ETV Bharat / state

ಫಾಸ್ಟ್​​​ಟ್ಯಾಗ್ ಕಡ್ಡಾಯ ಹಿನ್ನೆಲೆ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡಲು ಆಗ್ರಹ - ವಾಹನಗಳಿಗೂ ಫಾಸ್ಟ್​​​​ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಸುಂಕ

ತುಮಕೂರು ಹೊರವಲಯದಲ್ಲಿ ಸ್ಥಳೀಯ ವಾಹನಗಳ ಚಾಲಕರು ಸಿಬ್ಬಂದಿ ಜೊತೆ ಜಟಾಪಟಿ ನಡೆಸುತ್ತಿದ್ದಾರೆ. ಸ್ಥಳೀಯವಾಗಿ ಸಂಚರಿಸುವಂತಹ ವಾಹನಗಳಿಗೂ ಫಾಸ್ಟ್​​​​ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಸುಂಕ ವಸೂಲಿಗೆ ಮುಂದಾಗಿರುವುದು ಗೊಂದಲ ಮೂಡಿಸಿದೆ.

Fast tag compulsory demand for local vehicles exemption
ಫಾಸ್ಟ್​​​ಟ್ಯಾಗ್ ಕಡ್ಡಾಯ ಹಿನ್ನೆಲೆ, ಸ್ಥಳೀಯ ವಾಹನಗಳ ವಿನಾಯಿತಿಗೆ ಆಗ್ರಹ
author img

By

Published : Feb 17, 2021, 7:00 PM IST

ತುಮಕೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್​​ಗಳ ಮೂಲಕ ಸಾಗುವ ವಾಹನಗಳಿಗೆ ಕಡ್ಡಾಯವಾಗಿ ಫಾಸ್ಟ್​​​​​ಟ್ಯಾಗ್ ಅಳವಡಿಕೆ ಮಾಡಬೇಕೆಂಬ ನಿಯಮ ಪಾಲನೆ ಮಾಡಲು ಸಾಧ್ಯವಾಗದಂತಹ ವಾಹನ ಚಾಲಕರು ಸಿಬ್ಬಂದಿಯೊಂದಿಗೆ ಜಟಾಪಟಿ ನಡೆಸುತ್ತಿರುವುದು ಸಾಮಾನ್ಯವಾಗಿದೆ.

ಫಾಸ್ಟ್​​​ಟ್ಯಾಗ್ ಕಡ್ಡಾಯ ಹಿನ್ನೆಲೆ ಸ್ಥಳೀಯ ವಾಹನಗಳ ವಿನಾಯಿತಿಗೆ ಆಗ್ರಹ

ಓದಿ: ರಾಜ್ಯದಲ್ಲಿ 98% ಇಂಟರ್ನೆಟ್ ಸಂಪರ್ಕ ಸಂಪೂರ್ಣ ; 100% ಆಗಲು ಒತ್ತು!

ತುಮಕೂರು ಹೊರವಲಯದಲ್ಲಿ ಸ್ಥಳೀಯ ವಾಹನಗಳ ಚಾಲಕರು ಸಿಬ್ಬಂದಿಯೊಂದಿಗೆ ಜಟಾಪಟಿ ನಡೆಸುತ್ತಿದ್ದಾರೆ. ಸ್ಥಳೀಯವಾಗಿ ಸಂಚರಿಸುವಂತಹ ವಾಹನಗಳಿಗೂ ಫಾಸ್ಟ್​​​​ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಸುಂಕ ವಸೂಲಿಗೆ ಮುಂದಾಗಿರುವುದು ಗೊಂದಲ ಮೂಡಿಸಿದೆ.

ಹೀಗಾಗಿ ಸ್ಥಳೀಯ ವಾಹನಗಳು ಸಂಚರಿಸಲು ಸಹಕಾರಿಯಾಗುವಂತೆ ಪ್ರತ್ಯೇಕ ಸರ್ವಿಸ್ ರಸ್ತೆಯನ್ನು ನಿರ್ಮಾಣ ಮಾಡಬೇಕು. ಈ ಮೂಲಕ ಜನರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸಬೇಕು. ಪ್ರಸ್ತುತ ಕೊರೊನಾ ಹೆಮ್ಮಾರಿಯಿಂದ ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಜನಸಾಮಾನ್ಯರು ಈ ಸಂದರ್ಭದಲ್ಲಿ ಬಳಕೆ ಕಡ್ಡಾಯ ಮಾಡಿರುವ ನಿಯಮ ಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರ ಇದನ್ನು ಅರಿತು ಪರಿಸ್ಥಿತಿಯನ್ನು ಅವಲೋಕಿಸಬೇಕು ಎನ್ನುತ್ತಾರೆ ಕೆಪಿಸಿಸಿ ರಾಜ್ಯ ವಕ್ತಾರ ಮುರುಳೀಧರ್ ಹಾಲಪ್ಪ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.