ETV Bharat / state

ರಸ್ತೆಗೆ ಹರಿಯುವ ಚರಂಡಿ ನೀರು: ತುಮಕೂರಲ್ಲಿ ಕೇಳೋರಿಲ್ಲ ವಾಹನ ಸವಾರರ ಗೋಳು! - Drainage water on Tumkur Road

ಕಲ್ಪವೃಕ್ಷ ನಗರಿ ತುಮಕೂರಿನಲ್ಲಿ ವಾಹನ ಸವಾರರಿಗೆ ಎಲ್ಲಿಲ್ಲದ ಕಿರಿಕಿರಿ ಉಂಟಾಗುತ್ತಿದೆ. ಇದಕ್ಕೆ ಕಾರಣ ಇಲ್ಲಿರುವ ರಸ್ತೆ ಮತ್ತು ಚರಂಡಿಗಳು. ಪಾಲಿಕೆಯ ನಿರ್ಲಕ್ಷ್ಯಕ್ಕೆ ಜನ ಬೇಸರ ವ್ಯಕ್ತಪಡಿಸಿದ್ದಾರೆ.

ರಸ್ತೆಗೆ ಹರಿಯುವ ಚರಂಡಿ ನೀರು
author img

By

Published : Oct 23, 2019, 5:38 PM IST

ತುಮಕೂರು: ನಗರದ ಅಶೋಕ ರಸ್ತೆಯಲ್ಲಿ ಮಳೆಯ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆ ಹರಿದು ನಿತ್ಯ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ.

ರಸ್ತೆಗೆ ಹರಿಯುವ ಚರಂಡಿ ನೀರು
ಚರಂಡಿಗಳಲ್ಲಿ ಪ್ಲಾಸ್ಟಿಕ್, ಕಸ ತುಂಬಿದ್ದು, ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಡಾಂಬರ್​ ಸಹ ಕಿತ್ತುಹೋಗಿದೆ. ಇದರಿಂದ ರಸ್ತೆಯಲ್ಲಿ ಗುಂಡಿಗಳಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಗಳು ಸಹ ಕಳಪೆಯಾಗಿದ್ದು, ವಾಹನ ಸವಾರರು, ಅಧಿಕಾರಿಗಳು ಮತ್ತು ಕಂಟ್ರಾಕ್ಟರ್​​ಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

Intro:ತುಮಕೂರು: ಅಶೋಕ ರಸ್ತೆಯಲ್ಲಿ ಮಳೆಯ ನೀರು ಚರಂಡಿಯಲ್ಲಿ ಹೋಗಲು ಸಾಧ್ಯವಾಗದೆ ರಸ್ತೆಯಲ್ಲಿಯೇ ಹರಿಯುವುದರಿಂದ ನಿತ್ಯ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತದೆ.

Body:ಹೌದು ತುಮಕೂರು ಬಸ್ ನಿಲ್ದಾಣದ ಬಳಿ ಇರುವ ಅಶೋಕ ರಸ್ತೆಯಲ್ಲಿ ಮಳೆ ನೀರು ಚರಂಡಿಯಲ್ಲಿ ಹೋಗದೆ ರಸ್ತೆಯ ಮೇಲೆ ಹರಿಯುತ್ತಿದೆ, ರಸ್ತೆ ಬದಿ ಇರುವ ಚರಂಡಿಗಳಲ್ಲಿ ಪ್ಲಾಸ್ಟಿಕ್ ಕಸಗಳು ತುಂಬಿದ್ದು ಇದರಿಂದ ಮಳೆ ನೀರು ಹೋಗಲು ಸಾಧ್ಯವಾಗದೆ ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಡಾಂಬರೀಕರಣವೆಲ್ಲ ಕಿತ್ತುಹೋಗಿದ್ದು, ರಸ್ತೆಗಳಲ್ಲಿ ಹಳ್ಳಗಳು ಉಂಟಾಗಿ ವಾಹನ ಸವಾರರಿಗೆ ನಿತ್ಯ ಕಿರಿಕಿರಿ ಉಂಟಾಗುತ್ತದೆ.
ನಗರದಲ್ಲಿ ಯಾವ ರಸ್ತೆಗಳನ್ನು ನೋಡಿದರೂ ಸಹ ಎಲ್ಲವೂ ಕಿತ್ತುಹೋಗಿದೆ ಅದರಲ್ಲಿಯೂ ತುಮಕೂರಿನ ಬಸ್ ನಿಲ್ದಾಣದ ಬಳಿ ಇರುವ ಅಶೋಕ ರಸ್ತೆಯಲ್ಲಿ ಮಳೆನೀರಿನಿಂದ ಹಾಕಿರುವ ಟಾರ್ ಕಿತ್ತುಹೋಗಿದ್ದು, ಮಳೆ ಬಂದಂತಹ ಸಂದರ್ಭದಲ್ಲಿ ರಸ್ತೆಯಲ್ಲಿನ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳು ನಡೆದಿವೆ, ಆದರೆ ಮಹಾನಗರ ಪಾಲಿಕೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದು ಈ ರಸ್ತೆಯನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಜೊತೆಗೆ ಕಂಟ್ರಾಕ್ಟರುಗಳು ರಸ್ತೆಗೆ ಹಾಕುವ ಟಾರ್ ಸರಿ ಇಲ್ಲದೆ ಆರು ತಿಂಗಳಲ್ಲೇ ಕಿತ್ತು ಹೋಗುತ್ತಿವೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬೈಟ್: ಪವನ್ ಕುಮಾರ್, ವಾಹನ ಸವಾರ.

Conclusion:ವರದಿ
ಸುಧಾಕರ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.