ತುಮಕೂರು : ಹಾಲಿ ಕುಣಿಗಲ್ನ ಕಾಂಗ್ರೆಸ್ ಶಾಸಕ ರಂಗನಾಥ್ ಅವರು ಕೆಪಿಸಿಸಿ ಅಧ್ಯಕ್ಷರ ಸಂಬಂಧಿ, ಅವರನ್ನು ಬಿಟ್ಟು ನನಗೆ ಟಿಕೆಟ್ ಕೊಡುತ್ತಾರಾ? ಎಂಬ ಪ್ರಶ್ನೆಯಿದೆ. ಆದರೆ, ನಾನು ಹಾಲಿ ಸಂಸದನಿದ್ದಾಗ ಏಕೆ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಟಿಕೆಟ್ ತಪ್ಪಿಸಿದ್ದರು. ಆಗ ನನ್ನ ರಕ್ಷಣೆಗೆ ಯಾಕೆ ಯಾರೂ ಬರಲಿಲ್ಲ ಎಂದು ಮಾಜಿ ಸಂಸದ ಮುದ್ದಹನುಮೇಗೌಡ ಪ್ರಶ್ನಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಟ್ಟಿಂಗ್ ಎಂಎಲ್ಎ ರಕ್ಷಣೆ ಮಾಡುವುದಾದರೆ ಸಿಟ್ಟಿಂಗ್ ಎಂಪಿನಾ ಯಾಕೆ ರಕ್ಷಣೆ ಮಾಡಿಲ್ಲ. ನ್ಯಾಯ ಎಂದರೆ ಎಲ್ಲರಿಗೂ ಒಂದೇ ಅಲ್ವಾ?. ನನಗೆ ಪಕ್ಷದಿಂದ ಅನ್ಯಾಯವಾಗಿದೆ. ಕುಣಿಗಲ್ ಕ್ಷೇತ್ರದಿಂದ ಟಿಕೆಟ್ ಸಿಗದೆ ಇದ್ದರೆ ರಾಹುಲ್ ಗಾಂಧಿ, ಸೋನಿಯಾಗಾಂಧಿ ಬಳಿ ಹೋಗುತ್ತೇನೆ ಎಂದರು.
ಟಿಕೆಟ್ಗಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ. ರಾಜ್ಯಸಭಾ ಸದಸ್ಯನನ್ನಾಗಿ ಮಾಡುತ್ತೇವೆ ಎಂದಿದ್ದರು. ಕಳೆದ ಬಾರಿ ರಾಜ್ಯದಲ್ಲಿ 10 ಮಂದಿ ಹಾಲಿ ಸದಸ್ಯರಲ್ಲಿ ನನಗೆ ಮಾತ್ರ ಅನ್ಯಾಯ ಮಾಡಿದ್ದರು. ಹಾಗಾಗಿ, ವಿಧಾನಸಭೆ ಟಿಕೆಟ್ ಕೊಡಬಹುದು ಎಂಬ ವಿಶ್ವಾಸವಿದೆ ಎಂದರು.
ಓದಿ: ಕಲಬುರಗಿ : ಯುವಕನನ್ನ ಬರ್ಬರವಾಗಿ ಹತ್ಯೆಗೈದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ