ತುಮಕೂರು: ಎಸ್ಟಿ ಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿರುವ ಕುರುಬ ಸಮುದಾಯದ ಪಾದಯಾತ್ರೆ ಇಂದು ತುಮಕೂರು ನಗರ ಪ್ರವೇಶಿಸಿತು.
ಕಾಗಿನೆಲೆಯಿಂದ ಬೆಂಗಳೂರಿನವರೆಗೆ ನಡೆಯುತ್ತಿರುವ ಪಾದಯಾತ್ರೆ ನಾಲ್ಕು ದಿನಗಳ ಹಿಂದೆ ಜಿಲ್ಲೆಯ ಶಿರಾ ತಾಲೂಕು ಪ್ರವೇಶಿಸಿತ್ತು. ನಗರದ ಬಿಹೆಚ್ ರಸ್ತೆ, ಬಟವಾಡಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿದ ಪಾದಯಾತ್ರೆಯ ನೇತೃತ್ವವನ್ನು ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ವಹಿಸಿದ್ದರು.
ಪಾದಯಾತ್ರೆಯಲ್ಲಿ ಕುರುಬ ಸಮುದಾಯದ ನೂರಾರು ಮಂದಿ ಭಾಗವಹಿಸಿದ್ದರು. ಪುಟ್ಟದಾದ ಕುರಿಗಳ ರಥ ಕೂಡ ಪಾದಯಾತ್ರೆಯಲ್ಲಿ ಗಮನ ಸೆಳೆಯಿತು. ಕನಕದಾಸರ ಮೂರ್ತಿಯನ್ನು ಪಾದಯಾತ್ರೆಯಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.
ಓದಿ : ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಶಶಿಕಲಾ: ಘೋಷಣೆ ಕೂಗಿ ಅಭಿಮಾನಿಗಳಿಂದ ಸ್ವಾಗತ