ತುಮಕೂರು: ವಾಹನ ಚಾಲಕನೊಬ್ಬನಿಂದ ಫೋನ್ ಪೇ ಆ್ಯಪ್ ಮೂಲಕ ಲಂಚ ಪಡೆದಿದ್ದ ಆರೋಪದ ಹಿನ್ನೆಲೆಯಲ್ಲಿ ಗುಬ್ಬಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಜ್ಞಾನಮೂರ್ತಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಆದೇಶಿಸಿದ್ದಾರೆ.
ಘಟನೆಯ ವಿವರ:
ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಶವ ಸಾಗಿಸಲು ನಿರಾಕರಿಸಿದ್ದ ಎಂದು ಮ್ಯಾಕ್ಸಿ ಕ್ಯಾಬ್ ಚಾಲಕನ ಮೇಲೆ ಸುಳ್ಳು ಕೇಸ್ ದಾಖಲಿಸಿದ ಸಬ್ ಇನ್ಸ್‌ಪೆಕ್ಟರ್ ಹಣ ನೀಡಿದರೆ ಮಾತ್ರ ವಾಹನ ಬಿಡುವುದಾಗಿ ತಿಳಿಸಿದ್ದರಂತೆ. ಬಳಿಕ ತನ್ನ ಜೀಪ್ ಡ್ರೈವರ್ ಫೋನ್ ನಂಬರ್ಗೆ ಫೋನ್ ಪೇ ಮೂಲಕ 7 ಸಾವಿರ ರೂಪಾಯಿ ಲಂಚ ಪಡೆದ ಗಂಭೀರ ಆರೋಪ ಕೇಳಿಬಂದಿತ್ತು. ಆದರೆ ಮಾರನೇ ದಿನ ಬೆಳಗ್ಗೆ ಈ ಹಣವನ್ನು ವಾಪಸ್ ನೀಡಲಾಗಿದೆ ಎಂದು ವಾಹನ ಚಾಲಕ ತಿಳಿಸಿದ್ದ.
ಈ ಪ್ರಕರಣ ಸಂಬಂಧ ಇದೀಗ ಸಬ್ ಇನ್ಸ್‌ಪೆಕ್ಟರ್ ಜ್ಞಾನಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಫೋನ್ ಪೇ ಮೂಲಕ ಲಂಚ ಪಡೆದರಾ ಗುಬ್ಬಿ ಸಬ್ಇನ್ಸ್ಪೆಕ್ಟರ್..?: ಮ್ಯಾಕ್ಸಿಕ್ಯಾಬ್ ಚಾಲಕನ ಗಂಭೀರ ಆರೋಪ