ತುಮಕೂರು: ಕೆನಡಾದಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ, ಕೆನಾಡದ ಟೊರೆಂಟೋದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ.
ಚಂದ್ರ ಆರ್ಯ ತುಮಕೂರು ಜಿಲ್ಲೆ ಶಿರಾ ತಾಲೂಕಿನ ದ್ವಾರಾಳು ಗ್ರಾಮದ ಮೂಲದವರು. ಕೆನಡಾ ಸಂಸತ್ನಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ವಿಷಯ ಪ್ರಸ್ತಾಪಿಸಿ ತೀವ್ರವಾಗಿ ಖಂಡಿಸಿದ್ದಾರೆ. ಟೊರೆಂಟೋದ ಸ್ವಾಮಿ ನಾರಾಯಣ, ವಿಷ್ಣು ಮಂದಿರಗಳ ಮೇಲೆ ಕೆಲ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಭಾರತ ಸೇರಿದಂತೆ ದಕ್ಷಿಣ ಏಷ್ಯಾದಿಂದ ಸಾಕಷ್ಟು ಹಿಂದೂಗಳು ಕೆನಡಾಗೆ ಆಗಮಿಸಿದ್ದಾರೆ. ಭಾರತೀಯ ಮೂಲದ ಹಿಂದೂಗಳು ಶಾಂತಿಪ್ರಿಯರು ಹಾಗೂ ಶ್ರಮ ಜೀವಿಗಳು. ತಮ್ಮ ಮಕ್ಕಳ ಶಿಕ್ಷಣ ಸೇರಿದಂತೆ ಕುಟುಂಬದ ಉನ್ನತಿಗೆ ಶ್ರಮಿಸುತ್ತಾರೆ ಎಂದು ಹೇಳಿದರು.
-
My statement in Canadian parliament on the recent hate crime incidents on Hindu temples in Toronto. pic.twitter.com/QgbNxe9FEG
— Chandra Arya (@AryaCanada) September 20, 2022 " class="align-text-top noRightClick twitterSection" data="
">My statement in Canadian parliament on the recent hate crime incidents on Hindu temples in Toronto. pic.twitter.com/QgbNxe9FEG
— Chandra Arya (@AryaCanada) September 20, 2022My statement in Canadian parliament on the recent hate crime incidents on Hindu temples in Toronto. pic.twitter.com/QgbNxe9FEG
— Chandra Arya (@AryaCanada) September 20, 2022
ಇದನ್ನೂ ಓದಿ: ಇದಪ್ಪಾ ಭಾಷಾಭಿಮಾನ! ಕೆನಡಾ ಪಾರ್ಲಿಮೆಂಟ್ನಲ್ಲಿ ಕನ್ನಡದ ಕಂಪು ಸೂಸಿದ ಚಂದ್ರ ಆರ್ಯ
ಆದರೆ ಕೆನಡಾದಲ್ಲಿ ಹಿಂದೂ ವಿರೋಧಿ ಗುಂಪುಗಳಿಂದ ಹಿಂದೂಗಳ ಭಾವನೆಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಜನಾಂಗೀಯ ದ್ವೇಷದಿಂದ ಗಲಾಟೆಗಳು, ಹಲ್ಲೆಗಳು ನಡೆಯುತ್ತಿವೆ. ಕೆನಡಾ ಸಂಸತ್ ಇದನ್ನು ಖಂಡಿಸಬೇಕು ಹಾಗೂ ಇದಕ್ಕೆ ಕಠಿಣ ಕ್ರಮಗಳನ್ನು ರೂಪಿಸಬೇಕು. ಹಿಂದೂಗಳ ಹಾಗೂ ಅವರ ಭಾವನೆಗಳ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಮ್ಮ ಸಂಸತ್ ಭಾಷಣದ ಮೂಲಕ ಒತ್ತಾಯ ಮಾಡಿದರು.
ಇದನ್ನೂ ಓದಿ: ಭಾರತಕ್ಕಿಂತ ಕೆನಡಾದಲ್ಲಿ ಪ್ರಾದೇಶಿಕ ಅಧಿಕಾರ ಹೆಚ್ಚು: ಕೆನಡಾ ಸಂಸದ ಚಂದ್ರ ಆರ್ಯ