ತುಮಕೂರು: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೇವೆ. ಸಿದ್ದರಾಮಯ್ಯ ಮೇಲೆ ಹಲ್ಲೆ ಮಾಡಲು ಪ್ರತ್ಯಕ್ಷ, ಪರೋಕ್ಷವಾಗಿ ಕುಮ್ಮಕ್ಕು ಕೊಡೋದು ಕಂಡರೂ ಕೂಡಾ ಪ್ರತಿಭಟನೆ ಮಾಡ್ತೀವಿ ಎಂದು ಮಾಜಿ ಶಾಸಕ ಕೆ ಎನ್ ರಾಜಣ್ಣ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಸಮಾನ ಮನಸ್ಕರು ಸೇರಿ ಏನು ಮಾಡ್ಬೇಕು ಅಂತಾ ಕುಳಿತು ಚರ್ಚೆ ಮಾಡ್ತೀವಿ. ಮಾಡಿರೋ ತಪ್ಪನ್ನು ತಿದ್ದಿಕೊಂಡು ಮುಂದೆ ಹೋದ್ರೆ ಸರಿ. ಇಲ್ಲಾ ಮೊಟ್ಟೆನೇ ಎಸೀತೀವಿ ಅಂದ್ರೆ, ನಮ್ಮ ಕೈಗೆ ಏನ್ ಸಿಗುತ್ತೋ ಅದನ್ನೇ ಎಸೀತೀವಿ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ: ಕಾಂಗ್ರೆಸ್ ನಾಯಕರ ಪ್ರತಿಭಟನೆ