ತುಮಕೂರು: ಜಿಲ್ಲೆಯ ದೇವರಾಯನದುರ್ಗ ಪ್ರದೇಶದಲ್ಲಿರುವ ಭೋಗಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಕ್ತರು ಕಾಣಿಕೆ ಸಮರ್ಪಣೆ ಮಾಡಲು ಇ ಹುಂಡಿ ವ್ಯವಸ್ಥೆ ಮಾಡಲಾಗಿದ್ದು, ಸಂಪೂರ್ಣ ಡಿಜಿಟಲೀಕರಣವಾಗಿದೆ. ಕಾಣಿಕೆಯ ಹುಂಡಿಯ ಜೊತೆಗೆ ಇ - ಸ್ಕ್ಯಾನಿಂಗ್, ಸ್ವೈಪಿಂಗ್ ಸೇರಿ ಇತರ ಸೌಲಭ್ಯ ಲಭ್ಯವಿರಲಿದೆ. ಫೋನ್ ಪೇ, ಯುಪಿಐ ಇತರ ಡಿಜಿಟಲ್ ಮೂಲಕ ದೇವರಿಗೆ ಕಾಣಿಕೆ ಹಣ ಪಾವತಿ ಮಾಡ ಬಹುದಾಗಿದೆ.
ಈ ಮೂಲಕ ದೇವಾಲಯಗಳ ಹುಂಡಿಗೆ ಚಿಲ್ಲರೆ ಹಾಕಲು ಭಕ್ತರ ಪರದಾಟಕ್ಕೆ ಬ್ರೇಕ್ ಹಾಕಲಾಗಿದೆ. ಸಾಮಾನ್ಯವಾಗಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತರು ದಾನ ನೀಡಲು ಸಹಾಯ ಆಗಲೆಂದು ದೇವರಾಯನದುರ್ಗದ ದೇವಸ್ಥಾನದಲ್ಲಿ ಈ ಡಿಜಿಟಲೀಕರಣ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದರಲ್ಲೂ ದೇವರಾಯನದುರ್ಗದಲ್ಲಿ ಇ - ಕಾಣಿಕೆ ಹುಂಡಿ ಮೊದಲ ಬಾರಿ ಚಾಲ್ತಿಗೆ ಬಂದಿದೆ. ಆಧುನಿಕತೆಗೆ ತಕ್ಕಂತೆ ದೇವರಾಯನದುರ್ಗದ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲೂ ಸಂಪೂರ್ಣ ಬದಲಾವಣೆ ತರಲಾಗಿದೆ.
ಇದನ್ನೂ ಓದಿ: ಹೆಸರಿನ ಮುಂದೆ ನಾಡೋಜ ಪದವಿ ಬಳಸದಂತೆ ಹಂಪಿ ವಿವಿ ನಿರ್ಧಾರ: ಸಾಧಕರಿಂದ ಆಕ್ರೋಶ