ತುಮಕೂರು: ವಿಪರೀತ ಕೈಸಾಲ ಮಾಡಿಕೊಂಡಿರುವ ರೈತನೋರ್ವ ಅದನ್ನು ತೀರಿಸಲಾಗದೆ ಕಿಡ್ನಿ ಹಾಗೂ ತನ್ನ ಕಣ್ಣನ್ನೇ ಮಾರಲು ಮುಂದಾಗಿರುವುದಾಗಿ ತನ್ನ ಸಂಕಷ್ಟದ ಪರಿಸ್ಥಿತಿಯನ್ನು ತೋಡಿಕೊಂಡಿದ್ದಾನೆ.
ಹೌದು, ಶಿರಾ ತಾಲೂಕಿನ ಮಾಗೋಡು ಗ್ರಾಮದ ಚಂದ್ರಶೇಖರ್ ಎಂಬಾತ ಈ ರೀತಿಯ ಒಂದು ನಿರ್ಧಾರಕ್ಕೆ ಬಂದಿರುವುದಾಗಿ ಹೇಳುತ್ತಿದ್ದಾರೆ. 3 ಎಕರೆ ಜಮೀನು ಹೊಂದಿರುವ ಚಂದ್ರಶೇಖರ್ ಮೂರು ಬೋರ್ವೆಲ್ಗಳನ್ನು ಕೊರೆಸಿದ್ದರು. ಅದರಲ್ಲಿ ಎರಡು ವಿಫಲವಾಗಿವೆ. ನೀರಿಲ್ಲದೆ ಅಡಿಕೆ ತೋಟ ಕೂಡ ಒಣಗಿದೆ. ಇನ್ನೊಂದೆಡೆ ಸಾಕಷ್ಟು ಕೈ ಸಾಲವನ್ನು ಮಾಡಿಕೊಂಡಿದ್ದು, ಅದನ್ನು ತೀರಿಸಲಾಗಿದೆ ಒದ್ದಾಡುತ್ತಿದ್ದಾನೆ.
ಈ ಹಿಂದೆ ಸಾಲ ತೀರಿಸಲಾಗದೆ ಒಮ್ಮೆ ವಿಷವನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಚಂದ್ರಶೇಖರ್ ಹೇಳಿಕೊಳ್ಳುತ್ತಾರೆ. ಬ್ಯಾಂಕಿನಲ್ಲಿ ಇರುವ ಸಾಲವನ್ನು ತೀರಿಸಿದ್ದರೂ ಅದರಿಂದ ಮುಕ್ತಗೊಳಿಸುತ್ತಿಲ್ಲ. ಹೀಗಾಗಿ ಬೇರೆ ಬ್ಯಾಂಕ್ನಲ್ಲಿ ಸಾಲ ಪಡೆದು ಕೈಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳನ್ನು ತೋಡಿಕೊಂಡಿದ್ದಾನೆ. ಅಲ್ಲದೆ, ನಿತ್ಯ ಖಾಸಗಿ ಫೈನಾನ್ಶಿಯರ್ಗಳು ಬಂದು ಸಾಲದ ಹಣ ವಾಪಸಾತಿಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.