ETV Bharat / state

ಬಗರ್ ಹುಕುಂ ಹಕ್ಕುಪತ್ರ ವಿತರಿಸುವಲ್ಲಿ ಸರ್ಕಾರದ ವಿಳಂಬ ಧೋರಣೆ: ತುಮಕೂರು ರೈತರ ಆರೋಪ

ತುಮಕೂರು ಜಿಲ್ಲೆಯ ಎಲ್ಲಾ 11 ತಾಲೂಕುಗಳ ಪೈಕಿ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಮಾತ್ರ ಶಾಸಕರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಉಳಿದ ತುಮಕೂರು ಗ್ರಾಮಾಂತರ, ಗುಬ್ಬಿ, ಕುಣಿಗಲ್, ಮಧುಗಿರಿ, ಕೊರಟಗೆರೆ, ಶಿರಾ, ಪಾವಗಡ, ತುಮಕೂರು ತಾಲೂಕುಗಳಲ್ಲಿ ಇನ್ನೂ ಸಮಿತಿಯೇ ರಚನೆಯಾಗಿಲ್ಲ.

government-delay-in-issuing-bagar-hukum-claim-news
ಬಗರ್ ಹುಕುಂ ಹಕ್ಕು ಪತ್ರ
author img

By

Published : Dec 8, 2020, 5:13 PM IST

ತುಮಕೂರು: ರೈತ ದೇಶದ ಬೆನ್ನೆಲುಬು. ಆದರೆ ಜಿಲ್ಲೆಯ ಬರೋಬ್ಬರಿ 2 ಲಕ್ಷ ರೈತರು ಹಕ್ಕುಪತ್ರ ಪಡೆಯಲು ಕಾಯುತ್ತಿದ್ದು, ಬಗರ್ ಹುಕುಂ ಹಕ್ಕುಪತ್ರ ವಿತರಿಸುವಲ್ಲಿ ಸರ್ಕಾರದ ವಿಳಂಬ ಧೋರಣೆಯಿಂದ ಅನ್ಯಾಯವಾಗಿದೆ ಎಂದು ರೈತರು ಆರೋಪಿಸಿದ್ದಾರೆ.

government-delay-in-issuing-bagar-hukum-claim-news
ಬಗರ್ ಹುಕುಂ ಹಕ್ಕುಪತ್ರ

ಮೂವತ್ತು ವರ್ಷಗಳಿಂದ ಅರ್ಜಿ ಹಾಕಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸರ್ಕಾರ ಮೂರು ಹಂತದಲ್ಲಿ ಫಾರಂ ನಂ. 50, 53, 57ರಲ್ಲಿ ಅರ್ಜಿ ಸಲ್ಲಿಸಲು ಹೇಳಿತ್ತು. ಈ ಮೂರು ಹಂತಗಳು ಸೇರಿ ಒಟ್ಟು 2,72,245 ರೈತರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಕೇವಲ 67,266 ರೈತರಿಗೆ ಅರ್ಜಿ ಮಂಜೂರಾಗಿ ಭೂಮಿ ಸಿಕ್ಕಿದೆ. ಉಳಿದ 2,04,979 ರೈತರಿಗೆ ಭೂಮಿಯ ಹಕ್ಕು ದೊರೆತಿಲ್ಲ.

2 ಲಕ್ಷ ರೈತರಲ್ಲಿ 90 ಸಾವಿರ ಅರ್ಜಿಗಳನ್ನ ಜಿಲ್ಲಾಡಳಿತ ವಿವಿಧ ಕಾರಣ ನೀಡಿ ತಿರಸ್ಕರಿಸಿದೆ. ಬರೋಬ್ಬರಿ 1 ಲಕ್ಷದ 10 ಸಾವಿರ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿದೆ. ತಿರಸ್ಕರಿಸಲು ಅನೇಕ ಕಾರಣಗಳನ್ನ ನೀಡಿದ್ದು, ಇರುವ ಅರ್ಜಿಗಳನ್ನ ಇತ್ಯರ್ಥಪಡಿಸಲು ಮೀನಾಮೇಷ ಎಣಿಸುತ್ತಿದೆ. ಶಾಸಕರ ನೇತೃತ್ವದ ಸಮಿತಿ ರಚನೆಯಾಗಬೇಕು. ಆದರೆ ರಚನೆಯೇ ಆಗಿಲ್ಲ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಬಗರ್ ಹುಕುಂ ಹಕ್ಕುಪತ್ರ

ಓದಿ: ರೈತರಿಗೆ ಅನ್ಯಾಯವಾಗುವ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ: ಸಿಎಂ ಬಿಎಸ್​ವೈ

ಶಾಸಕರ ನೇತೃತ್ವದಲ್ಲಿ ಬಗರ್ ಹುಕುಂ ಸಮಿತಿ ರಚನೆಯಾಗಬೇಕಿದೆ. ಆದರೆ ತುಮಕೂರು ಜಿಲ್ಲೆಯ ಎಲ್ಲಾ 11 ತಾಲೂಕುಗಳ ಪೈಕಿ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಮಾತ್ರ ಶಾಸಕರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಉಳಿದ ತುಮಕೂರು ಗ್ರಾಮಾಂತರ, ಗುಬ್ಬಿ, ಕುಣಿಗಲ್, ಮಧುಗಿರಿ, ಕೊರಟಗೆರೆ, ಶಿರಾ, ಪಾವಗಡ, ತುಮಕೂರು ತಾಲೂಕುಗಳಲ್ಲಿ ಇನ್ನೂ ಸಮಿತಿಯೇ ರಚನೆಯಾಗಿಲ್ಲ.

ರಚನೆಯಾಗಿ ಇತ್ಯರ್ಥವಾದರೂ ಸರ್ಕಾರಿ ಸರ್ವೆ ನಂತರವಷ್ಟೇ ಹಕ್ಕುಪತ್ರ ನೀಡಲಾಗುವುದು. ಇದೆಲ್ಲಾ ಮುಗಿದು ರೈತರಿಗೆ ಸಿಗುವ ವೇಳೆಗೆ ವರ್ಷಗಳೇ ಕಳೆದರೂ ಅಚ್ಚರಿಯಿಲ್ಲ. ಒಟ್ಟಾರೆ ರೈತರ ಪರ ಎಂದು ಸದಾ ಹೇಳುವ ಸರ್ಕಾರ ರೈತರಿಗೆ ನೀಡಬೇಕಾದ ಭೂಮಿಯ ಹಕ್ಕನ್ನೇ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದೆ ಎನ್ನುವುದು ರೈತರ ಆರೋಪವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.