ETV Bharat / state

ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣ: ನಾಳೆ ತುಮಕೂರು ಬಂದ್​​​ಗೆ ಕರೆ - ನಾಳೆ ತುಮಕೂರು ಬಂದ್​​​ಗೆ ಹಿಂದೂಪರ ಸಂಘಟನೆಗಳು ಕರೆ

ಬಜರಂಗದಳದ ಕಾರ್ಯಕರ್ತ ಮಂಜು ಭಾರ್ಗವ ಹಾಗೂ ಕಿರಣ್ ಎಂಬುವವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳು ಬಂದ್​ಗೆ ಕರೆ ನೀಡಿವೆ.

Hindu organisation called tomorrow bandh at Tumkur
ನಾಳೆ ತುಮಕೂರು ಬಂದ್​​​ಗೆ ಕರೆ
author img

By

Published : Oct 21, 2021, 9:26 PM IST

ತುಮಕೂರು: ಬಜರಂಗದಳ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳು ಅ.22ರಂದು ಅಂದರೆ ನಾಳೆ ಬಂದ್​ಗೆ ಕರೆ ನೀಡಿವೆ.

ಬಜರಂಗದಳದ ಕಾರ್ಯಕರ್ತ ಮಂಜು ಭಾರ್ಗವ ಹಾಗೂ ಕಿರಣ್ ಎಂಬುವವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳು ಬಂದ್​ಗೆ ಕರೆ ನೀಡಿವೆ.

ನಾಳೆ ತುಮಕೂರು ಬಂದ್​ ಕರೆ ನೀಡಿದ ಹಿಂದೂ ಸಂಘಟನೆಗಳು

ಈಗಾಗಲೇ ಹಲ್ಲೆಯಿಂದ ಗಾಯಗೊಂಡಿರುವ ಮಂಜು ಭಾರ್ಗವ ಅವರು ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Hindu organisation called tomorrow bandh at Tumkur
ನಾಳೆ ತುಮಕೂರು ಬಂದ್​ಗೆ​ ಕರೆ ನೀಡಿದ ಹಿಂದೂ ಸಂಘಟನೆಗಳು

ಅಲ್ಲದೇ ಇನ್ನೂ ಹೆಚ್ಚಿನ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚನೆ ಮಾಡಿರುವುದಾಗಿ ತಿಳಿಸಿದೆ.

ಬಂದ್ ವೇಳೆ ಬಸ್ ವ್ಯವಸ್ಥೆಯಲ್ಲಿ ವ್ಯತ್ಯಯವಿಲ್ಲ:

ನಾಳೆ ವಿವಿಧ ಸಂಘಟನೆಗಳು ತುಮಕೂರು ಬಂದ್​ ನಡೆಸುತ್ತಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆವರೆಗೆ ಬಂದ್ ನಡೆಸಲು ನಿರ್ಧರಿಸಲಾಗಿದೆ. ಬಂದ್ ವೇಳೆ ಖಾಸಗಿ ಹಾಗೂ ಕೆಎಸ್​​ಆರ್​​​ಟಿಸಿ ಬಸ್ ಸಂಚಾರ ಯಥಾಸ್ಥಿತಿಯಲ್ಲಿರಲಿದೆ. ಆಟೋ ಚಾಲಕರು, ವರ್ತಕರು ಬಂದ್​ಗೆ ಬೆಂಬಲ ಸೂಚಿಸಿವೆ. ವಿವಿಧ ಸಮುದಾಯದ ಮುಖಂಡರಿಂದ ಬೆಂಬಲವಿದೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಜಿ.ಕೆ.ಶ್ರೀನಿವಾಸ್ ಹೇಳಿದ್ದಾರೆ.

ಇಡೀ ವಿಶ್ವದಲ್ಲಿ ಹಿಂದೂಗಳಿಗೆ ಮುಕ್ತವಾಗಿರೋದು ಭಾರತ ದೇಶ ಮಾತ್ರವಾಗಿದೆ. ಇಲ್ಲೂ ನಮಗೆ ಭದ್ರತೆ ಇಲ್ಲ ಅಂದರೆ ನಾವು ಎಲ್ಲಿಗೆ ಹೋಗಬೇಕು. ಹೀಗೆ ಆದರೆ ಹಿಂದುಗಳನ್ನು ಅರಬ್ಬಿ ಸಮುದ್ರಕ್ಕೆ ಎಸೆಯಬೇಕಾಗುತ್ತದೆ ಎಂದು ಶಾಸಕ ಜ್ಯೋತಿ ಗಣೇಶ್ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಜ್ಯೋತಿ ಗಣೇಶ್

ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಅನ್ನೋದು ನಾವೆಲ್ಲ ನೋಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ 100 ಕೋಟಿ ಜನಸಂಖ್ಯೆಯಿರುವ ಭಾರತಕ್ಕೆ ಬಂದರೆ ತುಂಬಾ ಕಷ್ಟ. ಹಿಂದುಗಳನ್ನು ಕಂಡರೆ ಭಯ, ಭಕ್ತಿ ಇರಬೇಕು. ಹಾಗಾಗಿ ನಾವೆಲ್ಲ ಒಗ್ಗಟ್ಟಾಗಿ ಬಂದ್ ಆಚರಣೆ ಮಾಡಿ ಘಟನೆಯನ್ನು ಖಂಡಿಸಬೇಕು ಎಂದರು.

ಇದನ್ನೂ ಓದಿ: ಎಸ್ಪಿ ಕಚೇರಿ ಸ್ಥಳಾಂತರಕ್ಕೆ ವಿರೋಧ : ಅ.25ಕ್ಕೆ ಕೆಜಿಎಫ್​ ಬಂದ್​ಗೆ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.