ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಿನ್ನೆ ಮೂಗನಾಯಕನ ಕೋಟೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ಧನಸ್ಸು ಉತ್ಸವ ಹಾಗೂ ಮುಳ್ಳ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ನೆರವೇರಿಸಲಾಯಿತು. ಇತಿಹಾಸ ಪ್ರಸಿದ್ದವಾಗಿರುವ ಈ ಉತ್ಸವಕ್ಕೆ ಜಿಲ್ಲೆಯ ವಿವಿದೆಡೆಯಿಂದ ಜನರು ಆಗಮಿಸಿದ್ದರು. ಉತ್ಸವದ ಪ್ರಯುಕ್ತ ದೇವಾಲಯದಲ್ಲಿ ಸ್ವಾಮಿಯವರಿಗೆ ಅಭಿಷೇಕ, ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕವನ್ನು ಮಾಡಲಾಯಿತು.
ಐತಿಹಾಸಿಕ ಪ್ರಸಿದ್ದ ಶ್ರೀಲಕ್ಷ್ಮೀರಂಗನಾಥಸ್ವಾಮಿ ದೇವಾಲಯಕ್ಕೆ ಸುಮಾರು 600 ವರ್ಷಗಳ ಹಳೆಯ ಇತಿಹಾಸವಿದ್ದು, ಹಾಗಲವಾಡಿ ಪಾಳೇಗಾರರು ಆಳ್ವಿಕೆ ಮಾಡಿದ ಪ್ರದೇಶ ಎಂಬ ಪ್ರಖ್ಯಾತಿಯು ಹೊಂದಿದೆ. ಪ್ರತಿ ವರ್ಷ ಅಷಾಡ ಮಾಸದಲ್ಲಿ ಧನಸ್ಸು ಜಾತ್ರೆ ನಡೆಯುವುದು ವಾಡಿಕೆ, ಹೊಸದಾಗಿ ಮದುವೆಯಾದ ಜೋಡಿಗಳು ಏಕಾದಶಿ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ಬಹಳ ವಿಶೇಷವಾಗಿದೆ.
ಇದನ್ನೂ ಓದಿ: ಬೀದಿಪ್ರಾಣಿಗಳ ಕೊರಳಿಗೆ ಪ್ರತಿಫಲಿತ ಪಟ್ಟಿ: ಚೆನ್ನೈ ಪ್ರಾಣಿಪ್ರೇಮಿಗಳಿಂದ ವಿನೂತನ ಯೋಜನೆ