ತುಮಕೂರು: ನಿನ್ನೆ ರಾತ್ರಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಭಾರೀ ಅನಾಹುತ ಸಂಭವಿಸಿದ್ದು, ತಿಪಟೂರು ತಾಲೂಕಿನ ಆಲ್ಬೂರು ಅಣಪನಹಳ್ಳಿ ಗ್ರಾಮದಲ್ಲಿ ಕೋಳಿ ಫಾರಂ ಮೇಲೆ ಹಲಸಿನ ಮರ ಬಿದ್ದ ಪರಿಣಾಮ ನೂರಾರು ಕೋಳಿಗಳು ಸಾವನ್ನಪ್ಪಿವೆ.
ಮಳೆಗೆ ಬೃಹತ್ತಾದ ಹಲಸಿನ ಮರ ಧರೆಗುರುಳಿದ ಹಿನ್ನೆಲೆ ಕೋಳಿ ಫಾರಂ ಸಂಪೂರ್ಣ ಜಖಂಗೊಂಡು, ಕೋಳಿ ಮರಿಗಳು ಸಾವನ್ನಪ್ಪಿವೆ. ಈ ಫಾರಂ ಮಲ್ಲೇಶ್ ಎಂಬುವರಿಗೆ ಸೇರಿದ್ದಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಇನ್ನು ಮಳೆಗೆ ಕೊಟ್ಟಿಗೆ ಕುಸಿದು ಬಿದ್ದ ಪರಿಣಾಮ ಅದರಲ್ಲಿದ್ದ ಎರಡು ಎತ್ತುಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ಪೆಂಡ್ಲಿಜೀವಿ ಗ್ರಾಮದಲ್ಲಿ ನಡೆದಿದೆ. ಇವು ಗ್ರಾಮದ ನರಸಿಂಹಪ್ಪರಿಗೆ ಸೇರಿದ ಎತ್ತುಗಳಾಗಿವೆ.