ETV Bharat / state

ಚಿನ್ನಾಭರಣ ದರೋಡೆ : ನಾಲ್ವರು ಅಂತಾರಾಜ್ಯ ದರೋಡೆಕೋರರ ಬಂಧನ - four interstate accused arrested in gold theft case

ಕಳೆದ ಮೇ 5 ರಂದು ನಗರದ ಎಂಜಿ ರೋಡ್ ಬಳಿ ಚಿನ್ನ ಸರಬರಾಜು ಮಾಡುತ್ತಿದ್ದ ವ್ಯಕ್ತಿಗೆ ದಾಳಿ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಡಿವೈಎಸ್ ಪಿ ಶ್ರೀನಿವಾಸ್ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಿ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.

four-interstate-accused-arrested-in-gold-theft-case
ಚಿನ್ನಾಭರಣ ದರೋಡೆ : ನಾಲ್ವರು ಅಂತಾರಾಜ್ಯದ ದರೋಡೆಕೋರರ ಬಂಧನ
author img

By

Published : Jul 9, 2022, 3:35 PM IST

ತುಮಕೂರು : ಜ್ಯುವೆಲ್ಲರಿ ಶಾಪ್ ಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಅಂತರ್ ರಾಜ್ಯ ದರೋಡೆಕೋರರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಹಾರಾಷ್ಟ್ರ ಮೂಲದ ದಿಗಂಬರ್ ಕಿರಣ್ ಕುಂಡ್ಲಿಕ್ ಸುಳೆ, ರಾಜಸ್ಥಾನ ಮೂಲದ ಸಿದ್ದನಾಥ ರಾಮಚಂದ್ರ ಪಡಾಲ್ಕರ್, ಹರ್ಷವರ್ಧನ್ ಬಾಳಿರಾಂ ಮಾನೆ, ವಿವೇಕ್ ದೌಲತ್ ರಾವ್ ಮೇಟ್ ಕರಿ ಹಾಗೂ ಓರ್ವ ಬಾಲಪರಾಧಿ ತಿಳಿದುಬಂದಿದೆ. ಬಂಧಿತರಿಂದ 53,33,000 ರೂ ಮೌಲ್ಯದ 1 ಕೆಜಿ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ಚಿನ್ನಾಭರಣ ದರೋಡೆ : ನಾಲ್ವರು ಅಂತಾರಾಜ್ಯದ ದರೋಡೆಕೋರರ ಬಂಧನ

ಪ್ರಕರಣದ ಪ್ರಮುಖ ಆರೋಪಿ ದಿಗಂಬರ್ ಕಿರಣ್ ನಗರದ ಗೋಲ್ಡ್ ಟೆಸ್ಟಿಂಗ್ ಶಾಪ್ ನಲ್ಲಿ ಕೆಲಸಕ್ಕಿದ್ದನು. ಈ ಮಧ್ಯೆ ರಜೆ ನಿಮಿತ್ತ ರಾಜಸ್ಥಾನಕ್ಕೆ ಹೋದಾಗ ತನ್ನ ಸ್ನೇಹಿತರಿಗೆ ಸುಲಭವಾಗಿ ಹಣ ಗಳಿಸುವ ಬಗ್ಗೆ ಮಾಹಿತಿ ನೀಡಿದ್ದನು. ನಗರದಲ್ಲಿ ಓರ್ವ ವ್ಯಕ್ತಿ ಬೆಂಗಳೂರಿನಿಂದ ತುಮಕೂರಿಗೆ ಚಿನ್ನಾಭರಣಗಳನ್ನು ಸರಬರಾಜು ಮಾಡುತ್ತಿದ್ದಾನೆ. ಆತನನ್ನು ದರೋಡೆ ಮಾಡಿದರೆ ಸುಲಭವಾಗಿ ಹಣ ಗಳಿಸಬಹುದು ಎಂದು ತನ್ನ ಗೆಳೆಯರಿಗೆ ತಿಳಿಸಿದ್ದ . ಯೋಜನೆಯಂತೆ ಈ ಆರೋಪಿಗಳು ನಗರದಲ್ಲಿ ಲಾಡ್ಜ್ ನಲ್ಲಿ ತಂಗಿ ದರೋಡೆ ಮಾಡಲು ಕಾಯುತ್ತಿದ್ದರು.

four-interstate-accused-arrested-in-gold-theft-case
ಚಿನ್ನಾಭರಣ ದರೋಡೆ : ನಾಲ್ವರು ಅಂತಾರಾಜ್ಯದ ದರೋಡೆಕೋರರ ಬಂಧನ

ಅಂತೆಯೇ ಕಳೆದ ಮೇ 5 ರಂದು ನಗರದ ಎಂಜಿ ರೋಡ್ ಬಳಿ ಚಿನ್ನ ಸರಬರಾಜು ಮಾಡುತ್ತಿದ್ದ ವ್ಯಕ್ತಿಗೆ ದಾಳಿ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಘಟನೆ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಡಿವೈಎಸ್ ಪಿ ಶ್ರೀನಿವಾಸ್ ನೇತೃತ್ವದಲ್ಲಿ ಮೂರು ವಿಶೇಷ ತಂಡ ರಚಿಸಿ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.

ಓದಿ : ಬೆಳಗಾವಿಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾರು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.