ETV Bharat / state

ದೀಪಾವಳಿ ಟೈಮಲ್ಲೇ ಬರ್ತಾನೆ ವಿಘ್ನವಿನಾಶಕ: ಗೂಳೂರಿನ ಜನರಿಗೆ ಡಬಲ್ ಧಮಾಕ

ಬಹಳ ವರ್ಷಗಳ ಹಿಂದೆ ಭೃಗು ಮಹರ್ಷಿಗಳು ಈ ಭಾಗದಲ್ಲಿ ಸಂಚಾರ ನಡೆಸುತ್ತಿದ್ದಾಗ ಇಲ್ಲಿ ಮೂರು ತಿಂಗಳ ಕಾಲ ತಪೋನುಷ್ಠಾನ ಕೈಗೊಂಡಿದ್ದರಂತೆ. ಆದ್ರೆ, ಅವರ ತಪಸ್ಸು ಪೂರ್ಣಗೊಳ್ಳುವ ವೇಳೆಗೆ ಚೌತಿ ಮುಗಿದು ದೀಪಾವಳಿ ಸಮಯ ಬಂದಿತ್ತಂತೆ.

guluru ganesha
ಗೂಳೂರು ಗಣೇಶ
author img

By

Published : Nov 5, 2021, 7:43 PM IST

ತುಮಕೂರು: ರಾಜ್ಯಾದ್ಯಂತ ಜನರು ಬೆಳಕಿನ ಹಬ್ಬದ ಸಂಭ್ರಮದಲ್ಲಿದ್ದರೆ, ತಾಲೂಕಿನ ಗೂಳೂರು ಗ್ರಾಮಸ್ಥರು ದೀಪಾವಳಿ ಸಮಯದಲ್ಲಿ ಗಣೇಶನ ಹಬ್ಬವನ್ನೂ ಆಚರಿಸಿ ಗಮನ ಸೆಳೆದಿದ್ದಾರೆ.

ಜಿಲ್ಲೆಯ ಗೂಳೂರು ಗಣಪತಿಗೆ ಇಲ್ಲಿ ಅನೇಕ ವಿಶೇಷತೆಗಳಿವೆ. ಭೃಗು ಮಹರ್ಷಿಯಿಂದ ಪೂಜಿಸಲ್ಪಟ್ಟ ಗಣಪತಿಗೆ ಇಲ್ಲಿ ವಿಶೇಷ ಆರಾಧನೆ ನಡೆಯುತ್ತದೆ. ದೀಪದಿಂದ ದೀಪ ಹಚ್ಚಿ ಶುಭ್ರ ಮನಸ್ಸಿನೊಂದಿಗೆ ಬೆಳಕಿನ ಹಬ್ಬ ಆಚರಣೆಯಲ್ಲಿ ಇಡೀ ರಾಜ್ಯದ ಜನರು ತಲ್ಲೀನರಾಗಿರುತ್ತಾರೆ. ಆದ್ರೆ, ಗೂಳೂರಿನಲ್ಲಿ ಮಾತ್ರ ಬಲಿಪಾಡ್ಯ ಹಬ್ಬದ ಸಂಭ್ರಮದಲ್ಲಿ ವಿಘ್ನ ವಿನಾಶಕ ಪ್ರವೇಶ ಕೊಡುತ್ತಾನೆ.

ಗಣೇಶನ ಹಬ್ಬದ ಸಂಭ್ರಮದಲ್ಲಿ ಗೂಳೂರಿನ ಜನ

ಗಣೇಶ ಚತುರ್ಥಿಯಂದು ಪುಟ್ಟದಾದ ವಿಘ್ನೇಶನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ನೈವೇದ್ಯವನ್ನಿರಿಸಿ ವಿಧಿ ವಿಧಾನದಂತೆ ವಿಗ್ರಹಕ್ಕೆ ಪೂಜೆ ಮಾಡಲಾಗುತ್ತದೆ. ಅನಂತರ ಗ್ರಾಮದ 18 ಸಮುದಾಯದ ಜನರು ಕೆರೆಯಿಂದ ಮಣ್ಣು ತಂದು ವಿನಾಯಕನ ವಿಗ್ರಹ ಮಾಡಲು ಪ್ರಾರಂಭಿಸುತ್ತಾರೆ. ಮೂರು ತಿಂಗಳ ಕಾಲ ನಿರಂತರವಾಗಿ 18 ಅಡಿ ಎತ್ತರ ಹಾಗೂ 18 ಅಡಿ ಅಗಲದ ಗಜಗಣಪತಿ ವಿಗ್ರಹವನ್ನು ತಯಾರಿಸುತ್ತಾರೆ. ದೀಪಾವಳಿಯಂದು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ.

ಈಗಿನ ಗೂಳೂರು ಹಿಂದೆ ಗೂಳಿಊರು ಎಂದೇ ಪ್ರಸಿದ್ದಿಯಾಗಿತ್ತಂತೆ. ಬಹಳ ವರ್ಷಗಳ ಹಿಂದೆ ಭೃಗು ಮಹರ್ಷಿಗಳು ಈ ಭಾಗದಲ್ಲಿ ಸಂಚಾರ ನಡೆಸುತ್ತಿದ್ದಾಗ ಇಲ್ಲಿ ಮೂರು ತಿಂಗಳ ಕಾಲ ತಪೋನುಷ್ಠಾನ ಕೈಗೊಂಡಿದ್ದರಂತೆ. ಆದ್ರೆ, ಅವರ ತಪಸ್ಸು ಪೂರ್ಣಗೊಳ್ಳುವ ವೇಳೆಗೆ ಚೌತಿ ಮುಗಿದು ದೀಪಾವಳಿ ಸಮಯ ಬಂದಿತ್ತಂತೆ. ಹೀಗಾಗಿ, ದೀಪಾವಳಿಯ ದಿನದಂದೇ ಗ್ರಾಮದ ಜನರನ್ನು ಒಗ್ಗೂಡಿಸಿ ಗಣಪತಿ ಪ್ರತಿಷ್ಠಾಪನೆ ಮಾಡಿ ಪೂಜಿಸಿದ್ರಂತೆ. ಅಂದಿನಿಂದ ಈವರೆಗೂ ಈ ಪದ್ಧತಿ ಮುಂದುವರೆದುಕೊಂಡು ಬಂದಿದೆ.

ಒಂದು ತಿಂಗಳ ಕಾಲ ನಿರಂತರವಾಗಿ ವಿವಿಧ ಪೂಜೆ ಸಲ್ಲಿಸಲಾಗುತ್ತದೆ. ಗಣಪತಿಯನ್ನು ಗೂಳೂರು ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತದೆ. ದೀಪಾವಳಿಯಂದು ದೀಪ ಹಚ್ಚುವ ಜೊತೆಗೆ ಗಣಪತಿ ಪೂಜೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ಸಂತಸ ತಂದಿದೆ ಎನ್ನುತ್ತಾರೆ ಗ್ರಾಮಸ್ಥರು.

ಇದನ್ನೂ ಓದಿ: ಪಟಾಕಿ ಖರೀದಿಸುವ ದುಡ್ಡಲ್ಲಿ ಪುಸ್ತಕ ಕೊಂಡು ಸ್ನೇಹಿತರಿಗೆ ವಿತರಿಸಿದ ವಿದ್ಯಾರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.