ತುಮಕೂರು : ಕರ್ನಾಟಕ ಬಂದ್ ಹಿನ್ನೆಲೆ ತಿಪಟೂರು ಪಟ್ಟಣದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಉಪವಿಭಾಗಾಧಿಕಾರಿ ಅವರು ರೈತರ ಮನವಿ ಪತ್ರ ಪಡೆಯಲು ತಡಮಾಡಿದ ಘಟನೆ ನಡೆದಿದೆ.
ಎಸಿ ಕಚೇರಿ ಬಳಿಯೇ ಪ್ರತಿಭಟಿಸುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ಕೆ, ಮನವಿ ಪತ್ರ ಪಡೆಯಲು ಹಿಂದುಮುಂದು ನೋಡಿದ್ದಾರೆ. ಬಳಿಕ ಪೊಲೀಸ್ ಅಧಿಕಾರಿ ರೈತರನ್ನೇ ಅವರ ಬಳಿ ಕಳುಹಿಸಿ ಮನವಿ ಪತ್ರ ನೀಡಿದ್ದಾರೆ. ಪ್ರತಿಭಟನೆ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದು, ರೈತ ವಿರೋಧಿ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.