ತುಮಕೂರು: ಜಿಲ್ಲೆಯಲ್ಲಿ ಇಂದು 3640 ಮಂದಿ ಕೋವಿಡ್ ವ್ಯಾಕ್ಸಿನ್ ಪಡೆದಿದ್ದಾರೆ. 4549 ಮಂದಿ ವ್ಯಾಕ್ಸಿನ್ ಪಡೆಯಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಶೇಕಡಾ 80ರಷ್ಟು ವ್ಯಾಕ್ಸಿನ್ ನೀಡಲಾಗಿದೆ.
ಜಿಲ್ಲೆಯ 132 ಘಟಕಗಳಲ್ಲಿ ವ್ಯಾಕ್ಸಿನ್ ನೀಡಲಾಯಿತು. ತಿಪಟೂರು ತಾಲೂಕಿನಲ್ಲಿ ಅತೀ ಹೆಚ್ಚು ಶೇಕಡ 90ರಷ್ಟು ವ್ಯಾಕ್ಸಿನ್ ನೀಡಲಾಗಿದೆ. ಇಲ್ಲಿ 669 ಜನ ಹೆಸರು ನೋಂದಾಯಿಸಿಕೊಂಡಿದ್ದರು, ಅವರಲ್ಲಿ 602 ಮಂದಿ ವ್ಯಾಕ್ಸಿನ್ ಪಡೆದಿದ್ದಾರೆ. ಶಿರಾ ತಾಲೂಕಿನಲ್ಲಿ ನೋಂದಾಯಿಸಿಕೊಂಡಿದ್ದ 477 ಮಂದಿಯ ಪೈಕಿ 420 ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ. ಕುಣಿಗಲ್ ತಾಲೂಕಿನಲ್ಲಿ 479 ಮಂದಿಯ ಪೈಕಿ 420 ಮಂದಿ ವ್ಯಾಕ್ಸಿನ್ ಪಡೆದಿದ್ದಾರೆ. ಇನ್ನು ಮಧುಗಿರಿ ತಾಲೂಕಿನಲ್ಲಿ 495 ಮಂದಿಯ ಪೈಕಿ 408 ಮಂದಿಗೆ ಕೊವಿಶೀಲ್ಡ್ ವ್ಯಾಕ್ಸಿನ್ ನೀಡಲಾಗಿದೆ. ಕೊರಟಗೆರೆ ತಾಲೂಕಿನಲ್ಲಿ 368 ಮಂದಿ ಪೈಕಿ 295 ಮಂದಿ ವ್ಯಾಕ್ಸಿನ್ ಪಡೆದಿದ್ದಾರೆ.
ಜಿಲ್ಲೆಯಲ್ಲಿ ಎರಡನೇ ದಿನವಾದ ಇಂದು ವ್ಯಾಕ್ಸಿನ್ ಪಡೆದವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.