ತುಮಕೂರು : ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದ ನರಸಿಂಹಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಸಾಮಾನ್ಯ ಸ್ಥಾಯಿ ಸಮಿತಿ ಸಭೆ ನಡೆಯಿತು.
ಜಿಲ್ಲಾ ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ಎಲ್ಲಾ ವಿಚಾರಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಉಪ ಸಮಿತಿಗಳನ್ನು ರಚಿಸಿಕೊಂಡು ಆ ಸಮಿತಿಯ ಮೂಲಕ ಪ್ರತಿ ವಿಷಯವನ್ನೂ ಗಣನೆಗೆ ತೆಗೆದುಕೊಂಡು ಚರ್ಚೆ ನಡೆಸಲಾಗುತ್ತದೆ.
ಹಾಗಾಗಿ ಈ ಚರ್ಚೆಯನ್ನು ಎಲ್ಲರೂ ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಅಷ್ಟೇ ಅಲ್ಲದೆ, ಚರ್ಚೆಯಲ್ಲಿ ಪ್ರಸ್ತಾಪಿಸುವ ವಿಷಯದ ಪ್ರತಿಯನ್ನು ಒಂದೆರಡು ದಿನಗಳ ಮುಂಚೆಯೇ ಇ-ಮೇಲ್ನಲ್ಲಿ ಕಳುಹಿಸಬೇಕು.
ಜೊತೆಗೆ ನೀವು ನೀಡುವಂತಹ ಮಾಹಿತಿಯನ್ನು ಪಿಪಿಟಿಯಲ್ಲೂ ಬರುವಂತೆ ನೋಡಿಕೊಳ್ಳಬೇಕು. ಆಗಮಾತ್ರ ಸಭೆಯಲ್ಲಿ ಚರ್ಚೆ ಆರೋಗ್ಯಕರವಾಗಿ ನಡೆಯುವುದು ಎಂದು ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಡಾ.ಎಸ್ ಪ್ರೇಮ್ ಕುಮಾರ್ ತಿಳಿಸಿದರು. ಇದೇ ವೇಳೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು.