ತುಮಕೂರು: ನಗರದಲ್ಲಿ ನಿರ್ವಹಣೆ ಕೊರತೆ ಹಾಗೂ ಶುದ್ಧತೆಯ ಮಾನದಂಡ ಪಾಲಿಸದ ಹಿನ್ನೆಲೆಯಲ್ಲಿ 22 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಹಾನಗರ ಪಾಲಿಕೆ ವಶಪಡಿಸಿಕೊಂಡಿದೆ.
ನಗರದಲ್ಲಿರುವ 35 ಘಟಕಗಳ ಪೈಕಿ 12ರಲ್ಲಿ ಮಾತ್ರವೇ ಗುಣಮಟ್ಟದ ನೀರು ವಿತರಿಸಲಾಗುತ್ತಿದೆ. ಉಳಿದ ಘಟಕಗಳಲ್ಲಿನ ನೀರನ್ನು ಗುಣಮಟ್ಟ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಟಿ ಭೂಬಾಲನ್ ತಿಳಿಸಿದ್ದಾರೆ.
ಪಾಲಿಕೆಯ ಅಧಿಕಾರಿಗಳು ಹಾಗೂ ನೀರಿನ ಘಟಕಗಳ ನಡುವಿನ ಸಮನ್ವಯದ ಕೊರತೆಯಿಂದ ಶುದ್ಧತೆಯ ನಿಯಮಾವಳಿ ಪಾಲನೆ ಆಗಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಕೂಡಲೇ ಇದನ್ನು ನಿವಾರಣೆ ಮಾಡಲಾಗಿವುದು. ವಾರಕೊಮ್ಮೆ ಘಟಕಗಳಲ್ಲಿನ ನೀರಿನ ಗುಣಮಟ್ಟ ಪರೀಕ್ಷಿಸಲಾಗುವುದು. ಬಳಿಕ ನೀರು ಜನರಿಗೆ ವಿತರಿಸಲು ಯೋಗ್ಯವೇ ಎಂದು ನಿರ್ಧರಿಸಲಾಗುವುದೆಂದು ತಿಳಿಸಿದ್ದಾರೆ.
ಪಾಲಿಕೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನೀರಿನ ಶುದ್ಧತೆ ಕುರಿತು ಭೂಪಾಲನ್ ಅವರಿಗೆ ಘಟಕಗಳ ವಿರುದ್ಧ ಸಾಕಷ್ಟು ದೂರುಗಳು ಬಂದಿದ್ದವು. ಘಟಕಗಳ ನಿರ್ವಹಣೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಂಬಂಧಿಕರ ಹಸ್ತಕ್ಷೇಪ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.ಆದರೆ ತನಿಖೆಯಿಂದ ಇದು ಗೊತ್ತಾಗಬೇಕಿದೆ.