ETV Bharat / state

ಪಕ್ಷಾತೀತವಾಗಿ ದೇವರ ಉತ್ಸವಾದಿಗಳನ್ನು ನಡೆಸಬೇಕು: ಶಾಸಕ ರಾಜೇಶ್ ಗೌಡ

author img

By

Published : Jan 4, 2021, 9:51 PM IST

Updated : Jan 4, 2021, 10:39 PM IST

ಮಧುಗಿರಿ ತಾಲೂಕಿನ ನೀರಕಲ್ಲು ಗ್ರಾಮದಲ್ಲಿ ನಡೆದ ಅಮ್ಮಾಜಿ ಕಾವಲ್ಲೇಶ್ವರಿ ವಾರ್ಷಿಕ ಉತ್ಸವದಲ್ಲಿ ಶಿರಾ ಶಾಸಕ ಡಾ. ರಾಜೇಶ್ ಗೌಡ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಜೀವನದ ಜಂಜಾಟಗಳನ್ನು ಮರೆತು ಭಗವಂತನ ಪ್ರಾರ್ಥನೆಯ ಮೂಲಕ ಆಧ್ಯಾತ್ಮಿಕ ಅನುಭವ ಪಡೆಯಬೇಕಿದೆ ಎಂದರು.

ಶಾಸಕ ಡಾ. ರಾಜೇಶ್ ಗೌಡ
ಶಾಸಕ ಡಾ. ರಾಜೇಶ್ ಗೌಡ

ತುಮಕೂರು: ಪಕ್ಷಾತೀತವಾಗಿ ದೇವರ ಉತ್ಸವಾದಿಗಳನ್ನು ನಡೆಸಬೇಕು. ಜೀವನದ ಜಂಜಾಟಗಳನ್ನು ಮರೆತು ಭಗವಂತನ ಪ್ರಾರ್ಥನೆಯ ಮೂಲಕ ಆಧ್ಯಾತ್ಮಿಕ ಅನುಭವ ಪಡೆಯಬೇಕಿದೆ ಎಂದು ಶಿರಾ ಶಾಸಕ ಡಾ. ರಾಜೇಶ್ ಗೌಡ ಹೇಳಿದ್ದಾರೆ.

ಶಿರಾ ಶಾಸಕ ಡಾ. ರಾಜೇಶ್ ಗೌಡ

ಮಧುಗಿರಿ ತಾಲೂಕಿನ ನೀರಕಲ್ಲು ಗ್ರಾಮದಲ್ಲಿ ನಡೆದ ಅಮ್ಮಾಜಿ ಕಾವಲ್ಲೇಶ್ವರಿ ವಾರ್ಷಿಕ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವತಾ ಕಾರ್ಯಗಳು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತವೆ. ಶ್ರದ್ಧಾ-ಭಕ್ತಿಯ ಕೇಂದ್ರಗಳಾದ ದೇಗುಲಗಳು ಎಲ್ಲರನ್ನು ಒಂದು ಮಾಡಿ ಬೆಸೆಯುತ್ತವೆ ಎಂದರು.

ಓದಿ:ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯರಿಗೆ ಬಿಜೆಪಿ ಜಿಲ್ಲಾಧ್ಯಕ್ಷರಿಂದ ಆಮಿಷ; ಆಡಿಯೋ ವೈರಲ್

ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲಿ ಶಿಥಿಲಗೊಂಡ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಉಳ್ಳವರು ಉದಾರವಾಗಿ ದಾನ ಧರ್ಮ ಮಾಡುವ ಮೂಲಕ ನಮ್ಮ ಸಂಸ್ಕೃತಿಯ ಭಾಗವಾದ ಶ್ರದ್ಧಾ ಕೇಂದ್ರಗಳ ಪುನರುತ್ಥಾನಕ್ಕೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

Last Updated : Jan 4, 2021, 10:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.