ETV Bharat / state

PSI Scam: ಪಿಎಸ್​ಐ ಹಗರಣ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ: ಡಾ. ಜಿ. ಪರಮೇಶ್ವರ್ - ಸೇವಾ ಸಿಂಧು

ರಾಜ್ಯದಲ್ಲಿ 15 ಸಾವಿರ ಕಾನ್​ಸ್ಟೇಬಲ್​ ಹುದ್ದೆಗಳು ಖಾಲಿ ಇವೆ. ಹಂತ ಹಂತವಾಗಿ ನೇಮಕ ಪ್ರಾರಂಭ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.

Etv Bharatdr-g-parameshwar-reaction-on-psi-scam
ಪಿಎಸ್​ಐ ಹಗರಣ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ:ಡಾ. ಜಿ. ಪರಮೇಶ್ವರ್
author img

By

Published : Jun 11, 2023, 6:41 PM IST

Updated : Jun 11, 2023, 7:10 PM IST

ಡಾ. ಜಿ. ಪರಮೇಶ್ವರ್

ತುಮಕೂರು: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಗಿರುವ ಪಿಎಸ್​ಐ ಹಗರಣ ಬಗ್ಗೆ ಕಾನೂನು ತಜ್ಞರ ಜೊತೆಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು. ನಗರದಲ್ಲಿ ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಸಾಧಕ, ಬಾಧಕಗಳನ್ನು ಚರ್ಚೆ ಮಾಡಿಯೇ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಯಾವ ರೀತಿ ಖರ್ಚು‌ ಭರಿಸಬೇಕು ಎಂಬುದನ್ನು ಚರ್ಚಿಸಿ ಅನುಷ್ಠಾನ ಮಾಡಲು ಹೊರಟಿದ್ದೀವಿ. ಯಾರಿಗೂ ಆತಂಕ ಅನುಮಾನ ಬೇಡ. ರಾಜ್ಯದ ಯೋಜನೆ, ಕಾರ್ಯಕ್ರಮಗಳನ್ನು ಹಾಗೇ ಮುಂದುವರೆಸುತ್ತೇವೆ. ಸರ್ಕಾರದಲ್ಲಿ ದುಂದು ವೆಚ್ಚ ಅಥವಾ ಪೋಲಾಗುತ್ತಿದ್ದ ಹಣ ಉಳಿತಾಯ ಮಾಡಿ, ಆ ಹಣದಿಂದ ಈ ಯೋಜನೆಗಳಿಗೆ ಖರ್ಚು ಮಾಡ್ತೀವಿ. ಜನತೆಗೆ ಯಾವುದೇ ಅನುಮಾನ ಬೇಡ. ಮಹಿಳೆಯರಿಗೆ ಸಬಲೀಕರಣ ಆಗಬೇಕೆನ್ನುವುದು ಕಾಂಗ್ರೆಸ್ ಪಕ್ಷದ ಮೂಲ ಉದ್ದೇಶ. ಹೀಗಾಗಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮ ಮಾಡಿದ್ದೀವಿ ಎಂದರು.

ಸ್ತ್ರೀ ಸಂಘ ಮಾಡಿದ್ದೇವೆ, ಅದು ಈಗಲೂ ಕೂಡ ಮುಂದುವರೆಯುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ‌. ರಾಜ್ಯಾದ್ಯಂತ ಎಲ್ಲಾ ಕಡೆ ಇದು ಆರಂಭವಾಗಿದೆ. ವಿದ್ಯುತ್ ಬಿಲ್ ಹೆಚ್ಚು ಬಂದ ವಿಚಾರವಾಗಿ ಮಾತನಾಡಿ, ಇದನ್ನು ಕೆಲವರು ಕ್ರಿಯೇಟ್ ಮಾಡ್ತಿದ್ದಾರೆ.
ವಿದ್ಯುತ್ ಬಳಸಿದ್ದರೇ ಅದಕ್ಕೆ ಹಣ ಕಟ್ಟಬೇಕು. ಸರ್ಕಾರದಿಂದ ಯಾವುದೇ ಬಿಲ್ ಹೆಚ್ಚಳ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಮೀಟರ್ ಜಾಸ್ತಿ ಬಂದಾಗ ಅವರು ಕಟ್ಟಲೇಬೇಕು. ನಾವು ಯಾವುದೇ ಬಿಲ್ ಹೆಚ್ಚಿಸಿಲ್ಲ. ಹಿಂದಿನ ಸರ್ಕಾರ ಮಾಡಿದಷ್ಟೇ ಇದೆ. ಎಲ್ಲಾ ಯೋಜನೆ ಮುಂದುವರೆಯಲಿದೆ. ಯಾವುದು ಕೂಡ ನಿಲ್ಲುವುದಿಲ್ಲ ಎಂದು ಹೇಳಿದರು.

ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಕೆಎಸ್​ಆರ್​ಟಿಸಿ ಬಸ್​ನಲ್ಲಿ ಲಕ್ಸುರಿ, ಎಸಿ, ವೋಲ್ವ ಬಸ್ ಗಳನ್ನು ಬಿಟ್ಟು ಉಳಿದ ಬಸ್​ಗಳಲ್ಲಿ ಪ್ರಯಾಣ ಮಾಡಬಹುದು. ಕೆಲವು ರೂಟ್​ಗಳಲ್ಲಿ ಖಾಸಗಿ ಬಸ್ ಗಳಲ್ಲಿ ಓಡಾಡುತ್ತಿವೆ, ಆ ಕಡೆ ಸರ್ಕಾರಿ ಬಸ್ ಗಳಿದ್ದರೇ ಅನುಕೂಲ ಪಡೆಯಬಹುದು. ನಮ್ಮ ರಾಜ್ಯದವರು ಎಂದು ಗೊತ್ತಾಗಲಿ ಎಂಬುದಕ್ಕೆ ಶಕ್ತಿ ಯೋಜನೆ ಐಡಿ ವಿತರಣೆ ಮಾಡಲಾಗುತ್ತದೆ. ಇದಕ್ಕೆ ಸೇವಾ ಸಿಂಧುನಲ್ಲಿ ಅರ್ಜಿ ಹಾಕಲು ಪ್ರಾರಂಭದಲ್ಲಿ ರಶ್ ಇರುತ್ತದೆ.
ಸ್ವಲ್ಪ ದಿನಗಳ ಬಳಿಕ ಸರಿಯಾಗಲಿದೆ ಎಂದರು.

ಸ್ತ್ರೀ ಸಂಘಗಳ ಸಾಲ ಮನ್ನಾ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಯಾವುದೇ ಪ್ರಸ್ತಾವನೆ ಇಲ್ಲ. ಪೊಲೀಸರ ವರ್ಗಾವಣೆ ಕುರಿತು ಮಾತನಾಡಿ, ಅಗತ್ಯಕ್ಕೆ ಅನುಗುಣವಾಗಿ ಪೊಲೀಸರ ವರ್ಗಾವಣೆ ಆಗಲಿದೆ. ಅದೇ ದೊಡ್ಡ ಒಂದು ಉದ್ಯೋಗ ಆಗುವುದಿಲ್ಲ ಎಂದ ಅವರು, ರಾಜ್ಯದಲ್ಲಿ 15 ಸಾವಿರ ಕಾನಿಸ್ಟೇಬಲ್​ ಹುದ್ದೆಗಳು ಖಾಲಿ ಇವೆ. ಹಂತ ಹಂತವಾಗಿ ನೇಮಕ ಪ್ರಾರಂಭ ಮಾಡುತ್ತೇವೆ ಎಂದು ಗೃಹ ಸಚಿವರು ಹೇಳಿದರು.

ಇದನ್ನೂ ಓದಿ:ಶಕ್ತಿ ಯೋಜನೆ ಅನುಷ್ಠಾನದಿಂದ ಸಾರಿಗೆ ಇಲಾಖೆಗೆ ನಷ್ಟ ಆಗುವುದಿಲ್ಲ: ಸಚಿವ ಶರಣಪ್ರಕಾಶ್ ಪಾಟೀಲ್

Last Updated : Jun 11, 2023, 7:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.