ತುಮಕೂರು: ಅನೈತಿಕ ಸಂಬಂಧ ಹಿನ್ನೆಲೆ ಪ್ರಿಯಕರ ಹಾಗೂ ಪತ್ನಿ ಸೇರಿ ಪತಿಯನ್ನು ಹತ್ಯೆಗೈದ ಘಟನೆ ತುಮಕೂರು ನಗರದ ಶಿರಾಗೇಟ್ ಹೊಂಬಯ್ಯ ಪಾಳ್ಯದಲ್ಲಿ ನಡೆದಿದೆ.
ಕೊಲೆಯಾದ ದುರ್ದೈವಿ ಪತಿ ಪಾಪಣ್ಣ ಅಲಿಯಾಸ್ ಹನುಮೇಗೌಡ (43) ಎಂಬುವವರು ಡಾಬಾದಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ವಿದ್ಯಾ ಹಾಗೂ ಪ್ರಿಯಕರ ಸತೀಶ್ ಜೊತೆಯಲ್ಲಿದ್ದಿದ್ದನ್ನು ಹನುಮೇಗೌಡ ನೋಡಿದ್ದಾರೆ ಎನ್ನಲಾಗಿದೆ. ಈ ವೇಳೆ ಪತಿ ಹಾಗೂ ಪ್ರಿಯಕರನ ನಡುವೆ ಜಗಳವಾಗಿದ್ದು, ಸತೀಶ್ ಹಾಗೂ ವಿದ್ಯಾ ಸೇರಿ ಚಾಕುವಿನಿಂದ ಹನುಮೇಗೌಡನನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಸತೀಶ್ ಆಟೋ ಚಾಲಕನಾಗಿದ್ದು, 4 ತಿಂಗಳ ಹಿಂದೆ ವಿದ್ಯಾಗೆ ಪರಿಚಯವಾಗಿದ್ದನಂತೆ. ಒಂದು ತಿಂಗಳ ಹಿಂದೆ ಪತಿ ಹನುಮೇಗೌಡ ತುಮಕೂರಿಗೆ ವಾಪಾಸ್ಸಾಗಿದ್ದಾನೆ. ಈ ಬಗ್ಗೆ ತುಮಕೂರು ನಗರ ಪೊಲೀಸರು ಡಿ.2ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಡಿ.3ರಂದು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಅನೈತಿಕ ಸಂಬಂಧ ಹೊಂದಿದ್ದ ಇಬ್ಬರೂ ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳನ್ನು 24 ಗಂಟೆಯೊಳಗೆ ಪತ್ತೆ ಹಚ್ಚಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದ್ದು, ಹೆಚ್ಚಿನ ಮಾಹಿತಿಗೆ ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹೇಳಿದ್ರು.