ತುಮಕೂರು: ಅಪಘಾತಕ್ಕೆ ಒಳಗಾಗಿ ರಸ್ತೆ ಮಧ್ಯೆ ಸಾವು-ಬದುಕಿನ ನಡುವೆ ಒದ್ದಾಡುತ್ತಿದ್ದ ಮಹಿಳೆ ಹಾಗೂ ಪುರುಷನನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೆರವಾಗಿದ್ದಾರೆ.
ಕುಣಿಗಲ್ ತಾಲೂಕಿನ ಚಿಕ್ಕಕೆರೆ ಗ್ರಾಮದ ಸಮೀಪ ಹೆದ್ದಾರಿಯಲ್ಲಿ ಅಪಘಾತಕ್ಕೆ ಒಳಗಾಗಿದ್ದ ಇಬ್ಬರನ್ನು ಕಂಡ ಡಿಕೆಶಿ ಗಾಯಗೊಂಡವರನ್ನು ಸಂತೈಸಿ ತಕ್ಷಣ ತಮ್ಮ ಕಾರು ಹಾಗೂ ಆಟೋವೊಂದರಲ್ಲಿ ಆಸ್ಪತ್ರೆಗೆ ಕಳುಹಿಸಿ ಕೊಟ್ಟರು. ಅಲ್ಲದೆ ಗಾಯಾಳುಗಳನ್ನು ಚಿಕಿತ್ಸೆಗೆ ಕರೆದುಕೊಂಡು ಹೋದ ಆಟೋ ಚಾಲಕನಿಗೆ ತಾವೇ ಹಣವನ್ನು ನೀಡಿದ್ದಾರೆ.
ಸ್ವತಃ ವೈದ್ಯರಾಗಿರೋ ಕುಣಿಗಲ್ ಶಾಸಕ ಡಾ. ರಂಗನಾಥ್ ಕೂಡ ಗಾಯಾಳುಗಳಿಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ: ವಜುಬಾಯಿ ವಾಲಾ ಭೇಟಿಯಾಗಲಿರುವ ಸಿಎಂ ಬಿಎಸ್‌ವೈ, ಸಿದ್ದರಾಮಯ್ಯ