ತುಮಕೂರು: ಯಾರ್ ಕಮಿಷನ್ ಕೊಟ್ರೋ ಬಿಟ್ರೋ, ನಮ್ಮ ಸರ್ಕಾರ ಇದ್ದಾಗ ಯಾವ್ ಕಮಿಷನ್ ಇರಲಿಲ್ಲ. ಕಮಿಷನ್ ಇತ್ತು ಅಂದ್ರೆ, ಇವತ್ತೂ ಹೇಳ್ತಿದ್ದೀನಿ ನ್ಯಾಯಾಂಗ ತನಿಖೆಗೆ ಕೊಡಲಿ. ನಾವೇ ಮಾಡಿರ್ಲಿ ಅಥವಾ ಇನ್ನೊಂದು ಸರ್ಕಾರ ಮಾಡಿರ್ಲಿ ತನಿಖೆ ಮಾಡಿಸಿ ಎಂದು ತುಮಕೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ತನಿಖೆಯಲ್ಲಿ ಎಲ್ಲ ಸತ್ಯಗಳು ಆಚೆ ಬರ್ತವೆ. ಯಾರ್ ಯಾರ್ ಹತ್ರ ಏನೇನ್ ದಾಖಲೆ ಇದೆಯೊ ತಂದು ಕೊಡುತ್ತಾರೆ. ಅದು ಬಿಟ್ಟು ನೀವು ಕೋರ್ಟ್ಗೆ ಹೋಗಿ, ಅದಕ್ಕೆ ಹೋಗಿ ಅಂದ್ರೆ ಯಾರ್ ಕೇಳ್ತಾರೆ?. ಎಂತೆಂಥ ಕೇಸ್ಗಳು ಕಣ್ಣೆದುರಿಗೆ ನಡೆದುಹೋಗಿವೆ. ನಿಮ್ಮ ಹತ್ರ ಸರ್ಕಾರ ಇದೆ ಎಂದು ಸುಸೈಡ್ ಕೇಸ್ಗಳು, ರೇಪ್ ಕೇಸ್ಗಳಿಗೆಲ್ಲ 'ಬಿ' ರಿಪೋರ್ಟ್ ಬರ್ಸಿ, ನಿಮ್ದೆಲ್ಲಾ ಮುಚ್ಚಾಕಿಕೊಂಡಿದ್ದೀರಾ ಎಂದು ಕಿಡಿಕಾರಿದರು.
ಇದನ್ನೂ ಓದಿ: ಶೇ 40 ಕಮಿಷನ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
ಮೈತ್ರಿ ಸರ್ಕಾರದಲ್ಲಿ ಕಮಿಷನ್ ಇತ್ತು ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಇದನ್ನು ನೀವು ಅವರ ಹತ್ರಾನೇ ಕೇಳ್ಬೇಕು. ನನಗೆ ಅದು ಗೊತ್ತಿಲ್ಲ. ಅವರು ಒಪ್ಪಿಕೊಳ್ಳುವುದಕ್ಕೂ, ನಾವು ಒಪ್ಪಿಕೊಳ್ಳೋದಕ್ಕೂ ಸಂಬಂಧ ಇಲ್ಲ ಎಂದರು.