ETV Bharat / state

ವೇದಕ್ಕೆ, ಶಾಸ್ತ್ರಕ್ಕೆ ಮಣಿಯದವರು ಜಾನಪದ ಹಾಡಿಗೆ ಮಣಿಯುತ್ತಾರೆ : ವಿದ್ವಾಂಸ ಪಾವಗಡ ಸಣ್ಣ ನಾಗಪ್ಪ - ತುಮಕೂರು ವಿಶ್ವವಿದ್ಯಾಲಯ

ಜಾನಪದ ಮತ್ತು ಜನಸಂಸ್ಕೃತಿ ಇವೆರಡು ಪದಗಳು ಬಹಳ ಮುಖ್ಯವಾದವು. ಜಾನಪದ ಎಂಬುದರಲ್ಲಿ ಜನ ಸಂಸ್ಕೃತಿ ಇದೆ ಎಂದು ಜಾನಪದ ವಿದ್ವಾಂಸ ಪಾವಗಡ ಸಣ್ಣ ನಾಗಪ್ಪ ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ 'ಜಾನಪದ-ಶ್ರಮ ಜೀವನದ ಪ್ರತಿಬಿಂಬ' ಎಂಬ ವಿಚಾರ ಸಂಕಿರಣ
author img

By

Published : Mar 21, 2019, 1:16 AM IST

ತುಮಕೂರು: ಜಾನಪದವೇ ಜನಪದರಿಗೆ ಜೀವನದ ಕಾವ್ಯವಾಗಿತ್ತು, ವೇದಕ್ಕೆ, ಶಾಸ್ತ್ರಕ್ಕೆ ಮಣಿಯದವರು, ಜಾನಪದ ಹಾಡಿಗೆ ಮಣಿಯುತ್ತಾರೆ, ಎಂದು ವಿದ್ವಾಂಸ ಪಾವಗಡ ಸಣ್ಣ ನಾಗಪ್ಪ ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದಲ್ಲಿ 'ಜಾನಪದ-ಶ್ರಮ ಜೀವನದ ಪ್ರತಿಬಿಂಬ' ಎಂಬ ವಿಚಾರ ಸಂಕಿರಣ

ತುಮಕೂರು ವಿಶ್ವವಿದ್ಯಾಲಯದಲ್ಲಿ 'ಜಾನಪದ-ಶ್ರಮ ಜೀವನದ ಪ್ರತಿಬಿಂಬ' ಎಂಬ ವಿಚಾರ ಸಂಕಿರಣವನ್ನು ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವೈ. ಎಸ್. ಸಿದ್ದೇಗೌಡ ಉದ್ಘಾಟಿಸಿ ಮಾತನಾಡಿದರು. ಇಂದು ದೃಶ್ಯ ಮಾಧ್ಯಮದಿಂದ ಜಾನಪದಮರೀಚಿಕೆಯಾಗುತ್ತಿದೆ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂದು ಹೇಳುತ್ತಾರೆ, ಆ ಗಾದೆಗಳನ್ನು ನಮ್ಮ ಜಾನಪದದಲ್ಲಿ ಕಾಣಬಹುದು.ನಮ್ಮ ಜೀವನವನ್ನು ಯಶಸ್ವಿಯಾಗಿ ಕೊಂಡೊಯ್ಯಲು ಜನಪದದ ಮಹತ್ವ ಅರಿತರೆ ಸಾಕು ಎಂದರು.

Intro:ತುಮಕೂರು: ಜನಪದವೇ ಜನಪದರಿಗೆ ಜೀವನದ ಕಾವ್ಯ ವಾಗಿತ್ತು, ವೇದಕ್ಕೆ ಮಣಿಯದವರು, ಶಾಸ್ತ್ರಕ್ಕೆ ಮಣಿಯದವರು, ಜಾನಪದ ಹಾಡಿಗೆ ಮಣಿಯುತ್ತಾರೆ ಎಂದು ಜನಪದ ವಿದ್ವಾಂಸ ಪಾವಗಡ ಸಣ್ಣ ನಾಗಪ್ಪ ತಿಳಿಸಿದರು.

Body:ತುಮಕೂರು ವಿಶ್ವವಿದ್ಯಾಲಯದಲ್ಲಿ ಜಾನಪದ-ಶ್ರಮ ಜೀವನದ ಪ್ರತಿಬಿಂಬ ಎಂಬ ವಿಚಾರ ಸಂಕಿರಣವನ್ನು ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವೈ ಎಸ್ ಸಿದ್ದೇಗೌಡ ಉದ್ಘಾಟಿಸಿ ಮಾತನಾಡಿದರು.
ಇಂದು ದೃಶ್ಯ ಮಾಧ್ಯಮದಿಂದ ಜನಪದ ಮರೀಚಿಕೆಯಾಗುತ್ತಿದೆ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂದು ಹೇಳುತ್ತಾರೆ, ಆ ಗಾದೆಗಳನ್ನು ನಮ್ಮ ಜನಪದದಲ್ಲಿ ಕಾಣಬಹುದು, ನಮ್ಮ ಜೀವನವನ್ನು ಯಶಸ್ವಿಯಾಗಿ ಕೊಂಡೊಯ್ಯಲು ಜನಪದ ಮಹತ್ವ ಅರಿತರೆ ಸಾಕು ಎಂದರು.
ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿದ, ಪಾವಗಡ ಸಣ್ಣ ನಾಗಪ್ಪ ನಾಗರಿಕತೆಯ ಅಬ್ಬರದ ಗಾಳಿ ಎಷ್ಟೇ ಬೀಸಿದರು ಸಹ ಜನಪದ ಸೊಗಡು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಇದೆ ಎಂಬುದನ್ನು ಇಂದು ತಿಳಿಸುತ್ತಿದೆ. ಆಧುನಿಕತೆಯಲ್ಲಿ ಕನ್ನಡ ನಾಡಿನ ಜನಪದ ಎಲ್ಲೋ ಒಂದು ಕಡೆ ಮರೆಯಾಗುತ್ತಿದೆ, ಆದರೆ ಜನಪದದ ಸೊಗಡು ಇನ್ನು ಗ್ರಾಮೀಣ ಪ್ರದೇಶದಲ್ಲಿ ಇದೆ. ಆದರೆ ಅದನ್ನು ಸಮಾಜಕ್ಕೆ ನೀಡುವ ಶಕ್ತಿ ಎಲ್ಲಿದೆ? ಎಂಬುದನ್ನು ಹುಡುಕ ಬೇಕಾಗಿರುವುದು ನೋವಿನ ಸಂಗತಿ ಎಂದರು.
ಜನಪದ ಎಂದರೆ ಜನರೊಡನೆ ಜನಮನವಾಗುವಂತಹದ್ದು, ಜನಪದ ಮತ್ತು ಜನಸಂಸ್ಕೃತಿ ಇವೆರಡು ಪದಗಳು ಬಹಳ ಮುಖ್ಯವಾದವು. ಜನಪದ ಎಂಬುದರಲ್ಲಿ ಜನ ಸಂಸ್ಕೃತಿ ಇದೆ. ಜನ ಸಂಸ್ಕೃತಿ ಹಳ್ಳಿಗಳಲ್ಲಿ, ಗ್ರಾಮೀಣ ಜನರು ಹೊಲ- ಗದ್ದೆಗಳಲ್ಲಿ, ಹಬ್ಬ-ಹುಣ್ಣಿಮೆಗಳಲ್ಲಿ, ಸುಖ ದುಃಖದ ಸಂದರ್ಭಗಳಲ್ಲಿ ಒಂದು ಕಡೆ ಸೇರಿ ಹಾಡುವ, ನಲಿಯುವ ಕಾಲಘಟ್ಟ ಅಂದು ಇತ್ತು. ಜನಪದವೇ ಜನಪದರಿಗೆ ಜೀವನದ ಕಾವ್ಯವಾಗಿ ಕಾವ್ಯವಾಗಿದೆ. ವೇದಕ್ಕೆ ಮಣಿಯದವರು, ಶಾಸ್ತ್ರಕ್ಕೆ ಮಣಿಯದವರು ಜನಪದ ಹಾಡಿಗೆ ತಲೆ ಬಾಗುತ್ತಾರೆ ಎಂದರು.

Conclusion:ನನ್ನನ್ನು ವಿದ್ವಾಂಸ ಎಂದು ಕರೆಯುತ್ತಾರೆ ಆದರೆ ನಾನು ಖಂಡಿತ ವಿದ್ವಾಂಸನಲ್ಲ, ನಾನು ಇನ್ನು ವಿದ್ಯಾರ್ಥಿ ಎಂದರು. ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುವ ಮೂಲಕ ಪ್ರತಿದಿನವೂ ಒಂದಲ್ಲ ಒಂದು ವಿಷಯವನ್ನು ಕಲಿಯುತ್ತ ಹೋಗಬೇಕು ಎಂದು ಕಿವಿ ಮಾತನ್ನು ಹೇಳಿದರು.

ವರದಿ
ಸುಧಾಕರ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.