ತುಮಕೂರು : ಭಾರತದಲ್ಲಿ ಎಲ್ಲಿಯೂ ಬುರ್ಖಾ ಸಂಸ್ಕೃತಿ ಇರಲಿಲ್ಲ. ಮೊದಲು ಆ ಸಂಸ್ಕೃತಿಯನ್ನು ತೆಗೆದು ಹಾಕಬೇಕಿದೆ. ಯಾರು ಬುರ್ಖಾ ಬೇಕು ಎನ್ನುತ್ತಿದ್ದಾರೆ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅನ್ವಯ ಅವರನ್ನು ಬಂಧಿಸಬೇಕು. ದೇಶದ ಕಾನೂನು ಬೇಡ ಎನ್ನುವವರು ಎಲ್ಲರೂ ತಾಲಿಬಾನಿಗಳು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ಖಾನ್ ಒಂದು ರೀತಿ ತಾಲಿಬಾನ್ ಆಗಿದ್ದಾನೆ. ಬೆಂಗಳೂರಿನಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಹೊಡೆದಿದ್ದಾರೆ. ಅಸಾದುಲ್ಲಾ ಓವೈಸಿ ಅವರನ್ನು ಬಂಧಿಸಬೇಕು. ಶರಿಯತ್ ಕಾನೂನು ಇದ್ದಾಗ ಅವರ ಆಟಾಟೋಪಗಳು ನಿಲ್ಲುತ್ತವೆ ಎಂದಿದ್ದಾರೆ.
ಓವೈಸಿಯನ್ನು ಬಂಧಿಸಿ ಜೈಲಿಗೆ ಹಾಕಬೇಕು. ಇವನು ಜಿನ್ನಾನ ವಂಶಸ್ಥ. ಇವರೆಲ್ಲಾ ದೇಶದ್ರೋಹಿಗಳು. ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ. ಜಾತಿಯ ದೇವರುಗಳಾಗಿದ್ದಾರೆ. ಹಿಂದೂಗಳೆಲ್ಲಾ ಒಂದೇ ಆಗಿದ್ದರೆ ಅವರು ಉಸಿರು ಬಿಡುತ್ತಿರಲಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಸೊಗಡು ಶಿವಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಓದಿ : ವರ್ಗಾವಣೆ ದಂಧೆಗೆ ಬ್ರೇಕ್, ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ ವ್ಯವಸ್ಥೆಗೂ ತೆರೆ: ಸಚಿವ ಸುನೀಲ್ ಕುಮಾರ್