ETV Bharat / state

ಗಾಯಾಳುಗಳನ್ನು ಕರೆದೊಯ್ಯಲು ಆಂಬ್ಯುಲೆನ್ಸ್ ವಿಳಂಬ.. ಆಸ್ಪತ್ರೆ ಸಿಬ್ಬಂದಿಗೆ ಶಾಸಕ ಜಿ ಪರಮೇಶ್ವರ್ ತರಾಟೆ

ಚಿರತೆ ದಾಳಿಯಿಂದ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್​ ವಿಳಂಬ ಮಾಡಿರುವ ಹಿನ್ನೆಲೆ ಆಸ್ಪತ್ರೆ ಸಿಬ್ಬಂದಿಗೆ ಶಾಸಕ ಜಿ ಪರಮೇಶ್ವರ್​ ತರಾಟೆಗೆ ತೆಗೆದುಕೊಂಡರು.

Kn_tmk
ಗಾಯಾಳುಗಳ ಭೇಟಿ ಮಾಡಿದ ಜಿ ಪರಮೇಶ್ವರ್​
author img

By

Published : Dec 12, 2022, 9:47 AM IST

Updated : Dec 12, 2022, 11:12 AM IST

ಗಾಯಾಳುಗಳ ಭೇಟಿ ಮಾಡಿದ ಶಾಸಕ ಜಿ ಪರಮೇಶ್ವರ್​

ತುಮಕೂರು: ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲೊನಿ ಬಳಿ ಚಿರತೆ ದಾಳಿಯಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್​ ವಿಳಂಬ ಮಾಡಿದ ಹಿನ್ನೆಲೆ ಶಾಸಕ ಡಾ. ಜಿ. ಪರಮೇಶ್ವರ ಸಿಡಿಮಿಡಿಗೊಂಡರು.

ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಾದ ಚೇತನ್, ಧನುಷ್, ರಾಜು ಅವರನ್ನು ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿದರು. ಬಳಿಕ ಸಮಯಕ್ಕೆ ಆಂಬ್ಯುಲೆನ್ಸ್​ ಬಾರದೇ ಇರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ ಅವರು, ಆಸ್ಪತ್ರೆ ಮುಂದೆಯೇ ಆಂಬ್ಯುಲೆನ್ಸ್ ಇದ್ದರೂ ಇಲ್ಲ ಎಂದು ಸಿಬ್ಬಂದಿ ಹೇಳಿರುವುದಕ್ಕೆ ಸಿಬ್ಬಂದಿನ್ನು ತರಾಟೆಗೆ ತೆಗೆದುಕೊಂಡರು.

ಅಲ್ಲದೇ ಆರೋಗ್ಯಾಧಿಕಾರಿಗೆ ಕರೆ ಮಾಡಿ ಈ ವಿಷಯವನ್ನು ಗಮನಕ್ಕೆ ತಂದರು. ಇದೊಂದು ಗಂಭೀರ ಲೋಪವಾಗಿದೆ. ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಮತ್ತು ಆಯುಕ್ತರ ಬಳಿ ಮಾತನಾಡುವೆ. ಸರ್ಕಾರಿ ಆಸ್ಪತ್ರೆಯ ತುರ್ತು ವಾಹನದವರು, ಖಾಸಗಿ ತುರ್ತು ವಾಹನದವರೊಂದಿಗೆ ಕೈಜೋಡಿಸಿ ಉದ್ದೇಶ ಪೂರ್ವಕವಾಗಿ ಜನರಿಗೆ ತುರ್ತು ಸೇವೆ ನೀಡದಿರುವ ಬಗ್ಗೆ ಸ್ಥಳೀಯರಿಂದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ತಾಕೀತು ಮಾಡಲಾಗುವುದು ಎಂದು ಪರಮೇಶ್ವರ್​ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ವಕೀಲನ ಮೇಲೆ ಹಲ್ಲೆ ಆರೋಪ ಪ್ರಕರಣ: ಎಸ್​ಐ ಸುತೇಶ್ ಸಸ್ಪೆಂಡ್

Last Updated : Dec 12, 2022, 11:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.