ತುಮಕೂರು:ಹಣ ದೋಚುವ ಹುನ್ನಾರದಿಂದ ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಐವರು ಆರೋಪಿಗಳನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
ಮಾರುತಿ, ಧನರಾಜ ನಾಯ್ಕ, ರಾಜೇಶ, ಮನು, ಧನು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಂದು ಸ್ವಿಫ್ಟ್ ಕಾರು, ಎರಡು ಕಬ್ಬಿಣದ ರಾಡುಗಳು, 7 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಆಗಸ್ಟ್ 21ರಂದು ರಾತ್ರಿ 11 ಗಂಟೆ ಸಂದರ್ಭದಲ್ಲಿ ತುಮಕೂರು ನಗರದ ಮರಳೇನಹಳ್ಳಿ ರಸ್ತೆಯ ಡಿಎಂ ಪಾಳ್ಯದಲ್ಲಿ 23 ವರ್ಷದ ಅಂಜಲಿ ಎಂಬುವರನ್ನು ಕೊಲೆ ಮಾಡಲಾಗಿತ್ತು. ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐವರು ಆರೋಪಿಗಳು ಹಣದ ಆಸೆಗಾಗಿ ಅಂಜಲಿ ಎಂಬುವರನ್ನು ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ.