ETV Bharat / state

ಮೂವರು ಡಿಸಿಎಂ ನೇಮಕಕ್ಕೆ ಹೈಕಮಾಂಡ್​ಗೆ ಪತ್ರ ಬರೆಯುತ್ತೇನೆ : ಸಚಿವ ಕೆ ಎನ್​ ರಾಜಣ್ಣ

ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಬಗ್ಗೆ ಹೈಕಮಾಂಡ್​ಗೆ ಪತ್ರ ಬರೆಯುತ್ತೇನೆ ಎಂದು ಸಹಕಾರಿ ಸಚಿವ ಕೆ ಎನ್​ ರಾಜಣ್ಣ ಹೇಳಿದ್ದಾರೆ.

i-will-writ-the-letter-for-appointment-of-three-dcms-says-minister-kn-rajanna
ಸಹಕಾರಿ ಸಚಿವ ಕೆ ಎನ್​ ರಾಜಣ್ಣ
author img

By ETV Bharat Karnataka Team

Published : Sep 16, 2023, 7:47 PM IST

ಮೂವರು ಡಿಸಿಎಂ ನೇಮಕಕ್ಕೆ ಹೈಕಮಾಂಡ್​ಗೆ ಪತ್ರ ಬರೆಯುತ್ತೇನೆ : ಸಚಿವ ರಾಜಣ್ಣ

ತುಮಕೂರು : ಮೂರು ಡಿಸಿಎಂ ಸ್ಥಾನಗಳನ್ನು ಸೃಷ್ಟಿ ಮಾಡಿದರೆ ಎಲ್ಲಾ ಸಮುದಾಯಗಳು ನಮಗೆ ಬೆಂಬಲ ನೀಡಲು ಅನುಕೂಲ ಆಗುತ್ತದೆ. ಪರಿಶಿಷ್ಟ ಜಾತಿ-ಪಂಗಡ, ಅಲ್ಪಸಂಖ್ಯಾತರಿಗೆ, ವೀರಶೈವ ಸಮುದಾಯಗಳಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿ ಮಾಡಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್​ಗೆ ಪತ್ರ ಬರೆಯುತ್ತೇನೆ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ತಿಳಿಸಿದ್ದಾರೆ.

ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳ ಮೊದಲ ವಾರದಲ್ಲಿ ಹೈಕಮಾಂಡ್ ಮುಖಂಡರನ್ನು ಭೇಟಿ ಮಾಡುತ್ತೇನೆ. ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಹೈಕಮಾಂಡ್ ನಿರ್ಣಯ ಮಾಡಬೇಕು. ಹೈಕಮಾಂಡ್​ ತೀರ್ಮಾನವೇ ನಮ್ಮೆಲ್ಲರ ತೀರ್ಮಾನ. ಪಕ್ಷದ ಹಿತದೃಷ್ಟಿಯಿಂದ ಇದು ಒಳ್ಳೆಯದು. ಈ ಹೇಳಿಕೆಗೆ ಯಾರು ಸಹಮತ ನೀಡುತ್ತಾರೋ ಅವರನ್ನೆಲ್ಲ ಕರೆದುಕೊಂಡು ಹೋಗ್ತೀನಿ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಅಸಮಾಧಾನವೇನಿಲ್ಲ. ನಾನು ಡಿಕೆ ಬ್ರದರ್ಸ್ ವಿರುದ್ಧ ಹೇಳಿಲ್ಲ. ಡಿಕೆ ಶಿವಕುಮಾರ್ ಕೂಡ ಉಪಮುಖ್ಯಮಂತ್ರಿ ಇದ್ದಾರೆ. ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾರೆ.‌ ಪಕ್ಷ ಸಂಘಟನೆ ಬಗ್ಗೆ ಚಾಣಾಕ್ಷ್ಯರಿದ್ದಾರೆ. ಅವರು ಅಸಮಾಧಾನಗೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿಲ್ಲ ಎಂದು ಹೇಳಿದರು.

ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಿಲ್ಲ. ಹಾಸನದಲ್ಲಿ ಯಾರನ್ನು ಅಭ್ಯರ್ಥಿ ಮಾಡಿದ್ರೆ ಒಳ್ಳೆಯದು ಎಂದು ವೈಯಕ್ತಿಕವಾಗಿ ಎಲ್ಲರ ಜೊತೆಗೆ ಚರ್ಚೆ ಮಾಡುತ್ತಿದ್ದೇನೆ. ಎಲ್ಲರ ಅಭಿಪ್ರಾಯ ಪಡೆಯುತ್ತಿದ್ದೇನೆ. ಎಲ್ಲರೂ ಈ ಬಗ್ಗೆ ಪಕ್ಷಕ್ಕೆ ಸಲಹೆಗಳನ್ನು ನೀಡುತ್ತೇವೆ. ಅದರ ಮೇಲೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಜೆಡಿಎಸ್- ಬಿಜೆಪಿ ಮೈತ್ರಿ ಅಂತಿಮವಾಗಿಲ್ಲ ಎಂದು ನಿನ್ನೆ ಯಡಿಯೂರಪ್ಪ ಹೇಳಿದ್ದಾರೆ ಎಂದರು.

ಜೆಡಿಎಸ್ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್​ಗೆ ಬರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಎಸ್ ಟಿ ಸೋಮಶೇಖರ್, ಹೆಬ್ಬಾರ್ ಕಾಂಗ್ರೆಸ್​ಗೆ ಸೇರ್ಪಡೆಯಾಗುತ್ತಾರೆ ಎಂಬ ಮಾಹಿತಿಯಿದೆ. ತುಮಕೂರು ಕ್ಷೇತ್ರದಿಂದ ಲೋಕಸಭೆಗೆ ಕಾಂಗ್ರೆಸ್​ನಿಂದ ಸೋಮಣ್ಣ ಬರುತ್ತಾರೆ ಅನ್ನೋದು ಗಾಳಿ ಸುದ್ದಿ. ಮುದ್ದಹನುಮೇಗೌಡರ ಗೆಲುವಿಗೆ ಯಾರೆಲ್ಲಾ ಶ್ರಮವಹಿಸಿದ್ದರೋ ಅವರಿಗೆ ಒಂದು ಮಾತು ಹೇಳದೆ ಪಕ್ಷ ಬಿಟ್ಟು ಹೋದರು. ಕಾಂಗ್ರೆಸ್ ನಲ್ಲಿ ಜಿಲ್ಲಾಧ್ಯಕ್ಷರು, ಶಾಸಕರು ಎಲ್ಲಾನೂ ಆಗಿದ್ದರು.‌ ಜೆಡಿಎಸ್​ಗೆ ಹೋಗಿ ಲೋಕಸಭೆಗೆ ಸ್ಪರ್ಧಿಸಿ ಸೋತರು. ಬಳಿಕ ಕಾಂಗ್ರೆಸ್​ಗೆ ಬಂದು ಸಂಸದರಾದರು ಎಂದು ತಿಳಿಸಿದರು.

ನಮ್ಮ ಸರ್ಕಾರ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದೆ. ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು ಪೂರೈಸಿದ್ದೇವೆ. ನಿರುದ್ಯೋಗಿಗಳಿಗೆ 3 ಸಾವಿರ ರೂಪಾಯಿ ಭತ್ಯೆ ನೀಡುವ ಗ್ಯಾರಂಟಿ ಮಾತ್ರ‌ ಬಾಕಿಯಿದೆ. ಇದು ಮುಂದಿನ ದಿನಗಳಲ್ಲಿ ಜಾರಿಯಾಗಲಿದೆ. ನುಡಿದಂತೆ ನಡೆದಿದ್ದೇವೆ, ಜನರು ಕೂಡ ಸಂತೃಪ್ತಿಯಿಂದ ಇದ್ದಾರೆ. ಲೋಕಸಭೆ ಚುನಾವಣೆ ನಮ್ಮ ಮನೆ‌ ಹೊತ್ತಿನಲ್ಲಿ‌ ಬಂದು ನಿಂತಿದೆ. ಎಲ್ಲಾ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ. ಕಾಂಗ್ರೆಸ್ ರಾಜ್ಯದಲ್ಲಿ ಅತಿ ಲೋಕಸಭೆ ಕ್ಷೇತ್ರಗಳನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ರಾಜ್ಯ ಸರ್ಕಾರಕ್ಕೆ ಜನರ ಹಿತಕ್ಕಿಂತ ರಾಜಕೀಯ ಮೈತ್ರಿ ಮುಖ್ಯವಾಗಿದೆ: ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.