ETV Bharat / state

ಆಸರೆ ಜತೆ ಆದಾಯ ಮಾರ್ಗಕ್ಕೂ ಉತ್ತೇಜನ.. ಶ್ರೀ ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಗಳಿಗೆ ಚಾಲನಾ ತರಬೇತಿ.. - ತ್ರಿವಿಧ ದಾಸೋಹ

ಆಧ್ಯಾತ್ಮಿಕತೆ, ನೈತಿಕ ಶಿಕ್ಷಣ ಕೊಡುವ ಶ್ರೀಮಠದಲ್ಲಿ ಸ್ವಾವಲಂಬಿ ಬದುಕಿನ ಪಾಠವನ್ನೂ ಕಲಿಸಲಾಗುತ್ತಿದೆ. ಪದವಿ ಮುಗಿಸಿದ ಬಳಿಕ ಮುಂದೇನು ಎಂಬ ಯೋಚನೆ ಬಾರದಿರುವ ಹಾಗೆ ಶ್ರೀಮಠ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮುಂದಾಗಿದೆ. ಶ್ರೀ ಮಠದಲ್ಲಿ ಆಶ್ರಯ ಪಡೆದ ವಿದ್ಯಾರ್ಥಿಗಳು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎಂಬ ಆಶಯವನ್ನ ಈ ಧಾರ್ಮಿಕ ಶ್ರದ್ಧಾ ಕೇಂದ್ರ ಹೊಂದಿದೆ..

Driving training given by Siddaganaga matt to there students
ಬಡ ವಿದ್ಯಾರ್ಥಿಗಳಿಗೆ ಆಸರೆಯಾದ ಸಿದ್ದಗಂಗಾ ಮಠ
author img

By

Published : Jul 3, 2021, 3:50 PM IST

Updated : Jul 4, 2021, 7:05 PM IST

ತುಮಕೂರು : ಸಿದ್ಧಗಂಗಾ ಮಠದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನದಿಂದಲೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ತರಬೇತಿ ನೀಡಲಾಗುತ್ತಿದೆ. ಬಡ ವಿದ್ಯಾರ್ಥಿಗಳೇ ಹೆಚ್ಚಾಗಿ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಮಸ್ಯೆ ಎದುರಿಸುವ ವಿದ್ಯಾರ್ಥಿಗಳು ‘ಗಳಿಕೆಯೊಂದಿಗೆ ಕಲಿಕೆ’ ಮಾಡಲಿ ಎಂಬ ಉದ್ದೇಶದಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಚಾಲನಾ ತರಬೇತಿ ನೀಡಲಾಗುತ್ತಿದೆ.

ತ್ರಿವಿಧ ದಾಸೋಹಕ್ಕೆ ಖ್ಯಾತಿಯಾದ ಸಿದ್ಧಗಂಗಾ ಮಠದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯೆ ಕಲಿತು ಉನ್ನತ ಹುದ್ದೆಗೇರಿದ್ದಾರೆ. ಹಲವು ಸಾಧನೆಗಳನ್ನೂ ಮಾಡಿದ್ದಾರೆ. ಅನಾಥ, ನಿರ್ಗತಿಕ ಹಾಗೂ ಬಡ ವಿದ್ಯಾರ್ಥಿಗಳೇ ಹೆಚ್ಚಾಗಿ ಮಠದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಆದರೆ, ಈ ವಿದ್ಯಾರ್ಥಿಗಳು ಈಗಿನಿಂದಲೇ ಸ್ವಾಲಂಬಿಗಳಾಗಬೇಕು. ಪಾಲಕರಿಗೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಚಾಲನಾ ತರಬೇತಿ ನೀಡಲಾಗುತ್ತಿದೆ.

18 ವರ್ಷ ಪೂರೈಸಿದ ಪ್ರತಿ ವಿದ್ಯಾರ್ಥಿಗೂ ಚಾಲನಾ ತರಬೇತಿ ಕೊಟ್ಟು, ಚಾಲನಾ ಪರವಾನಿಗೆಯನ್ನೂ ಕೊಡಿಸಲು ಶ್ರೀ ಸಿದ್ಧಗಂಗಾ ಮಠ ಮುಂದಾಗಿದೆ. ಈಗಾಗಲೇ ಮೊದಲ ಬ್ಯಾಚಿನಲ್ಲಿ ಸುಮಾರು 60 ವಿದ್ಯಾರ್ಥಿಗಳಿಗೆ ತರಬೇತಿ ಕೊಟ್ಟು ಡಿಎಲ್ ವಿತರಣೆ ಮಾಡಲಾಗಿದೆ. ಶ್ರೀ ಸಿದ್ಧಗಂಗಾ ಮಠದಲ್ಲಿ ರೋಟರಿ ಹಾಗೂ ಸಿದ್ಧಲಿಂಗೇಶ್ವರ ಡ್ರೈವಿಂಗ್ ಸ್ಕೂಲ್ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಉಚಿತ ಡ್ರೈವಿಂಗ್ ತರಬೇತಿ ನೀಡಲಾಗುತ್ತಿದೆ.

ಈಗಾಗಲೇ ಚಾಲನಾ ತರಬೇತಿ ಪಡೆದ ಹಲವು ವಿದ್ಯಾರ್ಥಿಗಳು ರಾತ್ರಿ ಪಾಳಿಯಲ್ಲಿ ಡ್ರೈವಿಂಗ್ ಕೆಲಸ ಮಾಡಿ ಬೆಳಗ್ಗೆ ಕಾಲೇಜಿಗೆ ಹೋಗುತಿದ್ದಾರೆ. ಇನ್ನು, ಹಲವು ವಿದ್ಯಾರ್ಥಿಗಳು ಉದ್ಯಮಿಗಳ ಅಥವಾ ಅಧಿಕಾರಿಗಳಿಗೆ ಬೆಳಗ್ಗೆ ಮತ್ತು ಸಂಜೆ ಪಿಕ್​​ಅಪ್, ಡ್ರಾಪ್ ಮಾಡಿ ಉಳಿದ ವೇಳೆಯಲ್ಲಿ ಕಾಲೇಜಿಗೆ ತೆರಳುತ್ತಾರೆ. ಇದರಿಂದ ವಿದ್ಯಾರ್ಥಿಗಳು ಒಂದಿಷ್ಟು ಹಣ ಸಂಪಾದಿಸಿ ತಮ್ಮ ಉನ್ನತ ವ್ಯಾಸಂಗ ಮಾಡುವುದರ ಜೊತೆಗೆ ಪೋಷಕರಿಗೂ ಒಂದಿಷ್ಟು ಹಣ ಕೊಡಬಹುದು ಎನ್ನುತ್ತಾರೆ ಡ್ರೈವಿಂಗ್ ಸ್ಕೂಲಿನ ಪ್ರಿನ್ಸಿಪಾಲ್.

ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಗಳಿಗೆ ಚಾಲನಾ ತರಬೇತಿ..

ಆಧ್ಯಾತ್ಮಿಕತೆ, ನೈತಿಕ ಶಿಕ್ಷಣ ಕೊಡುವ ಶ್ರೀಮಠದಲ್ಲಿ ಸ್ವಾವಲಂಬಿ ಬದುಕಿನ ಪಾಠವನ್ನೂ ಕಲಿಸಲಾಗುತ್ತಿದೆ. ಪದವಿ ಮುಗಿಸಿದ ಬಳಿಕ ಮುಂದೇನು ಎಂಬ ಯೋಚನೆ ಬಾರದಿರುವ ಹಾಗೆ ಶ್ರೀಮಠ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮುಂದಾಗಿದೆ. ಶ್ರೀ ಮಠದಲ್ಲಿ ಆಶ್ರಯ ಪಡೆದ ವಿದ್ಯಾರ್ಥಿಗಳು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎಂಬ ಆಶಯವನ್ನ ಈ ಧಾರ್ಮಿಕ ಶ್ರದ್ಧಾ ಕೇಂದ್ರ ಹೊಂದಿದೆ.

ಓದಿ: Delta+ ಭೀತಿ: ಬೆಂಗಳೂರಿಗೆ ವಾಪಸ್​ ಆಗಲು ನಿರುತ್ಸಾಹ.. ಕೃಷಿಯತ್ತ ಮುಖ ಮಾಡಿದ ಯುವಕರು

Last Updated : Jul 4, 2021, 7:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.