ತುಮಕೂರು: ಮಾಜಿ ಪ್ರಧಾನಿ ದೇವೇಗೌಡರು ಗಲಾಟೆ, ರಗಳೆ ಮಾಡಿಕೊಂಡು ತುಮಕೂರಿನಿಂದ ಸ್ಪರ್ಧೆ ಮಾಡಿದ್ರು. ಆದ್ರೆ ಎಲೆಕ್ಷನ್ ಟೇಕ್ ಆಫ್ ಆಗಲೆ ಇಲ್ಲ ಎಂದು ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಹೇಳಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಪ್ರಚಾರ ಕಾರ್ಯಕ್ರಮಕ್ಕೆ ಜನರೇ ಸೇರುತ್ತಿರಲಿಲ್ಲ ಬದಲಿಗೆ ಸಿದ್ದರಾಮಯ್ಯ ಬಂದಾಗ ಮಾತ್ರ ಸಾವಿರಾರು ಜನ ಸೇರಿದ್ದರು. ಅಷ್ಟೇ ಅಲ್ಲದೇ, ಮಂಡ್ಯದಲ್ಲಿ ದೇವೇಗೌಡರು ನಾಮಪತ್ರ ಸಲ್ಲಿಕೆಗೆ ಅಕ್ಕಪಕ್ಕದ ಜಿಲ್ಲೆಯಿಂದ ಜನ ಕರೆದುಕೊಂಡು ಬಂದು ಗಬ್ಬೆಬ್ಬಿಸಿದ್ರು ಎಂದು ಮೂದಲಿಸಿದರು.
ದೇವೇಗೌಡರ ಮೇಲೆ ಜನರು ಅಸಹ್ಯ ಪಡುವಂತ ವಾತಾವರಣ ಸೃಷ್ಟಿಯಾಗಿದೆ. ದೇವೇಗೌಡರ ಕುಟುಂಬ ರಾಜಕಾರಣ ಸ್ವತಃ ಜೆಡಿಎಸ್ ಮುಖಂಡರಿಗೇ ಮುಜುಗರ ತಂದಿದೆ. ಕಾಂಗ್ರೆಸ್ ಮತ್ತು ದಳದವರು ಅರ್ಥಮೆಟಿಕ್ ರೀತಿಯಲ್ಲಿ ಒಂದಾಗಿಲ್ಲ. ಈ ಬಾರಿ ಖಂಡಿತವಾಗಿ 40 ರಿಂದ 50 ಸಾವಿರ ಅಂತರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜ್ ಗೆಲ್ಲುತ್ತಾರೆ ಎಂದರು.