತ ಮೂರು ತಿಂಗಳುಗಳ ಕಾಲ ಹೋರಾಡಿ, ಕಾರ್ಗಿಲ್ನಲ್ಲಿ ವಿಜಯಪತಾಕೆ ಹಾರಿಸಿದರು. ಈ ವೇಳೆ ಅನೇಕ ಸೈನಿಕರು ವೀರ ಮರಣವನ್ನು ಹೊಂದಿದ್ದು, ಅವರ ತ್ಯಾಗ, ಬಲಿದಾನ ಸ್ಮರಣೀಯ ದಿನ. ಪ್ರತಿವರ್ಷವೂ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡುತ್ತಾ ದೇಶಾಭಿಮಾನ ಮತ್ತು ಸೈನಿಕರ ಸೇವೆ ಸ್ಮರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಕರ್ನಲ್ ಎ ಆರ್. ಹರೀಶ್ ಹೇಳಿದರು.
ತುಮಕೂರಿನಲ್ಲಿರುವ ನಾಲ್ಕನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ ಕಚೇರಿಯಲ್ಲಿ ಇಂದು ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಯುದ್ಧದಲ್ಲಿ ವೀರ ಮರಣ ಹೊಂದಿದ ಸೈನಿಕರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಕರ್ನಲ್ ಎ.ಆರ್. ಹರೀಶ್, ಕಾರ್ಗಿಲ್ನಲ್ಲಿ ನಮ್ಮ ಯೋಧರು ದಿಟ್ಟತನದಿಂದ ಹೋರಾಡಿ ಪಾಕಿಸ್ತಾನದ ಸೇನೆಯನ್ನು ಸದೆಬಡೆದು, ಪಾಕ್ ಕುತಂತ್ರಕ್ಕೆ ಆಸ್ಪದ ನೀಡದೆ ಶೌರ್ಯದಿಂದ ಹೋರಾಡಿದ್ದರಿಂದ ಕಾರ್ಗಿಲ್ನಲ್ಲಿ ವಿಜಯ ದೊರೆಯಿತು ಎಂದರು.
ದೇಶದ ಸೈನಿಕರು ಕೆಚ್ಚೆದೆಯಿಂದ ಸತತ ಮೂರು ತಿಂಗಳುಗಳ ಕಾಲ ಹೋರಾಡಿ ಕಾರ್ಗಿಲ್ನಲ್ಲಿ ವಿಜಯಪತಾಕೆ ಹಾರಿಸಿದರು. ಜೊತೆಗೆ ಎಷ್ಟೋ ಸೈನಿಕರು ವೀರ ಮರಣವನ್ನು ಹೊಂದಿದ್ದು, ಅವರ ತ್ಯಾಗ, ಬಲಿದಾನ ಸ್ಮರಣೀಯ. ಪ್ರತಿವರ್ಷವೂ ಕಾರ್ಗಿಲ್ ವಿಜಯ್ ದಿವಸ್ ಆಚರಣೆ ಮಾಡುತ್ತಾ ದೇಶಾಭಿಮಾನ ಮತ್ತು ಸೈನಿಕರ ಸೇವೆ ಸ್ಮರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು. ಇದೇ ವೇಳೆ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಭಾರತೀಯ ವೀರ ಸೈನಿಕರನ್ನು ಸನ್ಮಾನಿಸಲಾಯಿತು.