ETV Bharat / state

ಬಾರ್ ಕೋಡ್ ಇರುವ ಕಾರ್ಡ್​ಗಳನ್ನು ಮತದಾರರಿಗೆ ವಿತರಿಸಿ ವಂಚನೆ: ಬಿಜೆಪಿ ಆರೋಪ

author img

By

Published : Jun 1, 2023, 5:25 PM IST

Updated : Jun 1, 2023, 5:35 PM IST

ಮತದಾನ ಬಳಿಕ ಕಾರ್ಡ್​ ಬಳಸಬಹುದು ಎಂದು ಸುಳ್ಳು ಭರವಸೆ ನೀಡಿ, ಮತದಾರರಿಗೆ ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್​ ನವೀನ್​ ಆರೋಪಿಸಿದರು.​​

fraud-by-distribution-of-barcoded-cards-to-voters-bjp-alleges
fraud-by-distribution-of-barcoded-cards-to-voters-bjp-alleges
ಬಾರ್ ಕೋಡ್ ಇರುವ ಕಾರ್ಡ್​ಗಳನ್ನು ಮತದಾರರಿಗೆ ವಿತರಿಸಿ ವಂಚನೆ: ಬಿಜೆಪಿ ಆರೋಪ

ತುಮಕೂರು: ಕುಣಿಗಲ್​ ಕ್ಷೇತ್ರದಲ್ಲಿ ಕಾಂಗ್ರೆಸ್​​ ಪಕ್ಷದವರು ಬಾರ್​ ಕೋಡ್​ ಮತ್ತು ಕ್ಯೂಆರ್ ಕೋಡ್​ ಇರುವ ಕಾರ್ಡ್​ಗಳನ್ನು ಮತದಾರರಿಗೆ ಹಂಚಿ ಸುಳ್ಳು ಭರವಸೆಗಳನ್ನು ನೀಡಿ ಗೆದ್ದಿದ್ದಾರೆ ಎಂದು ವಿಧಾನ ಪರಿಷತ್​ ಸದದ್ಯ ಕೆ.ಎಸ್ ನವೀನ್​ ಅವರು ಆರೋಪಿಸಿದರು.​​

ತುಮಕೂರು ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾರರಿಗೆ ಹಂಚಿರುವ ಕಾರ್ಡ್​ನಲ್ಲಿ ಅಭ್ಯರ್ಥಿ ಕ್ರಮ ಸಂಖ್ಯೆ, ಕಾಂಗ್ರೆಸ್​​ ಪಕ್ಷದ ಚಿಹ್ನೆ, ಬಾರ್ ಕೋಡ್ ಹಾಗೂ ಕ್ಯೂ ಆರ್ ಕೋಡ್ ಇದ್ದು ಕುಣಿಗಲ್ ಕ್ಷೇತ್ರದ ಮತದಾರರನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸಲಾಗಿದೆ. ಸುಮಾರು 60 ಸಾವಿರ ಕಾರ್ಡ್​ಗಳನ್ನು ಮನೆ ಮನೆಗೆ ಹಂಚಿ ಕಾರ್ಡ್​ನ್ನು ಎಟಿಎಮ್ ರೀತಿ ಬಳಸಬಹುದು. ಗಿಫ್ಟ್​​​ ಖರೀದಿ ಮಾಡಬಹುದು ಎಂದು ಮತದಾರರಿಗೆ ಸುಳ್ಳು ಆಮಿಷ ಒಡ್ಡಿ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಮತದಾನ ಬಳಿಕ ಕಾರ್ಡ್ ಅನ್ನು ಬಳಸಬಹುದು ಎಂದು ಸುಳ್ಳು ಭರವಸೆ ನೀಡಿ, ಮತದಾರರಿಗೆ ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ. ಕುಣಿಗಲ್​ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ರಂಗನಾಥ್​ ಅವರು ಅಕ್ರಮವಾಗಿ ಗೆದ್ದಿರುವ ವಿರುದ್ಧ ಮತದಾರರ ಮೂಲಕ ಕೇಸ್ ದಾಖಲಿಸಿ ಕಾನೂನು ಹೋರಾಟ ಮಾಡುತ್ತೇವೆ. ಹೈ ಕೋರ್ಟ್​ನಲ್ಲಿ ಕೇಸ್ ದಾಖಲು ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಡಾ. ರಂಗನಾಥ್ ಅಕ್ರಮ ಮಾಡುವುದರಲ್ಲಿ ಎತ್ತಿದ ಕೈ. ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೂ ಕುಕ್ಕರ್ ಹಂಚಿದ್ದರು. ಈ ಬಗ್ಗೆ ಕೇಸ್ ದಾಖಲಿಸಿದರೂ ಕೂಡ ಚುನಾವಣೆಯಲ್ಲಿ ಅಕ್ರಮ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೇಗೆ ಮಾಡಿದ ಹೋರಾಟ ರೀತಿಯಲ್ಲಿ ಕುಣಿಗಲ್ ಕ್ಷೇತ್ರದಲ್ಲೂ ಕೂಡ ಮಾಡುತ್ತೇವೆ ಎಂದು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹೆಚ್ಚು ಅಕ್ರಮ‌ ನಡೆದಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಮುಂಚೆಯಿಂದಲೂ ಇದೆ ಮಾಡಿದೆ. ಕಾನೂನು ಹೋರಾಟ ಮಾಡಲು ಕುಣಿಗಲ್ ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ ಎಂದು ವಿಧಾನ ಪರಿಷತ್​ ಸದಸ್ಯ ಕೆ.ಎಸ್​ ನವೀನ್​ ಹೇಳಿದರು.

ವಚನಭ್ರಷ್ಟ ಕಾಂಗ್ರೆಸ್​: ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ವಿಚಾರದಲ್ಲಿ ನುಡಿದಂತೆ ನಡೆಯದೇ ಇದ್ದರೆ ನಾವು ನಿಮಗೆ ವಚನಭ್ರಷ್ಟ ಪಟ್ಟ ಕಟ್ಟುತ್ತೇವೆ. ಜೊತೆಗೆ ವಚನಭ್ರಷ್ಟ ಪೋಸ್ಟರ್ ರಿಲೀಸ್ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಎಚ್ಚರಿಕೆ ನೀಡಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಸರ್ಕಾರದ ಸಚಿವ ಸಂಪುಟ ಸಭೆ ಶುಕ್ರವಾರ ನಡೆಯಲಿದೆ. ಈಗಾಗಲೇ ಸರ್ಕಾರ ರಚನೆ ಆಗುವ ಮೊದಲು, ಅಧಿಕಾರಕ್ಕೆ ಬರುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರ್ನಾಟಕದ ಜನತೆಗೆ ಏನು ಮಾತು ಕೊಟ್ಟಿದ್ದಾರೋ, ವಚನ ನೀಡಿದ್ದಾರೋ ಆ ಪ್ರಕಾರ ನಡೆಯಬೇಕೆಂದು ಬಿಜೆಪಿ ಆಗ್ರಹಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಬಿಎಸ್​ವೈ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ: ಗೇಟ್​ವರೆಗೂ ಬಂದು ಸ್ವಾಗತ ಕೋರಿದ ಯಡಿಯೂರಪ್ಪ

Last Updated : Jun 1, 2023, 5:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.