ETV Bharat / state

ಜೆಡಿಎಸ್ ತೊರೆದು ಗುಬ್ಬಿ ಹಿತರಕ್ಷಣಾ ಪಕ್ಷ ರಚನೆ : 9 ಮಂದಿ ಪಟ್ಟಣ ಪಂಚಾಯಿತಿ ಸದಸ್ಯರಿಂದ ಕಾಂಗ್ರೆಸ್​ಗೆ ಬೆಂಬಲ - ಈಟಿವಿ ಭಾರತ ಕನ್ನಡ

ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ವಿರುದ್ಧ ಅಸಮಾಧಾನದಿಂದ ಗುಬ್ಬಿ ಪಟ್ಟಣ ಪಂಚಾಯತಿಯ ಜೆಡಿಎಸ್ ಸದಸ್ಯರು ಕಾಂಗ್ರೆಸ್​ ಅಭ್ಯರ್ಥಿಗೆ ಬಹಿರಂಗ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಗುಬ್ಬಿ ಹಿತರಕ್ಷಣಾ ಪಕ್ಷ ಎಂಬ ಪ್ರತ್ಯೇಕ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ.

jds-members-supports-congress-in-gubbi
ಜೆಡಿಎಸ್ ತೊರೆದು ಗುಬ್ಬಿ ಹಿತರಕ್ಷಣಾ ಪಕ್ಷ ರಚನೆ : 9 ಮಂದಿ ಪಟ್ಟಣ ಪಂಚಾಯಿತಿ ಸದಸ್ಯರಿಂದ ಕಾಂಗ್ರೆಸ್​ಗೆ ಬೆಂಬಲ
author img

By

Published : Apr 2, 2023, 8:51 PM IST

ಜೆಡಿಎಸ್ ತೊರೆದು ಗುಬ್ಬಿ ಹಿತರಕ್ಷಣಾ ಪಕ್ಷ ರಚನೆ

ತುಮಕೂರು : ಜೆಡಿಎಸ್ ಪಕ್ಷವನ್ನು ತೊರೆದ ಗುಬ್ಬಿ ಪಟ್ಟಣ ಪಂಚಾಯತಿಯ 9 ಜನ ಸದಸ್ಯರು ಪ್ರತ್ಯೇಕ ಗುಬ್ಬಿ ಹಿತರಕ್ಷಣಾ ಪಕ್ಷ ಸ್ಥಾಪಿಸಿದ್ದಾರೆ. ಜೊತೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆಯೇ ಗುಬ್ಬಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಎಸ್.ಆರ್ ಶ್ರೀನಿವಾಸ್ ಅವರಿಗೆ ಬಾಹ್ಯ ಬೆಂಬಲ ನೀಡಲು ನಿರ್ಧರಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಬ್ಬಿ ಪಟ್ಟಣ ಪಂಚಾಯತ್​ ಜೆಡಿಎಸ್​​ ಸದಸ್ಯ ಸಿದ್ದರಾಮಣ್ಣ, ಗುಬ್ಬಿ ಕ್ಷೇತ್ರದಲ್ಲಿನ ಜೆಡಿಎಸ್ ಅಭ್ಯರ್ಥಿ ವಿರುದ್ಧ ಅಸಮಾಧಾನ ಹೊರಹಾಕಿದರು. ಪಟ್ಟಣ ಪಂಚಾಯತಿ ಸದಸ್ಯರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಗುಬ್ಬಿ ಕ್ಷೇತ್ರದಲ್ಲಿ ನಡೆದ ಜೆಡಿಎಸ್ ಪಂಚರತ್ನ ಯಾತ್ರೆ, ವಿವಿಧ ಜೆಡಿಎಸ್ ಸಭೆ ಸಮಾರಂಭ, ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನ ನೀಡದೇ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಎಸ್.ಆರ್ ಶ್ರೀನಿವಾಸ್ ಅವರು ಜೆಡಿಎಸ್ ಪಕ್ಷವನ್ನು ತೊರೆದ ನಂತರ ಗುಬ್ಬಿ ಪಟ್ಟಣ ಪಂಚಾಯಿತಿಯಲ್ಲಿನ ಜೆಡಿಎಸ್ ಪಕ್ಷದ 9 ಜನ ಸದಸ್ಯರನ್ನು ಕಡೆಗಣಿಸಲಾಗಿದೆ. ಅಲ್ಲದೆ ಗುಬ್ಬಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಗರಾಜ್‌ ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ. ನಮಗೆ ಜೆಡಿಎಸ್ ಪಕ್ಷದ ಮೇಲೆ ಯಾವುದೇ ಅಸಮಾಧಾನ ಇಲ್ಲ. ನಮಗೆ ಕೇವಲ ಗುಬ್ಬಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ನಾಗರಾಜ್ ಮೇಲೆ ಅಸಮಾಧಾನ ಇದೆ ಎಂದು ಹೇಳಿದರು.

ನಾವು 9 ಮಂದಿ ಪಟ್ಟಣ ಪಂಚಾಯಿತಿ ಸದಸ್ಯರು ಸೇರಿಕೊಂಡು ಈಗಾಗಲೇ ಗುಬ್ಬಿ ಹಿತರಕ್ಷಣಾ ಪಕ್ಷ ಎಂಬ ಪಕ್ಷವನ್ನು ರಚಿಸಿಕೊಂಡಿದ್ದೇವೆ. ಅಲ್ಲದೆ ನಮಗೆ ಪಟ್ಟಣ ಪಂಚಾಯಿತಿಯಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದರು.

ಪ್ರತಿಯೊಬ್ಬರಿಗೂ ಸ್ವಾಭಿಮಾನ ಎನ್ನುವುದು ಇರುತ್ತದೆ. ಅದಕ್ಕಾಗಿಯೇ ನಾವೆಲ್ಲಾ ನಾಗರಾಜ್ ಅವರ ಮೇಲಿನ ಅಸಮಾಧಾನಕ್ಕೆ ಎಸ್ ಆರ್ ಶ್ರೀನಿವಾಸ್ ಅವರಿಗೆ ಬಾಹ್ಯ ಬೆಂಬಲ ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಮೋಹನ್, ಶೌಕತ್ ಅಲಿ, ಸಿದ್ದರಾಮಣ್ಣ, ರಂಗಸ್ವಾಮಿ, ರೇಣುಕ ಪ್ರಸಾದ್, ಮಂಗಳಮ್ಮ, ಕುಮಾರ, ಮಮತಾ, ಶ್ವೇತಾ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕಾರವಾರದಲ್ಲಿ ಕೊನೆಗೂ ತೆರೆದ ಬ್ಲಾಕ್ ಕಾಂಗ್ರೆಸ್ ಕಚೇರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.