ತುಮಕೂರು: ಕಾಂಗ್ರೆಸ್ಗೆ ವಾಪಸ್ ಬಂದ್ಬಿಡಿ ತಲೆ ಮೇಲೆ ಹೊತ್ತುಕೊಂಡು ನಿಮ್ಮನ್ನು ಎಂಪಿ ಮಾಡ್ಕೋತಿವಿ ಎಂದು ತುಮಕೂರು ಬಿಜೆಪಿ ಸಂಸದ ಜಿ.ಎಸ್ ಬಸವರಾಜುಗೆ ಭರವಸೆ ಕೊಟ್ಟಿದ್ದೇ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದರು.
ತುಮಕೂರು ತಾಲೂಕು ಕೋರ ಗ್ರಾಮದಲ್ಲಿ ನಡೆದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಅವರು ಬಹಿರಂಗಪಡಿಸಿದರು.
ಕುಡಿದ ನೀರು ಅಲ್ಲಾಡದಂಗೆ ನೋಡ್ಕೋತಿವಿ ಅಂದ್ರೂ ಬಿಜೆಪಿ ಸಂಸದ ಬಸವರಾಜ್ ಬರಲಿಲ್ಲ. ಅಲ್ಲದೇ ನಾನು ಬಿಜೆಪಿಯಲ್ಲಿಯೇ ಉಳಿದುಕೊಳ್ಳೋದಾಗಿ ಹೇಳಿ ಅಲ್ಲೇ ಉಳಿದುಕೊಂಡಿದ್ದಾರೆ. ಇಂದು ತುಮಕೂರು ಸಂಸದರಾಗಿದ್ದಾರೆ ಎಂದರು.
ರಾಜಕಾರಣದಲ್ಲಿ ಆ ಪಕ್ಷ ಈ ಪಕ್ಷ ಎಂಬ ವ್ಯತ್ಯಾಸವಿರುತ್ತೆ. ಸಾರ್ವಜನಿಕ ಬದುಕಿಗೆ ಬಂದಾಗ ನಾವು ಪ್ರತಿನಿಧಿಸುವ ಕ್ಷೇತ್ರ, ರಾಜ್ಯ ಹಾಗೂ ದೇಶದ ವಿಚಾರ ಬಂದಾಗ ನಮ್ಮಲ್ಲಿ ವ್ಯತ್ಯಾಸ ಇರಲ್ಲ ಎಂದರು. ಹಾಗೂ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಯಾವುದೇ ರಾಜಕಾರಣ ಮಾಡಬಾರದು ಎಂದು ಇದೇ ವೇಳೆ ತಿಳಿಸಿದರು.