ತುಮಕೂರು : ಭಾರತದಲ್ಲೂ ತಾಲಿಬಾನಿಗಳು, ಭಯೋತ್ಪಾದಕರು ಇದ್ರೆ ನಮ್ಮ ಸೈನ್ಯ ನೋಡಿಕೊಳ್ಳುತ್ತದೆ. ಗಡಿಯಲ್ಲಿ ಭಯೋತ್ಪಾದಕರು, ತಾಲಿಬಾನಿಗಳು ನುಗ್ಗಿದರೆ ನಮ್ಮ ಸೈನ್ಯ ಅವರನ್ನು ಹೊಡೆದು ಹಾಕುತ್ತದೆ ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್ ಅವರು ಸಿದ್ದರಾಮಯ್ಯನವರ 'ತಾಲಿಬಾನಿ ಹೇಳಿಕೆ' ಕುರಿತು ಪ್ರತಿಕ್ರಿಯಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೀಳು ಮಾತುಗಳು, ಕೀಳು ರಾಜಕಾರಣ ಮಾಡಬಾರದು ಎಂದರು. ನಾವು ಜನಪ್ರತಿನಿಧಿಗಳು, ಅದನ್ನು ಮೊದಲು ಅರ್ಥಮಾಡಿಕೊಂಡು ಹೇಳಿಕೆ ಕೊಡಬೇಕು. ನಾವು ಜನರನ್ನು ಪ್ರತಿನಿಧಿಸುತ್ತೇವೆ.
ಹೀಗಾಗಿ, ಜನಪ್ರತಿನಿಧಿಗಳು ಸಂಯಮ, ನಿಷ್ಠೆಯಿಂದ ಇರಬೇಕು ಎಂದು ಜನರು ಬಯಸುತ್ತಾರೆ. ಸಾರ್ವಜನಿಕವಾಗಿ ಒಬ್ಬರಿಗೊಬ್ಬರು ಅವಹೇಳನಕಾರಿಯಾದ ಮಾತನ್ನು ಆಡುವುದು ಸರಿಯಲ್ಲ, ಎರಡೂ ಪಕ್ಷದವರ ಕೆಸರೆರಚಾಟ ಸರಿಯಲ್ಲ ಎಂದರು.
ಇದನ್ನೂ ಓದಿ : ಪ್ರಜಾಪ್ರಭುತ್ವದಲ್ಲಿ ಯಾರಿಗೆ ನಂಬಿಕೆ ಇಲ್ವೋ ಅವರೆಲ್ಲ ತಾಲಿಬಾನಿ ಸಂಸ್ಕೃತಿಯವರು: ಸಿದ್ದರಾಮಯ್ಯ
ಪಂಜಾಬ್‌ನಲ್ಲಿ ದಲಿತ ಸಿಎಂ ಮಾಡಿದ್ದಾರೆ, ನಮ್ಮಲ್ಲೂ ಕೇಳುವಂತಾಗಬಹುದು. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಇಲ್ಲೂ ದಲಿತ ಸಿಎಂ ಕೊಡಬೇಕು ಎಂದು ಕೇಳುವಂತಾಗಬಹುದು.
ಆದರೆ, ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆ ಎಂದರು. ರಾಜ್ಯ ಬಿಜೆಪಿಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಮೂರು ಜನ ಮುಖ್ಯಮಂತ್ರಿ ಆದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ತಿಳಿಸಿದರು.