ETV Bharat / state

ತುಮಕೂರು: ದಮನಿತ ಮಹಿಳೆಯರಿಗೆ ಆಹಾರದ ಕಿಟ್‌ ವಿತರಣೆ

ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸಾಧನ ಮಹಿಳಾ ಸಂಘ ಬೆಂಗಳೂರು ಜಂಟಿಯಾಗಿ ಲೈಂಗಿಕ ವೃತ್ತಿಯ ದಮನಿತ ಮಹಿಳೆಯರಿಗೆ ಆಹಾರದ ಕಿಟ್‌ಗಳನ್ನು ನೀಡಿದರು.

ದಮನಿತ ಮಹಿಳೆಯರಿಗೆ ಆಹಾರದ ಕಿಟ್‌ ವಿತರಣೆ
ದಮನಿತ ಮಹಿಳೆಯರಿಗೆ ಆಹಾರದ ಕಿಟ್‌ ವಿತರಣೆ
author img

By

Published : May 21, 2021, 9:40 AM IST

Updated : May 21, 2021, 2:06 PM IST

ತುಮಕೂರು: ಕೋವಿಡ್ ಲಾಕ್‌ಡೌನ್ 2ನೇ ಅಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಲೈಂಗಿಕ ವೃತ್ತಿಯ ದಮನಿತ ಮಹಿಳೆಯರಿಗೆ ಆಹಾರದ ಕಿಟ್‌ಗಳನ್ನು ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸಾಧನ ಮಹಿಳಾ ಸಂಘ ಬೆಂಗಳೂರು ಜಂಟಿಯಾಗಿ ವಿತರಣೆ ಮಾಡಿತು.

ದಮನಿತ ಮಹಿಳೆಯರಿಗೆ ಆಹಾರದ ಕಿಟ್‌ ವಿತರಣೆ

ಆಹಾರ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಡಾಮಿನಿಕ್ ಡಿ, ಕೋವಿಡ್ 2ನೇ ಅಲೆಯಿಂದ ಲಾಕ್‌ಡೌನ್ ಜಾರಿಯಾಗಿದ್ದು ಇದರಲ್ಲಿ ದಮನಿತ ಮಹಿಳೆಯರ ಬದುಕು ಅತಂತ್ರವಾಗಿದೆ. ಪುರುಷ ಪ್ರಾಧಾನ್ಯತೆಯ ಸಮಾಜದಲ್ಲಿ ಮಹಿಳೆಯ ದುಡಿಮೆಯ ನೂರರಲ್ಲಿ 25 ರಷ್ಟು ಮಾತ್ರ ಮಹಿಳೆಯರ ಕೈ ಸೇರುತ್ತಿದ್ದು ಶೇ 75ರಷ್ಟು ಪುರುಷರು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಧನಾ ಮಹಿಳಾ ಸಂಘ ಬೆಂಗಳೂರಿನಲ್ಲಿ ವೃತ್ತಿನಿರತ ಮಹಿಳೆಯರ ಘನತೆಯ ಹಕ್ಕಿಗಾಗಿ ಹೋರಾಟ ಮಾಡುತ್ತಿದೆ. ಇತ್ತೀಚೆಗೆ ಸರ್ಕಾರ ತೃತೀಯ ಲಿಂಗಿಗಳಿಗೆ ಸರ್ಕಾರಿ ಸೌಲಭ್ಯಗಳಲ್ಲಿ ಶೇ.1ರಷ್ಟು ಮೀಸಲಾತಿ ಜಾರಿಗೊಳಿಸಿದ್ದು ಯೋಜನೆಗಳಲ್ಲಿ ದಮನಿತ ಮಹಿಳೆಯರಿಗೂ ಮೀಸಲಾತಿ ನೀಡಲು ಸರ್ಕಾರಗಳು ಮುಂದಾಗಬೇಕಿದೆ ಎಂದು ಹೇಳಿದರು.

ಒಬ್ಬ ಮಹಿಳೆ ಆಯ್ಕೆ ಮಾಡಿಕೊಂಡು ಈ ವೃತ್ತಿಗೆ ಬರುವುದಿಲ್ಲ. ಪರಿಸ್ಥಿತಿ ಮತ್ತು ಸಂದರ್ಭಗಳು ಅವರನ್ನು ಈ ಕೆಲಸಕ್ಕೆ ದೂಡುತ್ತಿವೆ. ಸಂಕಷ್ಟದಲ್ಲಿರುವ ದಮನಿತ ಮಹಿಳೆಯರನ್ನು ಸಮಾಜ ಗೌರವಯುತವಾಗಿ ನೋಡಬೇಕು ಎಂದರು. ದಮನಿತ ಮಹಿಳೆಯರಿಗೆ 1 ತಿಂಗಳ ಆಹಾರ ಪದಾರ್ಥಗಳಾದ 25 ಕೆ.ಜಿ ಅಕ್ಕಿ, ತಲಾ 2 ಕೆ.ಜಿ ರಾಗಿ, ಮತ್ತು ಗೋಧಿ ಹಿಟ್ಟು, 1 ಕೆ.ಜಿ ಬೇಳೆ, 1ಕೆ.ಜಿ ಸಕ್ಕರೆ, 1 ಲೀಟರ್ ಅಡುಗೆ ಎಣ್ಣೆ, ಅವಲಕ್ಕಿ, ಟೀ ಪುಡಿ, ಸಾಂಬಾರ್‌ಪುಡಿ, ಸೋಪುಗಳನ್ನು ಒಳಗೊಂಡ ಕಿಟ್‌ ಅನ್ನು ನೀಡಿದ್ದು ವೃತ್ತಿ ನಿರತ ಮಹಿಳೆಯರಿಗೆ ಅಗತ್ಯವಿರುವ ಔಷಧಿಗಳನ್ನು ಕೂಡಾ ಪೂರೈಸಲಾಗುವುದು ಎಂದರು.

Last Updated : May 21, 2021, 2:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.