ತುಮಕೂರು: ಚಿತ್ರನಟ ಜಗ್ಗೇಶ್ ಒಂದು ದಿನ ಸ್ಮಶಾನ ಕಾಯುವ ಕಾಯಕ ಮಾಡಿದ್ದರಂತೆ
ಹೌದು.. ಅಚ್ಚರಿಯಾದರು ಇದು ಸತ್ಯ. ತಮ್ಮ ಹುಟ್ಟೂರಾದ ತುರುವೇಕೆರೆ ತಾಲೂಕಿನ ಆನಗೋಡು ಗ್ರಾಮದಲ್ಲಿ ಭೈರವೇಶ್ವರ ದೇಗುಲ ನಿರ್ಮಿಸಲು ಒಂದು ದಿನ ಸ್ಮಶಾನ ಕಾಯುವ ಕಾಯಕ ಮಾಡಿದ್ದರಂತೆ. ತಹುದೊಂದು ವಿಭಿನ್ನವಾದ ಪೂಜಾ ವಿಧಿ ವಿಧಾನವನ್ನು ಜಗ್ಗೇಶ್ ನೆರವೇರಿಸಿರುವುದು ಕಾಶಿಯಲ್ಲಿ. ತಮ್ಮ ಹುಟ್ಟೂರಿನಲ್ಲಿ ಭೈರವೇಶ್ವರ ದೇವಸ್ಥಾನ ನಿರ್ಮಿಸುವ ಮುನ್ನ ಜ್ಯೋತಿಷಿಗಳ ಬಳಿ ತೆರಳಿ ಸಲಹೆ ಪಡೆದಿದ್ದರಂತೆ.
ಭೈರವ ಎಲ್ಲ ದೇವರಂತೆ ಅಲ್ಲ. ಕಾಶಿಗೆ ಹೋಗಿ ಒಪ್ಪಿಗೆ ತೆಗೆದುಕೊಂಡು ಬರಬೇಕು. ಅಲ್ಲಿ ಒಂದು ದಿನ ಚಾಂಡಾಲ ವೃತ್ತಿಯನ್ನು ಮಾಡಬೇಕು. ಸ್ಮಶಾನದಲ್ಲಿ ವಾಸ ಮಾಡಬೇಕು ಎಂದು ಜ್ಯೋತಿಷಿಗಳು ತಿಳಿಸಿದ್ದರಂತೆ. ಅದರಂತೆ ಕಾಶಿಯಲ್ಲಿರುವ ಹರಿಶ್ಚಂದ್ರ ಘಾಟ್ನಲ್ಲಿ ರಾತ್ರಿ ಏಳು ಗಂಟೆಯಿಂದ ಬೆಳಗ್ಗೆ ಏಳು ಗಂಟೆಯವರೆಗೂ ಇದ್ದು 11 ಶವ ಸಂಸ್ಕಾರದಲ್ಲಿ ಭಾಗಿಯಾಗಿದ್ದರಂತೆ ಜಗ್ಗೆಶ್.
ಅಂತ್ಯ ಸಂಸ್ಕಾರಕ್ಕೆ ಪೂರಕವಾದ ಕೆಲಸಗಳನ್ನು ಮಾಡಿದ್ದೆ. ಅಲ್ಲಿ ಪ್ರಸಾದವಾಗಿ ಕೊಟ್ಟಂತಹ ವಿಭೂತಿಯನ್ನು ಮೈ ತುಂಬ ಬಳಿದುಕೊಂಡು, ಗಂಗಾ ನದಿಯಲ್ಲಿ ಸ್ನಾನ ಮಾದೆ. ಆನಂತರ ಕಾಶಿಗೆ ತೆರಳಿ ಶಿವನ ಆರಾಧನೆ, ರುದ್ರಾಭಿಷೇಕದಲ್ಲಿ ಪಾಲ್ಗೊಂಡು ಪ್ರಾರ್ಥನೆ ಮಾಡಿದ್ದೆ. ಅಲ್ಲಿ ನನ್ನ ಕಾಲಿಗೆ ಭೈರವನ ಬಳೆ ಹಾಕಿ ಕಳುಹಿಸಿಕೊಟ್ಟಿದ್ದಾರೆ. ನಿಮ್ಮ ಕೆಲಸ ಸಂಪನ್ನವಾಗಲಿದೆ ಎಂದಿದ್ದಾರೆ ಎಂದು ಜಗ್ಗೇಶ್ ಹೇಳಿದರು.
ಜಗ್ಗೇಶ್ ತಮ್ಮ ಹಿರಿಯರ ಕಾಲದಿಂದಲೂ ಪೂಜಿಸಿಕೊಂಡು ಬಂದಂತಹ ಕಾಲ ಭೈರವೇಶ್ವರ ದೇವರಿಗೆ ದೇವಸ್ಥಾನವನ್ನು ಕಟ್ಟಿ ಲೋಕಾರ್ಪಣೆ ಮಾಡಿದ್ದಾರೆ. ಎರಡು ದಿನಗಳ ಕಾಲ ವಿವಿಧ ಪೂಜಾ ವಿಧಿ ವಿಧಾನಗಳು ನಡೆದವು.ದೇವಾಯಲಯದ ಉದ್ಘಾಟನೆಗೆ ಮೈಸೂರು ರಾಜವಂಶಸ್ಥ ಯದುವೀರ್ ಶ್ರೀಕೃಷ್ಣದತ್ತ ನರಸಿಂಹರಾಜ ಒಡೆಯರ್ ಆಗಮಿಸಿದ್ರು. ಜಗ್ಗೇಶ್ ಹುಟ್ಟೂರಿಗೆ ಆಗಮಿಸಿದ ಒಡೆಯರ್ಗೆ ಪೂರ್ಣ ಕುಂಭದ ಮೂಲಕ ಸ್ವಾಗತಿಸಲಾಯಿತು. ಅಲ್ಲದೇ ಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.