ತುಮಕೂರು: ಕೊಡಗಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಿದ್ರೆ ಹೆಣ ಬೀಳುತ್ತೆ. ಪ್ರತಿಭಟನೆಗೆ ಅವಕಾಶ ಕೊಟ್ಟು ಹೆಣ ಬಿದ್ದು ದೊಡ್ಡ ಗಲಾಟೆಯಾಗಲು ಯಾಕೆ ಅವಕಾಶ ನೀಡಬೇಕು. ಹೌದು, 100% ಪರ್ಸೆಂಟ್ ಹೆಣ ಬೀಳುತ್ತದೆ. ಎಷ್ಟು ಕೊಲೆ ನಡೆದಿವೆ ಗೊತ್ತೆ ನಿಮಗೆ. ಎಲ್ಲೆಲ್ಲಿಂದ ಬಂದು ಕೊಲೆ ಮಾಡಿದ್ದಾರೆ ಅಂತಾ ಗೊತ್ತಾ ನಿಮಗೆ. ಕೇರಳ ಗಡಿ ದಾಟಿ ಬಂದು ಕೊಲೆ ಮಾಡ್ತಾರೆ. ಅದಕ್ಕೆ ಸಾಕಷ್ಟು ಅವಕಾಶವಿದೆ. ಅದನ್ನು ನಿಯಂತ್ರಿಸಬೇಕು ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದ್ದಾರೆ.
ತುಮಕೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ ಕಾರ್ಯಕರ್ತನೇ ಮೊಟ್ಟೆ ಎಸೆದಿದ್ದಾನೆ. ಆತ ಯಾವುದೋ ವಿಚಾರಕ್ಕೆ ಬೇಸರಗೊಂಡು ಎಸೆದಿದ್ದಾನೆ. ಇದು ಜಗಜ್ಜಾಹೀರಾಗಿದೆ. ಆತ 'ತಾನು ಜೆಡಿಎಸ್ ನಲ್ಲಿದ್ದೆ, ಆನಂತರ ಕಾಂಗ್ರೆಸ್ಗೆ ಬಂದೆ' ಎಂದು ಹೇಳಿಕೊಂಡಿದ್ದಾನೆ ಎಂದರು.
ಕಾಂಗ್ರೆಸ್ ಹೋರಾಟ ನೆಕ್ಸ್ಟ್ ಜೂನ್ವರೆಗೂ ಇರಬಹುದು. ಆಮೇಲೆ ಎಲ್ಲಾ ತಣ್ಣಗಾಗಿ ಬಿಡುತ್ತೆ. ರಾಜ್ಯದ ಜನತೆಗೆ ಗೊತ್ತಿದೆ. ಯಾಕೆ ಈಗ ಪ್ರತಿಭಟನೆ ಆಗ್ತಿದೆ ಅಂತ. ಪ್ರತಿಯೊಬ್ಬರಿಗೂ ಆ ಜಾಗ ಹಿಡಿಬೇಕು ಎಂಬ ಹುಮ್ಮಸಿದೆ. ಆದ್ರೆ ಚರ್ಚೆಗೆ ವಿಷಯಗಳಿಲ್ಲ. ವಿಷಯ ಇದ್ದಿದ್ರೆ ಅದ್ಭುತ ಡಿಬೇಟ್ ನಡೆಯುತ್ತಿತ್ತು. ಡಿಬೇಟ್ ನಡೆಯದೆ ಬರೀ ಮೊಟ್ಟೆ ವಿಚಾರವೇ ಚರ್ಚೆ ನಡೆಯುತ್ತಿದೆ ಅಂದರೆ ಇಶ್ಯೂ ಇಲ್ಲ ಎಂದು ಅರ್ಥ ಅಂತಾ ಜಗ್ಗೇಶ ಅಭಿಪ್ರಾಯಪಟ್ಟರು.
ಓದಿ: ಅರಮನೆ ಮುಂಭಾಗದಲ್ಲಿ ಸಾವರ್ಕರ್ ರಥಯಾತ್ರೆ: ಇಲ್ಲಿದೆ ವಿಶೇಷ ಸಂದರ್ಶನ