ETV Bharat / state

ತುಮಕೂರು ಜೆಡಿಎಸ್​​​ ಕಚೇರಿಯಲ್ಲಿ ಸರಳವಾಗಿ ದೇವೇಗೌಡರ ಹುಟ್ಟುಹಬ್ಬ ಆಚರಣೆ - Corona Warriors

ಮಾಜಿ ಪ್ರಧಾನಿ ದೇವೇಗೌಡರ 88ನೇ ಹುಟ್ಟುಹಬ್ಬವನ್ನು ರಾಜ್ಯದ ಎಲ್ಲಾ ಜೆಡಿಎಸ್ ಕಚೇರಿಗಳಲ್ಲೂ ಆಚರಿಸಲಾಗಿದೆ. ಕೊರೊನಾ ಲಾಕ್​ಡೌನ್​ ನಡುವೆ ಸರಳವಾಗಿ ಆಚರಣೆ ಮಾಡುವಂತೆ ಸ್ವತಃ ದೇವೇಗೌಡರೇ ಕಾರ್ಯಕರ್ತರಿಗೆ ಕರೆ ನೀಡಿದ್ದರು.

Deve Gowda's birthday celebrated at Tumkur JDS office
ತುಮಕೂರು ಜೆಡಿಎಸ್​ ಕಚೇರಿಯಲ್ಲಿ ಸರಳವಾಗಿ ಆಚರಿಸಿದ ದೇವೇಗೌಡರ ಹುಟ್ಟುಹಬ್ಬ
author img

By

Published : May 18, 2020, 5:15 PM IST

ತುಮಕೂರು: ಮಾಜಿ ಪ್ರಧಾನಿ ದೇವೇಗೌಡರ 88ನೇ ಹುಟ್ಟುಹಬ್ಬವನ್ನು ಜಿಲ್ಲಾ ಜೆಡಿಎಸ್ ಕಚೇರಿ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು. ಕೊರೊನಾ ವಾರಿಯರ್ಸ್​​ಗೆ ಸನ್ಮಾನ ಮಾಡಿ ದಿನಸಿ ಕಿಟ್​ಗಳನ್ನು ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ.

ಅಲ್ಲದೆ ಇದೇ ವೇಳೆ ಬೃಹತ್ ಕೇಕ್ ಕೂಡ ಕತ್ತರಿಸಲಾಯಿತು. ಹುಟ್ಟುಹಬ್ಬ ಆಚರಿಸಲು ಖರ್ಚು ಮಾಡುವಂತಹ ಹಣವನ್ನು ಕೊರೊನಾ ವಾರಿಯರ್ಸ್ ಮತ್ತು ನಿರ್ಗತಿಕರ ನೆರವಿಗೆ ಬಳಸುವಂತೆ ಮಾಜಿ ಪ್ರಧಾನಿ ದೇವೇಗೌಡರು ಸಂದೇಶ ಕಳುಹಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿನ ಆಶಾ ಕಾರ್ಯಕರ್ತೆಯರು, ವೈದ್ಯಕೀಯ ಸಿಬ್ಬಂದಿಗೆ ನೆರವಾಗುತ್ತಿದ್ದೇವೆ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಶಾಸಕ ಗೌರಿಶಂಕರ್ ತಿಳಿಸಿದರು.

ಹುಟ್ಟುಹಬ್ಬವನ್ನು ಹತ್ತು ಸಾವಿರ ಜನರ ಸಮ್ಮುಖದಲ್ಲಿ ಆಚರಿಸಬೇಕೆಂದಿದ್ದೆವು. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆ ಕೇವಲ 250 ಜನರಿಗೆ ಸೀಮಿತಗೊಳಿಸಲಾಗಿತ್ತು. ಅಲ್ಲದೆ ಸರ್ಕಾರದ ಆದೇಶಗಳನ್ನು ಪಾಲನೆ ಮಾಡಬೇಕಿದೆ ಎಂದು ಇದೇ ವೇಳೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕೇಕ್​​ ಕತ್ತರಿಸಿ ನೆರೆದಿದ್ದವರಿಗೆ ಹಂಚಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.