ತುಮಕೂರು: ಕೊರೊನಾ ಹರಡದಂತೆ ತಡೆಯಲು ಹಾಗೂ ಆ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತುಮಕೂರಿನ ಜೈನ ದಿಗಂಬರ ಮುನಿಗಳು ಸತತ ಒಂದೂವರೆ ವರ್ಷದಿಂದ ನಿರತರಾಗಿದ್ದಾರೆ. ಶುದ್ಧ ಆಹಾರ, ಸಸ್ಯಾಹಾರ ಹಾಗೂ ವ್ಯಸನ ಮುಕ್ತರಾಗುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಈ ರೋಗದ ವಿರುದ್ಧ ಹೋರಾಡಲು ಕರೆ ನೀಡಿದ್ದಾರೆ.
ಅಲ್ಲದೆ ಕೊರೊನಾದಿಂದ ಪಾರಾಗಬೇಕೆಂದರೆ ಕೆಲ ನಿಯಮ ಪಾಲಿಸಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ಶಾಖಾಹಾರ ಸೇವನೆಯಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ ಎಂದು ಜಿಲ್ಲೆಯ ವಿವಿಧ ಬಸದಿಗಳಲ್ಲಿ ಪ್ರವಚನ ನೀಡುವ ಮೂಲಕ ಜಾಗೃತಿಗೆ ಮುಂದಾಗಿದ್ದಾರೆ.
ಪ್ರವಚನ ಕೇಳಲು ಬರುವ ಮಂದಿಗೆ ಮಾಸ್ಕ್ ಧರಿಸುವಂತೆ ಹಾಗೂ ಕೊರೊನಾ ನಿಯಮಗಳ ಕಡ್ಡಾಯ ಪಾಲನೆ ಮಾಡುವಂತೆ ಸೂಚಿಸುತ್ತಿದ್ದು, ಮನೆಯಲ್ಲಿ ಸುಚಿತ್ವ ಕಾಪಾಡಿ, ಸಸ್ಯಾಹಾರ ಸೇವಿಸಿ ಎನ್ನುತ್ತಾರೆ ದಿಗಂಬರ ಜೈನ ಮುನಿ ಅಮೋಘ ಕೀರ್ತಿ.
ಇದನ್ನೂ ಓದಿ: ಸರಣಿ ಅಪಘಾತಗಳಾದ್ರು ಬುದ್ಧಿ ಕಲಿಯದ ಹೈಕ್ಳು: ಫ್ಲೈ ಓವರ್ ಮೇಲೆ ಯುವಕ-ಯುವತಿಯರ ಡ್ಯಾನ್ಸ್